ಹಾವೇರಿ :
ಮಳೆಯ ಆಗಮನಕ್ಕಾಗಿ ನಿಂತಿರುವ ರೈತರು, ಮುಂಗಾರು ಬೆಳೆಗಳನ್ನು ಬಿತ್ತಲು ಸಜ್ಜಾದವರಿಗೆ ಬೀಜ ವಿತರಿಸಲು ರಜೆಯಲ್ಲಿಯೂ(ರವಿವಾರ) ಮುಂದಾಗಿರುವ ನಗರದ ಕೇಂದ್ರ ಭಾಗದಲ್ಲಿರುವ ರೈತ ಸಂಪರ್ಕ ಕೇಂದ್ರ.ಬಾಳು ಹಸನಾಗುವ ಕನಸು ಕಾಣುತ್ತಿರುವ ರೈತ ಭಾಂದವರು.
ಎಲ್ಲರ ಚಿತ್ತ ಮಳೆಯ ಆಗಮನ ಎಂಬಂತೆ ತಾಲೂಕಿನ ವಿವಿಧ ಕಡೆ ರಸಗೊಬ್ಬರ ಬೀಜ ವಿತರಣೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ಕೃಷಿ ಇಲಾಖೆ ರೈತರಿಗೆ ಅನುಕೂಲವಾಗಲಿ ಎಂದು ಹಾವೇರಿ ಹೋಬಳಿಯ ಏಳು ಭಾಗ – ಗ್ರಾಮಗಳಲ್ಲಿ ಬಿತ್ತನೆಯ ಬೀಜ,ಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಅವಕಾಶ ನೀಡಲಾಗಿದೆ.
ತಾಲೂಕಿನ ಕೇಂದ್ರ ಭಾಗ ಹಾವೇರಿ, ದೇವಗಿರಿ, ಕುರುಬಗೊಂಡ, ಆಲದಕಟ್ಟಿ, ಕಬ್ಬೂರ, ದೇವಿಹೊಸೂರ, ಸಂಗೂರ ರೈತರಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ತೆಗೆದುಕೊಂಡು ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಮುಂಗಾರು ಕೆಲವು ದಿನಗಳ ಕಾಲ ತಡವಾಗಿ ಪ್ರಾರಂಭವಾಗುತ್ತಿರುವುದರಿಂದ ಎಲ್ಲ ರೈತರು ಒಮ್ಮಲೇ ಬೀಜಗೊಬ್ಬರ ಕೊಂಡುಕೊಳ್ಳಲು ಬರುತ್ತಾರೆ ಎಂಬ ಉದ್ದೇಶದಿಂದ ಈ ವಿತರಣಾ ಕೇಂದ್ರಗಳು ಸಹಕಾರಿಯಾಗಲಿವೆ.
ಈವರಿಗೆ ಮುಂಗಾರು ಹಂಗಾಮಿಗೆ ಸುಮಾರು 10% ಬೀಜಗೊಬ್ಬರ ವಿತರಣೆಯಾಗಿದೆ. ಇನ್ನೆರಡು ದಿನಗಳಲ್ಲಿ ಮಳೆ ಬರುವಿಕೆ ಇರುವುದರಿಂದ ರೈತರಿಗೆ ರಭಸವಾಗಿ ಬೀಜಗೊಬ್ಬರ ವಿತರಣೆಯಾಗಲಿದ್ದು, ಎಲ್ಲ ಭಾಗಗಳಲ್ಲಿಯೂ ಸಾಮಾಗ್ರಿಗಳ ಸರಬರಾಜು ಮಾಡಲಾಗುತ್ತದೆ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ಆರ್.ಟಿ ಕರಿಲಿಂಗಪ್ಪನವರ ಪತ್ರಿಕೆಗೆ ಮಾಹಿತಿ ನೀಡಿದರು.
ಮಳೆಯ ಬರುವಿಕೆಯ ವಿಶ್ವಾಸದಿಂದ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರಜೆ ದಿನ ರವಿವಾರದಂದು ಬೀಜ ಗೊಬ್ಬರಗಳ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ರೈತ ಎಂಎಸ್ ಕರ್ಜಗಿ.ಫಕ್ಕಿರಗೌಡ ಗಾಜೀಗೌಡ್ರ.ಮುತ್ತಪ್ಪ ಕೂಡಲ.ರೈತ ಅನುವುಗಾರರಾದ ಬಿ.ಎಂ ಪಾಟೀಲ.ಆರ್ ಎಂ ಗುಡ್ಡಪ್ಪನವರ ಇದ್ದರು. ಚಿತ್ರ ಅಥವಾ ಪೋಟೊ ನ್ಯೂಸ್ : ನಗರದ ರೈತ ಸಂಪರ್ಕ ಕೇಂದ್ರ ಪಕ್ಕದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರದ ವತಿಯಿಂದ ಕೃಷಿ ಇಲಾಖೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬೀಜ,ಗೊಬ್ಬರ ಸಂಗ್ರಹದ ಕೇಂದ್ರ.