ಹಾವೇರಿ
ಮುಂಗಾರು ಮಳೆಯ ಬರುವ ಸಮಯ. ಒಂದೆಡೆ ರೈತರು ಹುಯ್ಯೋ ಹುಯ್ಯೋ ಮಳೆರಾಯ ಅಂತಿದ್ದರೆ, ಮತ್ತೊಂದೆಡೆ ಬಿತ್ತನೆ ಕಾರ್ಯಕ್ಕೆ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಹಾಗೆಯೇ ರೈತರನ್ನು ಆಕರ್ಷಿಸೋಕೆ ಬೀಜ ಕಂಪನಿಗಳು ಸಖತ್ ಪ್ಲಾನ್ ಮಾಡಿಕೊಂಡಿವೆ. ಚಲನಚಿತ್ರಗಳು ಹಾಗೂ ಚಿತ್ರ ನಟರ ಹೆಸರಿನಲ್ಲಿ ಬಿತ್ತನೆ ಬೀಜಗಳನ್ನ ಮಾರುಕಟ್ಟೆಗೆ ಬಿಟ್ಟು ರೈತರನ್ನು ಆಕರ್ಷಿಸುತ್ತಿವೆ. ರೈತರೂ ವೆರೈಟಿ ವೆರೈಟಿ ಹೆಸರಿನ ಬಿತ್ತನೆ ಬೀಜಗಳನ್ನು ಭರದಿಂದ ಖರೀದಿ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಡಾನ್, ಡಿಕೆಶಿ, ಐರಾವತ, ಚಿರಂಜೀವಿ ಹೀಗೆ ತರ ತರ ವಾದ ಹೆಸರಿನ ಪ್ಯಾಕೇಟ್ ಗಳು. ಭರದಿಂದ ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ ಅನ್ನದಾತರು. ಚಿತ್ರ ಹಾಗೂ ಚಿತ್ರನಟ ಹೆಸರು ಕೇಳಿ ಬಿತ್ತನೆ ಬೀಜ ಖರೀದಿಸುತ್ತಿರುವ ಅನ್ನದಾತರು. ಮುಂಗಾರು ಮಳೆ ಆಗಾಗ ದರ್ಶನ ಮಾಡುತ್ತಿದ್ದು, ಬಿತ್ತನೆಗೆ ಹದವಾದ ಮಳೆ ಆಗದಿದ್ದರೂ ರೈತರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಬೀಜ ಖರೀದಿ ಮಾಡತ್ತಿದ್ದಾರೆ.
ಹದವಾದ ಮಳೆ ಬಿದ್ದ ತಕ್ಷಣ ಬಿತ್ತನೆಗೆ ಬೇಕಾದಂತೆ ಭೂಮಿ ಸಿದ್ದ ಮಾಡಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಯಲ್ಲಿ ಬ್ಯೂಜಿ ಆಗಿದ್ದಾರೆ. ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಶೇಂಗಾ ಬೀಜ ಖರೀದಿ ಮಾಡಿಟ್ಟುಕೊಳ್ಳುತ್ತಿದ್ದು, ರೈತರೂ ಮಾರುಕಟ್ಟೆಯಲ್ಲಿ ತಮಗೆ ಬೇಕಾದ ಹೆಚ್ಚು ಇಳುವರಿ ಕೊಡುವ ಬೀಜಗಳನ್ನು ಖರೀದಿ ಮಾಡ್ತಿದ್ದಾರೆ.
ಕಳೆದ ವರ್ಷ ಈ ವೇಳೆಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ರೈತರ ಜಮೀನು ಬಿತ್ತನೆ ಆಗಿತ್ತು. ಆದರೆ ಈಗ ಸಕಾಲಕ್ಕೆ ಮಳೆ ಬಾರದ್ದರಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಮಳೆ ಬರುವ ನಿರೀಕ್ಷೆಯಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿಟ್ಟುಕೊಳ್ಳುತ್ತಿದ್ದಾರೆ. ಆದರೆ ವರ್ಷಕ್ಕೊಮ್ಮೆ ಹೊಸ ಹೊಸ ಹೆಸರಿನ ಬಿತ್ತನೆ ಬೀಜದ ಪ್ಯಾಕೇಟ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಯಾವ ಬೀಜ ಎಷ್ಟು ಫಲ ಕೊಡುತ್ತೇ ? ಅನ್ನುವ ಪ್ರಶ್ನೆ ಕಾಡ ತೊಡಗಿದೆ. ಬಿತ್ತನೆ ಬೀಜದ ಪ್ಯಾಕೇಟ್ ಹಿಂದೆ ಬೀಜ ಕಂಪನಿಗಳು ಇಳುವರಿ ಬಗ್ಗೆ ನಮೂದು ಮಾಡಿರುತ್ತಾರೆ. ಆದರೆ ವರ್ಷಕ್ಕೊಂದು ಹೊಸ ಹೊಸ ಹೆಸರಿನ ಬಿತ್ತನೆ ಬೀಜಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ರೈತರು ಕೊಂಚ ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತದೆ.
ಬೀಜ ಕಂಪನಿಗಳು ಚಲನಚಿತ್ರ ನಟರು ಹಾಗೂ ಚಲನಚಿತ್ರಗಳ ಹೆಸರಿಟ್ಟು ಬೀಜ ಮಾರಾಟ ಮಾಡುತ್ತಿದ್ದು,ಈಗ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆ ಬೀಜ ಖರೀದಿಗೆ ಮುಗಿ ಬಿದ್ದು ಕೊಳ್ಳಲು ಮುಂದಾಗಿದ್ದಾರೆ. ಯಾವ ಹೆಸರು ಏನು ಮಾಡಿತು ರೈತರಿಗೆ ಹೆಸರು ಮುಖ್ಯ ಅಲ್ಲ. ರೈತರಿಗೆ ಉತ್ತಮ ಫಲಸಲು ಬಂದರೆ ಸಾಕು ಎಂದು ಹೇಳ ತೊಡಗಿದ್ದಾರೆ.