ಬೆಂಗಳೂರು
ಬಸ್‍ನ ಚಾಲಕನ ಸಮಯಪ್ರಜ್ಞೆಯಿಂದ ನಗರದ ಹೊರವಲಯದ ಆನೇಕಲ್-ಚಂದಾಪುರ ಮಾರ್ಗಮಧ್ಯೆ ಮರಸೂರು ಗೇಟ್ ಬಳಿ ಭಾರಿ ಅಪಘಾತವೊಂದು ತಪ್ಪಿ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಎಂಟಿಸಿ ಬಸ್ ಆನೇಕಲ್‍ನಿಂದ ಕಲಾಸಿಪಾಳ್ಯ ಕಡೆ ಹೋಗುತ್ತಿದ್ದಾಗ ಎದುರಿನಿಂದ ಅತಿ ವೇಗವಾಗಿ ಲಾರಿ ಬರುತ್ತಿರುವುದನ್ನು ಗಮನಿಸಿದ ಚಾಲಕ ಮೌನೇಶ್ ಚಾಣಾಕ್ಷತನದಿಂದ ಬಸ್‍ನ್ನು ಎಡಗಡೆ ಯು ತೆಗೆದುಕೊಳ್ಳುವ ಮೂಲಕ ಭಾರಿ ಅಪಘಾತವನ್ನು ತಪ್ಪಿಸಿದ್ದಾರೆ.
ಆದರೂ ಕೂಡ ಲಾರಿ ಬಸ್‍ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದು ಬಸ್ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ
ಬಸ್ಸಿನ ಒಂದು ಬದಿಗೆ ಡಿಕ್ಕಿ ಹೊಡೆದ ಚಾಲಕ ಲಾರಿಯನ್ನು ನಿಲ್ಲಿಸದೇ ಹಾಗೆಯೇ ಪರಾರಿಯಾಗಿದ್ದ. ಬಸ್‍ನಲ್ಲಿ ಸುಮಾರು 50 ಪ್ರಯಾಣಿಕರಿದ್ದರು . ಅದೃಷ್ಟವಶಾತ್ ಅಪಾಯಾದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ತಕ್ಷಣದ ಹತ್ತಿರದ ಸೂರ್ಯಸಿಟಿ ಪೆಲೀಸರಿಗೆ ಬಸ್ ಚಾಲಕ ಮೌನೇಶ್ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕಾಗಮಿಸಿದ ಸೂರ್ಯಾಸಿಟಿ ಪೆಲೀಸರು ಪರಿಶೀಲಿಸಿ ಆನೇಕಲ್ ಕಡೆಗೆ ಹೊರಟಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಲಾರಿ ಚಾಲಕ ಕುಡಿದ ಅಮಲಿನಲ್ಲಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆನೇಕಲ್ ಪೆಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
