ಹಾನಗಲ್ಲ :
ಮಾನವರಾದ ನಾವು, ದೇವರ ಮುಂದೆ ನಾವು ಯಾರು, ನಮ್ಮ ಸಾಮಥ್ರ್ಯವೇನು ಎಂಬುದನ್ನು ಅರಿತಿರಬೇಕು. ದೇವರು ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿಯನ್ನು ಎಲ್ಲರಿಗೂ ನೀಡಿದ್ದಾನೆ ಅದನ್ನು ಸದುಪಯೋಗಪಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹುಬ್ಬಳ್ಳಿಯ ಅರ್ಸುಲಾಯ್ನ ಪ್ರಾನ್ಸಿಸ್ಕನ್ ಸಂಸ್ಥೆಯ ಆರೋಗ್ಯ ಕ್ಷೇತ್ರ ಸಂಯೋಜಕಿ ಭಗಿನಿ ಅಂಜಲಿನ್ ಸಿಕ್ವೆರಾ ಹೇಳಿದರು.
ಹಾನಗಲ್ಲಿನ ರೋಶನಿ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಜಯಂತಿ ಹಾಗೂ ವ್ಯಸನಮುಕ್ತಿ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇವದ ಆಶ್ರಯದಲ್ಲಿ ನಡೆದ ಕ್ರಿ¸ ರು ನಮಗೆ ವರವಾಗಿ ನೀಡಿರುವ ಜೀವನವನ್ನು ಅರ್ಥ ಮಾಡಿಕೊಂಡು, ಅರ್ಥಪೂಣ್ ಜೀವನ ನಡೆಸುವ ಮೂಲಕ ಜೀವನ ಸಾರ್ಥಕಪಡಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫಾ ಇಸಾಕ್, ದೇವ ಒಬ್ಬ ನಾಮಗಳು ಹಲವು ದುಷ್ಟರನ್ನು ಶಿಕ್ಷಿಸಲು ಸಿಸ್ಟರನ್ನು ರಕ್ಷಿಸಲು ದೇವರು ಜನಿಸಿದರು ಮಾನವ ಹುಟ್ಟುವ ಮೊದಲು ಬರಿ ಸೂನ್ಯ ಮಾನವನ ಜೀವನಕ್ಕೆ ಅರ್ಥ ಸಿಗುವುದು ಈ ಹುಟ್ಟು ಸಾವಿನ ಮದ್ಯ ನೆಡೆಸುವ ಜೀವನದ ಪರಿಯಲ್ಲಿ ಅಡಕವಾಗಿರುತ್ತದೆ ಎಂದರು.
ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಸುಂದರವಾದ ಜಗತ್ತಿನ ಸೃಷ್ಠಿ ದೇವರು ಕೊಟ್ಟ ಕೊಡುಗೆ. ಪ್ರಕೃತಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾನವರಿಗೆ ಎಲ್ಲವನ್ನೂ ನೀಡುತ್ತದೆ. ಆದರೆ ಮನುಷ್ಯ ಇದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ. ತನ್ನ ಇಡೀ ಜೀವನವನ್ನು ವ್ಯಸನಕ್ಕೆ ಬಲಿಯಾಗಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಇಂದು ಯುವ ಸಮುದಾಯ ಮೋಜಿಗೆ ಸಿಲುಕಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಈ ವ್ಯಸನದಿಂದ ಹೊರಬಂದು ಸುಸಂಸ್ಕತ, ಸಧೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಂಗೂರು ಸರಕಾರಿ ಹಿರಿಯ ಪ್ರಾತಮಿಕ ಶಾಲೆ ಶಿಕ್ಷಕ ಅಲ್‍ಹಾಜ ಎ.ಪಿ.ಮುಹ್ಸಿನ್ ಮಾತನಾಡಿ, ಪ್ರಪಂಚದ ಎಲ್ಲ ಧರ್ಮಗಳ ಸಾರ ಒಂದೆಯಾಗಿದೆ. ನಾವು ಮನುಷ್ಯರಾಗಿ ಭೂಮಿಗೆ ಬಂದಿದ್ದೇವೆ ಮನುಷ್ಯರಾಗಿಯೇ ಬಾಳವುದನ್ನು ಕಲಿಯಬೇಕಾಗಿದೆ. ಆನರಲ್ಲಿ ಭಾವೈಕ್ಯತೆಯನ್ನು ಬೆಳೆಸುವುದರ ಜೊತೆಗೆ ವ್ಯಸನಿಗಳಿಗೆ ಉತ್ತಮ ಸಂಸ್ಕಾರ ನೀಡಿ, ಹಾಳಾಗಿರುವ ಕುಟುಂಬಗಳನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೋಯ್ಯುವ ಕಾರ್ಯ ಮಾಡುತ್ತಿರುವ ರೋಶನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಮಹಿಳಾ ವತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿದೇಶಕ ಪಿ,ವಾಯ್.ಶೆಟ್ಟೆಪ್ಪನವರ ಮಾತನಾಡಿದರು. ಇದೇ ಸಂದರ್ಬದಲ್ಲಿ ವ್ಯಸನಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿರುವ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೈದ್ಯಾಧಿಕಾರಿ ಡಾ.ರವೀಂದ್ರಗೌಡ ಪಾಟೀಲ್ ಕಾರ್ಯಕ್ರಮದಲ್ಲಿ ಇದ್ದರು. ರೋಶನಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ನೃತ್ಯ ಪ್ರದರ್ಶನ ನೀಡಿದರು. ಭಗಿನಿ ಸಿಂತಿಯಾ ಸ್ವಾಗತಿಸಿದರು. ಭಗಿನಿ ಸಹನಾ ಕಾರ್ಯಕ್ರಮ ನಿರೂಪಿಸಿದರು. ಡಿ.ಶರಣಪ್ಪ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
