ಬೈಕ್ ಕಳ್ಳರ ಬಂಧನ…!!!

ಬೆಂಗಳೂರು

      ಮೋಜು ದುಶ್ಚಟಗಳಿಗಾಗಿ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು 55 ದ್ವಿಚಕ್ರವಾಹನಗಳು ಆಟೋವೊಂದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

      ತುಮಕೂರಿನ ಉಪ್ಪಾರಹಳ್ಳಿಯ ದಿನೇಶ್ ಅಲಿಯಾಸ್ ಹಾವು (31), ಹಾಸನದ ಶಂಕರಮಠದ ಫೈಜ್ ಶರೀಫ್ (21), ತಾವರೆಕೆರೆಯ ಸೀಗೆಹಳ್ಳಿ ಗೇಟ್‍ನ ಮಹೇಶ್ ಅಲಿಯಾಸ್ ಮಚ್ಚಿ (24), ಬನ್ನೇರುಘಟ್ಟ ಸರ್ಕಲ್‍ನ ಪ್ರವೀಣ್‍ಕುಮಾರ್ (32) ಬಂಧಿತ ಆರೋಪಿಗಳಾಗಿದ್ದಾರೆ.

      ಬಂಧಿತರಿಂದ 27.68 ಲಕ್ಷ ರೂ. ಮೌಲ್ಯದ ಹೊಂಡಾ ಆಕ್ಟೀವಾ, ಡಿಯೋ, ಹೀರೋ ಹೊಂಡ ಸೇರಿದಂತೆ, 55 ದ್ವಿಚಕ್ರ ವಾಹನಗಳು, ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ.

      ತುಮಕೂರು ಮೂಲದ ಆರೋಪಿ ದಿನೇಶ್ ರಾಮನಗರದ ಚಿಕ್ಕಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಮತ್ತೊಬ್ಬ ಆರೋಪಿ ಫೈಜ್ ಶರೀಫ್ ಜೊತೆ ಸೇರಿ, ನಗರದ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದರು.

      ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಇನ್ನಿಬ್ಬರು ಆರೋಪಿಗಳಾದ ಮಹೇಶ್ ಹಾಗೂ ಪ್ರವೀಣ್ ಕುಮಾರ್‍ಗೆ ನೀಡುತ್ತಿದ್ದು, ಅವರಿಬ್ಬರೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದರು.

       ಮಾರಾಟದಿಂದ ಬಂದ ಹಣದಿಂದ ನಾಲ್ವರು ಮೋಜಿನ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳಾದ ದಿನೇಶ್ ಹಾಗೂ ಫೈಜ್ ಶರೀಫ್ ಹಿಂದೆ ಕೂಡ ಬೈಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರವೂ, ದ್ವಿಚಕ್ರ ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ತಿಳಿಸಿದ್ದಾರೆ.

       ಆರೋಪಿಗಳನ್ನು ಬಂಧಿಸಿದ ಮಾಗಡಿ ರಸ್ತೆ ಪೊಲೀಸರ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link