ಬೆಂಗಳೂರು:
ಬಿಜೆಪಿಯಿಂದ ಕೋಟ್ಯಂತರ ರೂ. ಹಣ ಪಡೆದಿರುವ ನಮ್ಮ ಪಕ್ಷದ ಕೆಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡೋಡಿ ಹೋಗುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ನಮ್ಮ ಕೆಲ ಶಾಸಕರಿಗೆ 20, 30 ಹಾಗೂ 40 ಕೋಟಿ ರೂ. ಹಣ ನೀಡಿದ್ದಾರೆ.ಈ ಎಲ್ಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡಾ ಡುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ರಮೇಶ ಜಾರಕಿಹೊಳಿ ಕಾಲೆಳೆದರು.
ಬಿಜೆಪಿಯವರು ನಮಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ.ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದೇನೆ .ಮೋದಿ ಅವರ ಅಚ್ಛೆ ದಿನವೂ ಬರಲಿಲ್ಲ,15ಲಕ್ಷ ಅಕೌಂಟಿಗೂ ಬರಲಿಲ್ಲ.ಅವರ ಅವಧಿಯಲ್ಲಿ 10ಲಕ್ಷ ಸೂಟ್ ಬೂಟ್ ಹಾಕಿಕೊಂಡು ವಿದೇಶದಲ್ಲಿ ಓಡಾಡಿದ್ದಾರೆ ಎಂದು ದೂರಿದರು.