ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವಸಮಾರಂಭ 2018-19

ಹಾವೇರಿ:

      ಕೆ.ಎಲ್.ಇ. ಸಂಸ್ಥೆಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಹಾವೇರಿಇದರಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಮತ್ತು ವಾರ್ಷಿಕೋತ್ಸ ಸಮಾರಂಭವನ್ನು ದಿನಾಂಕ 30-03-2019 ರ ಶನಿವಾರ ಬೆಳಿಗ್ಗೆ 10-00 ಘಂಟೆಗೆ ಸಂಸ್ಥೆಯಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

      ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಡಾ|| ಕೆ. ಬಿ. ಪ್ರಕಾಶ ಪ್ರಾಚಾರ್ಯರು, ಸರ್ಕಾರಿಇಂಜಿನೀಯರಿಂಗ್ ಮಹಾವಿದ್ಯಾಲಯಹಾವೇರಿಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು,ಸಮಯ ಪ್ರಜ್ಞೆಮತ್ತುಜೀವನದಲ್ಲಿಯಶಸ್ಸು ಗಳಿಸಲು ಆತ್ಮ ವಿಶ್ವಾಸ ಬಹಳ ಪ್ರಾಮುಖ್ಯವೆಂದುವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೆಜೀವನದ ಕೆಲವೊಂದುಅನುಭವದ ಘಟನೆಗಳನ್ನು ವಿವರಿಸಿ ಹಿತನುಡಿಗಳನ್ನು ಹೇಳಿದರು.ಕೆ.ಎಲ್.ಇ. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವೇಧನ್ಯವಂತರುಎಂದು ಈ ಸಮಯದಲ್ಲಿ ತಿಳಿಸಿದರು.

       ಹಳೆಯ ವಿದ್ಯಾರ್ಥಿಗಳಾದ ಶ್ರೀ ಅಮೃತ ಮಠದ, ಶ್ರೀ ಎಚ್. ಎಮ್.ಇಚ್ಚಂಗಿ, ಶ್ರೀಹರೀಶ್‍ಎನ್. ಡಿ, ಮತ್ತುಕುಮಾರ ಬಸವರಾಜಎಮ್.ಎಚ್.ಇವರಿಗೆಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು ಮತ್ತುತಮ್ಮಉದ್ಯೋಗದಅನುಭವವನ್ನು ಹಂಚಿಕೊಂಡರು.

      ಸಮಾರಂಭದ ಸ್ವಾಗತ ಭಾಷಣವನ್ನು ಶ್ರೀಮತಿ ಗೀತಾ ಬಿ.ಕೆ.ಮುಖ್ಯಸ್ಥರು, ಇ&ಸಿ ವಿಭಾಗಇವರು ನಡೆಸಿಕೊಟ್ಟರು.ಅಂತಿಮ ವರ್ಷದಎಲ್ಲ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.ಅಂತಿಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡರು.ಕೊನೆಯಲ್ಲಿ ಪ್ರಾಚಾರ್ಯರಾದ ಶ್ರೀ.ಚನ್ನಪ್ಪ .ಬಿ ಇವರು 2018-19 ರ ವಾರ್ಷಿಕ ವರದಿಯನ್ನು ಮಂಡಿಸಿದರು ಹಾಗೂ ಹಲವಾರುಉಪನ್ಯಾಸಕರು ಹಿತನುಡಿಗಳನ್ನು ನೀಡಿದರು.ವೇದಿಕೆಯ ಮೇಲೆ ಸಾಂಸ್ಕತಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷರಾದ ಶ್ರೀಯುತ ಎ. ಎಫ್.ಚೌಧರಿ ,ಕ್ರೀಡಾಕಾರ್ಯಾಧ್ಯಕ್ಷರಾದ ಶ್ರೀಯುತ ವಿ.ಬಿ.ಕೊಟೆಣ್ಣವರ, ಜಿ.ಎಚ್‍ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಎಲ್. ಆರ್. ಹಿರೇಮಠ ಹಾಗೂ ಕ್ರೀಡಾಮತ್ತುಸಾಂಸ್ಕøತಿಕಕಾರ್ಯದರ್ಶಿಗಳು ಉಪಸ್ಥಿತರಿದ್ದರು.2018-19 ರ ಶೈಕ್ಷಣಿಕಅವಧಿಯಲ್ಲಿ ನಡೆದಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

        ಕೊನೆಯದಾಗಿಸಮಾರಂಭದಅಧ್ಯಕ್ಷರಾದ ಶ್ರೀಯುತ ಪಿ.ಡಿ.ಶಿರೂರ ಅಧ್ಯಕ್ಷರುಆಡಳಿತ ಮಂಡಳಿ ಜಿ.ಎಚ್‍ಕಾಲೇಜ್‍ಇವರುಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಮುಖ್ಯವೆಂದು ಹಾಗೂ ಕಾಲೇಜಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿಉನ್ನತ ಮಟ್ಟಕ್ಕೆಏರಲಿ ಎಂದುಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ದಿವಾಕರಕಮ್ಮಾರವಿಜ್ಞಾನ ವಿಭಾಗದ ಮುಖ್ಯಸ್ಥರು ನಡೆಸಿಕೊಟ್ಟರು.ಅಂತಿಮವಾಗಿ ಶ್ರೀ ಯು.ಎನ್. ಹೊಸಗೌಡ್ರ ಇ&ಸಿ ವಿಭಾಗದಉಪನ್ಯಾಸಕರು ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link