ಉಪ ಚುನಾವಣೆ: ಹಿರೇಕೆರೂರು  ಬಿಜೆಪಿ ಅಭ್ಯರ್ಥಿ ಗೆಲುವು 

ಹಾವೇರಿ
    ವಿಧಾನಸಭಾ ಉಪ ಚುನಾವಣೆಯಲ್ಲಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‍ನ ಬಿ.ಎಚ್.ಬನ್ನಿಕೋಡ ಅವರಿಗಿಂತ 29,067 ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸಿದ್ದಾರೆ.ಬಿ.ಸಿ.ಪಾಟೀಲ(ಬಿಜೆಪಿ) 85,562 ಮತ, ಬಿ. ಎಚ್. ಬನ್ನಿಕೋಡ (ಕಾಂಗ್ರೆಸ್) 56,495, ದೇವೇಂದ್ರಪ್ಪ (ಉ.ಪ್ರ.ಪಾ) 597, ಜಿ.ಎಸ್. ಮಂಜುನಾಥ(ಕ.ರಾ.ಸ) 193, ಹರೀಶ ಎಚ್.ಇಂಗಳಗೊಂದಿ(ಕ.ಜ.ಪ.) 185, ಉಜ್ಜಪ್ಪ ಜೆ.ಕೋಡಿಹಳ್ಳಿ, (ಪಕ್ಷೇತರ)275, ರಾಜಶೇಖರ ಕೆ.ದೂದಿಹಳ್ಳಿ  (ಪಕ್ಷೇತರ) 133, ರುದ್ರಯ್ಯ ಅಂದಾನಯ್ಯ ಸಾಲಿಮಠ(ಪಕ್ಷೇತರ)356, ಪೂಜಾರ ಸಿದ್ದಪ್ಪ ಕಲ್ಲಪ್ಪ(ಪಕ್ಷೇತರ) 472 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 789 ಮತಗಳು ಬಿದ್ದಿವೆ.
 
     ಒಟ್ಟಾರೆ ಕ್ಷೇತ್ರದಲ್ಲಿ 1,83,481 ಮತಗಳ ಪೈಕಿ 1,44,268 ಮತಗಳು ಚಲಾವಣೆಯಾಗಿವೆ. 789 ಮತಗಳು ನೋಟಾ ಪರವಾಗಿ ಚಲಾವಣೆಯಾಗಿದೆ. 9 ಮತಗಳು ತಿರಸ್ಕøತಗೊಂಡಿವೆ ಎಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ರವೀಂದ್ರ ಕರಿಲಿಂಗಣ್ಣನವರ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link