ವೈದ್ಯರ ಮೇಲೆ ಹಲ್ಲೆ ದೌರ್ಜನ್ಯ ನಡೆಸಿದರೆ ಕಠಿಣ ಕ್ರಮ : ಸಿ ಎಂ

ಬೆಂಗಳೂರು

   ವೈದ್ಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.

    ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ವೈದ್ಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ನಡೆಸುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಕಾನೂನುನನ್ನು ಮಾರ್ಪಾಡು ಮಾಡಲಾಗುವುದು ಎಂದರು.

   ವೈದ್ಯರ ಮೇಲಿನ ಹಲ್ಲೆ ನಡೆಸುವ ತಪ್ಪಿತಸ್ಥರ ವಿರುದ್ಧ ಈಗಾಗಲೇ ಕರ್ನಾಟಕದಲ್ಲಿ 2006ನೇ ಸಾಲಿನಲ್ಲಿ ಕಾನೂನು ಒಂದು ತಂದು, ಆರೋಪಿಗಳಿಗೆ ಮೂರು ವರ್ಷ ಜೈಲುವಾಸ ಅಂಶ ಸೇರಿಸಲಾಗಿದೆ. ಮುಂದೆಯೂ, ಈ ಕಾನೂನು ಮಾರ್ಪಾಡು ಮಾಡಿ, ವೈದ್ಯರಿಗೆ ಮತ್ತಷ್ಟು ರಕ್ಷಣೆ ನೀಡಲು ಬದ್ಧ ಎಂದು ತಿಳಿಸಿದರು.

      ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎನ್ನುವುದು ಜನ ಸೇವೆಯ ಕ್ಷೇತ್ರಗಳು. ಇದರಲ್ಲಿ ದಾನಿಗಳ ಪಾತ್ರವೂ ಬಹುಮುಖ್ಯವಾಗಿದೆ ಕಾರವಾರ ಸಮೀಪದ ಮೈದನಿ ಗ್ರಾಮದ 8 ಕಿಲೋ ಮೀಟರ್ ರಸ್ತೆಗೆ ನವೀಕರಣಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಂದಾಗಿದ್ದು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

ದೊಡ್ಡ ದಾನಿ

    ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ ಇನ್ಫೋಸಿಸ್ ಫೌಂಡೇಶನ್‍ನ ಸುಧಾ ಮೂರ್ತಿ ಅವರು ಅತಿದೊಡ್ಡ ದಾನಿಯಾಗಿದ್ದಾರೆ ಸಮಾಜದ ಏಳಿಗೆಗೆಗಾಗಿ ಅವರ ಕೊಡುಗೆ ಅನನ್ಯ ಅವರಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸಂಘ-ಸಂಸ್ಥೆಗಳ ಸಹಕಾರ ದೊರೆತರೆ, ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ನುಡಿದರು.

    ಕುಮಾರಸ್ವಾಮಿ ಅವರನ್ನು ಹೊಗಳು ಹೋಗೋದಿಲ್ಲ. ರೋಗಿಗಳ ಸಂಕಷ್ಟಕ್ಕೆ ಮಿಡಿಯುವ ಮನಸ್ಸು ಮುಖ್ಯಮಂತ್ರಿಗಳಿಗೆ ಇದೆ. ಎಲ್ಲಾ ಖಾಯಿಲೆಯ ಬಗ್ಗೆ ಅರಿತಿರುವ ಕುಮಾರಸ್ವಾಮಿ ಅವರು ರೋಗಿಗಳ ಕಷ್ಟಕ್ಕೆ ಮರಗುತ್ತಾರೆ.ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲೂ ಆಸ್ಪತ್ರೆಗಳನ್ನು ತೆರೆದು, ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.ಉತ್ತರ ಕರ್ನಾಟಕದ ಮಂದಿ ಅಷ್ಟು ದೂರದಿಂದ ಬರುವ ಕಷ್ಟ ಅರಿತ ಮುಖ್ಯಮಂತ್ರಿ ಅಲ್ಲೂ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

     ಸಚಿವ ಇ.ತುಕಾರಾಂ ಮಾತನಾಡಿ, 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನ ಮಾಡಿದ ಏಕೈಕ ಮುಖ್ಯಮಂತ್ರಿ ಎಂದರೆ ಕುಮಾರಸ್ವಾಮಿ.ಇದು ರಾಜಕೀಯ ಭಾಷಣ ಅಲ್ಲ.ಆರೋಗ್ಯ ಸೇವೆಯ ಜೊತೆ ಅನ್ನದಾತರ ಸೇವೆ ಮಾಡುವ ಕೆಲಸ ಎಂದರು.

     ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಕಾಂತ್ರಿಗೆ ಮುಂದಾಗೋಣ.ಆಸ್ಪತ್ರೆಗಳಲ್ಲಿಸಿಬ್ಬಂದಿಗಳ ಕೊರತೆ ನೀಗಿಸಿ, ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.

ಜಾಮೀನು ರಹಿತ ಕೇಸ್

     ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯದೇವ ಆಸ್ಪತ್ರೆ ನಿರ್ದೇಶಕ,ಡಾ.ಸಿ.ಎನ್.ಮಂಜುನಾಥ್ ಅವರು ಮಾತನಾಡಿ ವೈದ್ಯರ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕ್ರಮ ಜರಿಗಿಸಬೇಕು. ಜೊತೆಗೆ ಜಾಮೀನು ರಹಿತ ಮೊಕದ್ದಮೆ ದಾಖಲಿಸಬೇಕು.ಈ ಸಂಬಂಧ ರಾಜ್ಯ ಸರ್ಕಾರ, ಪೆÇಲೀಸ್ ಮಹಾ ನಿರ್ದೇಶಕರು ಸುತ್ತೊಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

     ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ಕಿದ್ವಾಯಿಯಲ್ಲಿ ಈಗಾಗಲೇ 8 ಕೊಠಡಿಗಳಿತ್ತು. ಈಗ 5 ಹೆಚ್ಚಿನ ಕೊಠಡಿಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ.ಹೀಗಾಗಿ, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ.ಜೊತೆಗೆ ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಅವರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link