ಹಾನಗಲ್ಲ :
ಮತದಾನ ಜಾಗೃತಿಗಾಗಿ ಹಾನಗಲ್ಲ ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರು ಗ್ರಾಮಸ್ಥರನ್ನೊಳಗೊಂಡು ಬೈಕ್ ರ್ಯಾಲಿ ಮೂಲಕ ಗ್ರಾಮದಲ್ಲಿ ಮತದಾನ ಜಾಗೃತಿ ಮೂಡಿಸಿದರು.
ಮುಖ್ಯ ಶಿಕ್ಷಕ ಎಸ್.ವಿ.ಹೊಸಮನಿ ಅವರ ನೇತೃತ್ವದಲ್ಲಿ ನಡೆದ್ ಬೈಕ್ ರ್ಯಾಲಿ ಗ್ರಾಮದಲ್ಲಿ ಗಮನಸೆಳೆಯಿತು. ಚುನಾವಣಾ ಆಯೋಗದ ಸೂಚನೆಯಂತೆ ಮತದಾನ ಜಾಗೃತಿಗಾಗಿ ಹತ್ತು ಹಲವು ಕಾರ್ಯಕ್ರಮ ಕೈಗೊಂಡಿರುವ ಈ ಪ್ರಾಥಮಿಕ ಶಾಲೆ ತಾಲೂಕಿನಲ್ಲಿಯೇ ಗಮನ ಸೆಳೆದಿದೆ. ಗ್ರಾಮಸ್ಥರಾದ ಹನುಮಂತಪ್ಪ ಚಿಕ್ಕಾಂಶೀ, ಶಂಕ್ರಪ್ಪ ತೆಪ್ಪದ, ಲಕ್ಷ್ಮಣ ಉಪ್ಪಣಸಿ, ರಂಗನಾಥ ಕೊಂಡೋಜಿ, ರಾಮಣ್ಣ ಗಂಗನವರ, ಗದಿಗೆಪ್ಪ ಮಣ್ಣಮ್ಮನವರ, ರಾಜೂ ಆಲೂರ, ಬಸವರಾಜ ಚಲವಾದಿ ಹಾಗೂ ಶಿಕ್ಷಕರಾದ ಎಸ್.ಎನ್.ಗಡಿಯಣ್ಣನವರ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ