ಬಿಜೆಪಿ ಅಭ್ಯರ್ಥಿಗೆ ಮಾದಿಗರ ಬೆಂಬಲ

ಚಿತ್ರದುರ್ಗ

          ನಾರಾಯಣಸ್ವಾಮಿ ಜನಪ್ರಿಯತೆ ಸಹಿಸದ ಕೆಲವರು ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾರಾಯಣಸ್ವಾಮಿ ಅವರನ್ನು ಎಲ್ಲಾ ಸಮುದಾಯದವರು ಬೆಂಬಲಿಸುವಂತೆ ಆದಿಕರ್ನಾಟಕ(ಮಾದಿಗ) ಮಹಾಸಭಾದ ಜಿಲ್ಲಾ ಅಧ್ಯಕ್ಷ ಹೆಚ್.ಮಹಾಂತೇಶ್ ಮನವಿ ಮಾಡಿದರು.

         ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುನಾಲ್ಕು ಭಾರಿ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ, ಸಮಾಜಕಲ್ಯಾಣ ಸಚಿವರಾಗಿ ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಇಂತಹ ವ್ಯಕ್ತಿಯನ್ನು ಬಿಜೆಪಿ ಅಭ್ಯರ್ಥಿಯಾಗಿಸಿರುವುದಕ್ಕೆ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸಲಾಗುವುದು. ಈ ಸಾರಿ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಲು ಹೋರಾಟ ಮಾಡಲಾಗುವುದು ಎಂದರು.

       ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ನಿಜವಾದ ಮಾದಿಗ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾದಿಗರಲ್ಲ ಎಂದು ವೈರಲ್ ಮಾಡಿದ್ದಾರೆ. ಇದಕ್ಕೆ ಕಿವಿಗೊಡಬಾರದು. ಆದಿಕರ್ನಾಟಕ(ಮಾದಿಗ) ಮಹಾಸಭಾ ನಾರಾಯಣಸ್ವಾಮಿಗೆ ಬೆಂಬಲ ನೀಡಲಿದೆ ಎಂದು ಹೆಚ್.ಮಹಾಂತೇಶ್ ಹೇಳಿದರು.

        ಸಾಮಾಜಿಕ ಜಾಲತಾಣಗಳಲ್ಲಿ ನಾರಾಯಣಸ್ವಾಮಿ ಮಾದಿಗರಲ್ಲ ಎಂದು ದುಷ್ಕರ್ಮಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅಂತವರನ್ನು ಪತ್ತೆ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಮಾದಿಗ ಕಾಲೋನಿಗೆ ಭೇಟಿ ನೀಡಿ ನಾರಾಯಣಸ್ವಾಮಿ ನಿಜವಾದ ಮಾದಿಗರು ಎಂದು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

         ಭೋವಿ ಜನಾಂಗಕ್ಕೆ ಸೇರಿದ ಜನಾರ್ದನಸ್ವಾಮಿ ಅವರಿಗೆ ಎರಡು ಸಾರಿ ಬಿಜೆಪಿ ಟಿಕೆಟ್ ನೀಡಿತ್ತು. ಒಮ್ಮೆ ಸಂಸದರಾದರು ಮತ್ತೊಮ್ಮೆ ಪರಾಭವಗೊಂಡರು. ಬಿಜೆಪಿ ಈ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ. ಸಹೋದರ ಸಮಾಜಗಳು ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವಂತೆ ಕೋರಿದರು.

       ಮಹಾಸಭಾದ ನಿರ್ದೇಶಕ ಎಂ.ಶಿವಮೂರ್ತಿ ಮಾತನಾಡಿ, ಭೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ಕರೆ ನೀಡಿರುವುದು ಸರಿ ಅಲ್ಲ. ಸ್ವಾಮೀಜಿ ಮತವನ್ನೇ ಹಾಕಬೇಡಿ ಎಂದು ಹೇಳಿರುವುದು ಪ್ರಜಾಪ್ರಭುತ್ವದ ವಿರೋಧವಾಗುತ್ತದೆ. ಸ್ವಾಮೀಜಿ ಕೂಡಲೇ ಸಾರ್ವಜನಿಕರವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದರು.

        ಮುಖಂಡರಾದ ಟಿ.ದೇವರಾಜ್, ರಾಮಚಂದ್ರಪ್ಪ, ವೆಂಕಟೇಶ್, ಹೆಚ್.ರಾಮಚಂದ್ರಪ್ಪ, ಬಿ.ಆರ್.ಮುನಿರಾಜ್, ಸಿ.ಶೇಖರಪ್ಪ, ಭೀಮರಾಜ, ಬಿ.ಟಿ.ರೇವಣ್ಣ., ತಾಲ್ಲೂಕುಪಂಚಾಯತ್ ಮಾಜಿ ಅಧ್ಯಕ್ಷ ಬಿ.ಜಯಪ್ಪ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link