ತುಮಕೂರು
ಈಗಿನ ಕಾಲದಲ್ಲಿ ರಾಜಕಾರಣಿಗಳು ಯಾರೂ ಸಮಾಜದ ಪರವಾಗಿ ಕೆಲಸ ಮಾಡುತ್ತಿಲ್ಲ. ಎಲ್ಲರೂ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಾರೆ. ನಾವು ಹಿಂದುಳಿದ ವರ್ಗದವರು, ಶೋಷಿತರು ಎಂದು ಹೇಳಿಕೊಳ್ಳುತ್ತಾರೆ. ಒಂದು ಜಾತಿಯವರು ಬೇರೊಂದು ಜಾತಿಯವರನ್ನು ಕೀಳಾಗಿ ಕಂಡರೆ ಅವರು ನಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ತನ್ನದೆ ಜಾತಿಯವನು ತನ್ನದೆ ಜಾತಿಯವನನ್ನು ಶೋಷಿದರೆ ಅದು ಶೋಷಣೆಯಾಗುವುದಿಲ್ಲವೇ.
ಶೋಷಣೆ ಕೇವಲ ಜಾತಿಗಳಿಗೆ ಸೀಮಿತವಾಗಿರುವುದು ಒಂದು ಶೋಚನೀಯ ಸಂಗತಿಯಾಗಿದೆ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷದರಾದ ಶ್ರೀ ವೀರೇಶನಂದ ಸರಸ್ವತಿ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.ನಗರದಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ವಿಶೇಷ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಪ್ರವಚ ನೀಡುತ್ತಾ ಮಾತನಾಡಿದ ಅವರು ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ನಿಮ್ಮ ಮನೆಯಲ್ಲಿ ಒಂದು ಲೋಟ ನೀರನ್ನು ಪಡೆದುಕೊಂಡನ್ನು ನೆನೆಯುತ್ತೇವೆ. ನಾವು ಸತ್ತ ಮೇಲೂ ಜನ ನಮ್ಮನ್ನು ನೆನೆಪಿಕೊಳ್ಳ ಬೇಕು ಎಂದರೆ ನಾವು ಮೌಲ್ಯಯುತವಾಗಿ ಬದುಕನ್ನು ನೆಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಜಕಾರಣಿಗಳು ಹಿಂದುಳದ ವರ್ಗಗಳ ಹಿಂದೆ ಹೋಗುವ ಬದಲು ಸಮಾಜದ ಅಭಿವೃದ್ಧಿಯ ಶ್ರಮಿಸಬೇಕು ಆಗ ಸಮಾಜ ಅಭಿವೃದ್ಧಿಯಾಗುತ್ತದೆ. ಮನುಷ್ಯನ ದೇಹಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಮನುಷ್ಯನ ಮನಸ್ಸಿಗೆ ಚಿಕಿತ್ಸೆ ಮಾಡಬೇಕು. ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದಾಗ ಬೇಕು ಎಂದರು.
ವಿದ್ಯಾರ್ಥಿಗಳು ಮತ್ತು ಪೋಷಕರು ನನಗೆ ತುಂಬಾ ಮುಖ್ಯ, ತುಂಬಾ ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ ಆದರೆ ನನಗೆ ಮಕ್ಕಳ ಕಾರ್ಯಕ್ರಮಗಳು ಎಂದರೆ ತುಂಬಾ ಅಚ್ಚುಮೆಚ್ಚು. ದೇವರು ನಮಗೆ ಏನು ಕೊಟ್ಟಿದ್ದಾನೆ ಎಂದು ಕೆಲವರು ಪ್ರಶ್ನೆಮಾಡುತ್ತಾರೆ. ಅದಕ್ಕೆ ಉತ್ತರ ತುಂಬಾ ಸಂಕ್ಷೀಪ್ತಗಿದೆ. ದೇವರು ನಮಗಾಗಿ ಮನುಷ್ಯ ಜನ್ಮವನ್ನು ನೀಡಿದ್ದಾನೆ. ಈ ಪ್ರಕೃತಿಯನ್ನು ಅನುಭವಿಸುವ ಆನಂದಿಸುವ, ಆಡಳಿತ ನೆಡೆಸುವ ಮತ್ತು ಅದನ್ನು ಕಾಪಾಡುವ ಶಕ್ತಿಯನ್ನು ನಮಗೆ ನೀಡಿದ್ದಾನೆ. ಅಷ್ಟು ಸಾಕಲ್ಲವೇ ನಾವು ಆನಂದವಾಗಿ ಜೀವನವನ್ನು ನಡೆಸಲು.
ಕಳ್ಳನಾಗಬೇಕು ಎಂದರೆ ಒಂದು ವಸ್ತುವನ್ನು ಕಳವು ಮಾಡಬೇಕಾಗಿಲ್ಲ , ಒಂದು ವಸುವನ್ನು ನೋಡಿ ಆದನ್ನು ಕಳವು ಮಾಡಿದರೆ ಚನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುವುದು ಕಳ್ಳತನವೇ. ಧರ್ಮವೆಂದರೆ ಯಾವುದೇ ಮನುಷ್ಯನನ್ನು ಶಾರೀರಿಕವಾಗಿ ಮಾನಸಿಕವಾಗಿ ಮೌಲ್ಯಯುತವಾಗಿ ಜೀವನ ನೆಡೆಸಲು ಮಾರ್ಗದರ್ಶನ ನೀಡುವುದೇ ಧರ್ಮ. ನಿಮ್ಮ ಪರಿಶ್ರಮಕ್ಕೆ, ಕಾರ್ಯಕ್ಕೆ ನಿಮಗೆ ಯಾವ ಸ್ಥಾನಸಿಗಬೇಕೋ ಆ ಸ್ಥಾನವನ್ನು ತಪ್ಪಪಿಸಲು ದೇವರಿಂದಲು ಸಾಧ್ಯವಿಲ್ಲ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ನಿಜವಾದ ಶಿಕ್ಷಣ ದೊರೆಯುವು ಪದವಿಯನ್ನು ಮುಗಿಸಿ ಹೊರಬಂದಾಗ ಮಾತ್ರ ಎಂದು ಹೆಳಿದರು.
ತಂದೆ-ತಾಯಿಗಳು, ಪೋಲೀಸರು, ವಾರ್ಡನ್‍ಗಳು ನಿಮ್ಮನ್ನು ಕಾಯಲು ಸಾಧ್ಯವಿಲ್ಲ. ನಿಮ್ಮ ಪೋಷಕರು ನಿಮ್ಮ ಬಗ್ಗೆ ಅನುಮಾನ ಪಡುತ್ತಿದ್ದಾರೆ ಎಂದರೆ ನಿಮ್ಮ ಅಳಿವು ಪ್ರಾರಂಭವಾಗಿದೆ ಎಂದರ್ಥ. ಅನ್ಯಾಯದ ದಾರಿಯಲ್ಲಿ ಗೆಲ್ಲುವುದಕಿಂತ ನ್ಯಾಯದ ದಾರಿಯಲ್ಲಿ ಸೋಲುವುದೇ ಒಳ್ಳೆಯದು. ನಿಮ್ಮ ಗುರುಗಳು ಪುಸ್ತಕದಲ್ಲಿರುವುದನ್ನು ಭೋದಿಸಬಹುದು ಅದನ್ನು ಅರ್ಥಮಾಡಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಾದವರು ನೀವೆ. ನೀವು ನಿಮಗಾಗಿ ಬದುಕಿ, ಬೇರೆಯವರಿಗಾಗಿ ಬದುಕಬೇಡಿ. ಪ್ರಪಂಚವನ್ನು ನೀನು ಬದಲಾಗಿಸಬೇಡ ಮೊದಲು ನಿನ್ನನ್ನು ನೀನು ಬದಲಾಯಿಸಿಕೊ ಹಾಗ ಸಮಾಜವು ಬದಾಗುತ್ತದೆ. ನಿಮ್ಮ ಯೋಗ್ಯತೆ ಮತ್ತು ತಾಕತ್ತು ನಿಮ್ಮ ಪರಿಶ್ರಮದಿಂದ ಸಾಧ್ಯವಾಗುತ್ತದೆ. ಹೂವಿನಲ್ಲಿ ಹೇಗೆ ಪರಿಣಾಮವಿರುತ್ತದೆಯೋ ಹಾಗೆ ಮನುಷ್ಯನಲ್ಲೂ ವ್ಯಕ್ತಿತ್ವದ ಪರಿಮಳವಿರಬೇಕು ಹಾಗ ಮಾತ್ರ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ.ವಿ ರವಿಕುಮಾರ್ ಮಾತನಾಡಿ ನಾವು ಸಮಾಜ ನಮ್ಮನ್ನು ತಿದ್ದುತ್ತದೆ. ನಿಮ್ಮ ಬಿಡುವಿನ ವೇಳೆಯಲ್ಲಿ ರಾಮಕೃಷ್ಣ ಆಶ್ರಮಕ್ಕೆ ಹೋಗಿ ಸ್ವಾಮೀಜಿಯವನ್ನು ಬೇಡಿ ನೀಡಿ ಅವರೊಂದಿಗೆ ಉತ್ತಮ ವಿಷಯಗಳ ಕುರಿತು ಚರ್ಚೆಮಾಡಿ ಚಿಕ್ಕ,ಚಿಕ್ಕ ಸಮಯದದಲ್ಲಿ ಒಳ್ಳೆಯ ವಿಚಾರಗಳನ್ನು ತಿಳಿದುಕೊಂಡು ಬೇರೆಯವರಿಗೆ ಬುದ್ಧಿ ಹೇಳಿ ಅವರು ನಿಮಗೆ ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಗೌರವ ನೀಡುತ್ತಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳಾ ರವಿಶಂಕರ್ ತಾಲ್ಲೂಕು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು, ವನಿತ ಮಂಡಳಿ ಅಧ್ಯಕ್ಷೆ ಸರೋಜ ರಾಜು ಮತ್ತು ಸಂಘದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
