ಖತರ್ನಾಕ್ ಬೈಕ್ ಕಳ್ಳರ ಬಂಧನ

ಬೆಂಗಳೂರು

     ಕಳವು ಮಾಡಿದ ಬೈಕ್‍ಗಳನ್ನು ಸ್ನೇಹಿತರಿಗೆ ನೀಡಿ ಉದಾರಿಗಳು ಎನ್ನುವ ಫೆÇೀಸ್ ನೀಡಲು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಯಲಹಂಕ ಉಪನಗರ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ದ್ವಿಚಕ್ರ ವಾಹನ ಕಳ್ಳರಾದ ವಿದ್ಯಾರಣ್ಯಪುರದ ನರಸೀಪುರ ಲೇಔಟ್‍ನ ದರ್ಶನ್ (19) ಹಾಗೂ ಬಾಲಾಜಿ ಲೇಔಟ್‍ನ ಲಕ್ಷ್ಮಣ ಅಲಿಯಾಸ್ ಸೀನಾ (20)ನನ್ನು ಬಂಧಿಸಿ 10 ಲಕ್ಷ ಮೌಲ್ಯದ ವಿವಿಧ ಕಂಪನಿಯ 21 ಸ್ಕೂಟರ್, ಬೈಕ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಈಶಾನ್ಯವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

    ಆರೋಪಿಗಳಲ್ಲಿ ಲಕ್ಷ್ಮಣ ಗುಲ್ಬರ್ಗ ಮೂಲದವನಾಗಿದ್ದು, ಟೈಲ್ಸ್ ಕೆಲಸ ಮಾಡುತ್ತಿದ್ದು, ವಿದ್ಯಾರಣ್ಯಪುರದಲ್ಲಿ ಹಿಂದೆ ಬೈಕ್ ಕಳವು ಮಾಡಿ ಜೈಲಿಗೆ ಹೋಗಿ 3 ತಿಂಗಳ ಹಿಂದಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು ಬಾಲಾಜಿ ಲೇಔಟ್‍ನ ತನ್ನ ಮನೆಯ ಬಳಿಯೇ ವಾಸಿಸುತ್ತಿದ್ದ ಮತ್ತೊಬ್ಬ ಆರೋಪಿ ದರ್ಶನ್‍ನನ್ನು ಪರಿಚಯ ಮಾಡಿಕೊಂಡಿದ್ದ ಬೈಕ್ ಕಳವು ಕೃತ್ಯಕ್ಕಿಳಿದಿದ್ದ.ದರ್ಶನ್ ಗ್ಯಾರೇಜ್‍ವೊಂದರಲ್ಲಿ ಮೆಕಾನಿಕ್ ಕೆಲಸ ಮಾಡಿ ಬಿಟ್ಟಿದ್ದರಿಂದ ಬೈಕ್‍ಗಳನ್ನು ಸುಲಭವಾಗಿ ಹ್ಯಾಂಡಲ್ ಲಾಕ್ ತೆಗೆಯುವುದು, ಸ್ಟಾಟ್ ಮಾಡುವುದನ್ನು ಕಲಿತಿದ್ದ.

   ಅದರಿಂದ ಇಬ್ಬರೂ ಸೇರಿ ಆರ್‍ಟಿನಗರ, ಹೆಚ್.ಎಎಲ್, ಬಿಡದಿ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಇನ್ನಿತರ ಕಡೆಗಳಲ್ಲಿ ಮನೆಗಳ ಮುಂಭಾಗ ಹಾಗೂ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ, ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅವುಗಳನ್ನು ಸ್ನೇಹಿತರಿಗೆ ನೀಡಿ ಉದಾರಿಗಳಂತೆ ಫೋಸ್ ಕೊಡುತ್ತಿದ್ದಲ್ಲದೆ ಗಾಂಜಾ ವ್ಯಸನಕ್ಕೂ ಬಳಸುತ್ತಿದ್ದರು. ಯಲಹಂಕ ಉಪನಗರದ ಶ್ಯಾಮರಾಜಪುರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಇವರಿಬ್ಬರನ್ನು ವಾಹನ ತಪಾಸಣೆ ಮಾಡುತ್ತಿದ್ದ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್, ಮತ್ತವರ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.

    ಆರೋಪಿಗಳ ಬಂಧನದಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು, ಹೆಚ್‍ಎಎಲ್, ಬಿಡದಿ, ಆರ್‍ಟಿ ನಗರ ಠಾಣೆಯ ತಲಾ ಒಂದು ದ್ವಿಚಕ್ರ ವಾಹನಗಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ವಾಹನಗಳ ಮಾಲೀಕರಿಗಾಗಿ ಪತ್ತೆ ನಡೆಸಲಾಗಿದೆ ಎಂದು ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link