ಪಾವಗಡ
ಪುರಸಭಾ ಕಾರ್ಯಾಲಯದಿಂದ ಮಂಗಳವಾರ ಮತದಾನ ಜಾಗ್ರತಿ ಅಭಿಯಾನ ಅಂಗವಾಗಿ ಬೈಕ್ ರ್ಯಾಲಿಯನ್ನು ಆರಂಭಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮುಖ್ಯಾಧಿಕಾರಿ ಎಸ್.ಪ್ರಸಾದ್, ರ್ಯಾಲಿಗೆ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕ ಷಂಷುದ್ದೀನ್, ಕಂದಾಯ ನಿರೀಕ್ಷಕ ನಾಗಭೂಷಣ್, ಪ್ರಥಮ ದರ್ಜೆ ಗುಮಾಸ್ತ ತಿಪ್ಪೆಸ್ವಾಮಿ, ವೇಣು ಗೋಪಾಲ್, ರಿಜ್ವಾನ್, ಶಿವಕುಮಾರ್, ರಿಯಾಜ್ ಮತ್ತಿತರರು ಭಾಗವಹಿಸಿದ್ದರು.