ಸಿರಿಗೆರೆ:
ಸದೃಡ ಭಾರತವನ್ನು ನಿರ್ಮಾಣ ಮಾಡಲು ಮೊತ್ತಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ಸಿರಿಗೇರಿ ಗ್ರಾಮದಲ್ಲಿ ಗುರುವಾರ ತೆರೆದ ವಾಹನದಲ್ಲಿ ರೋಡ್ ಶೋ ಮತ ಪ್ರಚಾರ ನಡೆಸಿದ ನಂತರ ಮಾತನಾಡಿ, ಕಾಂಗ್ರೆಸ್ ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಂ ದಂಗೆಗಳು ನಡೆದಿವೆ. ಆದರೆ, ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಒಂದು ಸಹ ದಂಗೆಗಳು ನಡೆದಿರುವ ಉದಾಹರಣೆಗಳಿಲ್ಲ ಕಂಡ್ರಿ.
ಕಾಂಗ್ರೆಸ್ ದೇಶವನ್ನು ಒಡೆಯಲು ನಾನಾ ಕಸರತ್ತು ಮಾಡುತ್ತಿದೆ. ಬ್ರಿಟಿಷರ ಪರಂಪರೆಯನ್ನು ಕಾಂಗ್ರೆಸ್ ಅನುಕರಣೆ ಮಾಡುತ್ತಿದೆ. ಇಂತಹ ದೇಶದ್ರೋಹದ ಕಾಂಗ್ರೆಸ್‍ಗೆ ಅಧಿಕಾರ ನೀಡಕೂಡದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಂದು ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲದ ಭರವಸೆಯಾಗಿದೆ. ದೇಶದ ಜನತೆಗೆ ಮಂಕುಬೂದಿ ಹಚ್ಚುವ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ಗುಡುಗಿದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳು ಸಂಪೂರ್ಣವಾಗಿ ಬಿಜೆಪಿ ಈಡೇರಿಸಿದೆ. ದೇಶದಲ್ಲಿ ನರೇಂದ್ರ ಮೋದಿ ಅಲೆಯಿದೆ. ಜನಧನ್ ಯೋಜನೆಯಡಿ 33 ಕೋಟಿ ಜನಕ್ಕೆ ಬ್ಯಾಂಕ್ ಖಾತೆ ದೊರತಿದೆ. ನಗರ ಹಾಗೂ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಜನತೆಗಾಗಿ ಬಿಜೆಪಿ ನಾನಾ ಯೋಜನೆಗಳು ತಂದಿದೆ.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ. ಜಗತ್ತಿನ ರಾಷ್ಟ್ರಗಳು ಭಾರತದತ್ತ ಮುಖ ಮಾಡುವಂತೆ ನರೇಂದ್ರ ಮೋದಿ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಕ್ತ ರಾಷ್ಟ್ರಕ್ಕೆ ಬಿಜೆಪಿ ಪಣ ತೊಟ್ಟಿದೆ. ದೇಶದ ಜನರು ದೇಶದ ಅಭಿವೃದ್ಧಿ, ರಾಜ್ಯ ಹಾಗೂ ಕ್ಷೇತ್ರದ ಹಿತಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿದರು.ಶಾಸಕ ಸೋಮಲಿಂಗಪ್ಪ ಮಾತನಾಡಿ, ಕಾಂಗ್ರೆಸ್ ಸುಳ್ಳಿನ ರಾಜಕಾರಣ ಮಾಡುತ್ತಿದೆ. ಹೀಗಾಗಿ ದೇಶದ ಜನರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.
ಜಿಪಂ ಸದಸ್ಯ ರತ್ನಮ್ಮ ಅಡಿವೆಯ್ಯಸ್ವಾಮಿ ಮಾತನಾಡಿ, ದೇಶದ ಭದ್ರತೆ ಹಾಗೂ ರಕ್ಷಣೆ ಕಾಂಗ್ರೆಸ್‍ನಿಂದ ಅಸಾಧ್ಯ. ಕಾಂಗ್ರೆಸ್‍ನವರು ಮತದಾರರನ್ನು ಮರಳು ಮಾಡಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಜನರಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೇತ್ರದ ಅಭ್ಯರ್ಥಿ ಕರಡಿ ಸಂಗಣ್ಣ ಅವರಿಗೆ ಗೆಲವು ನೀಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರವನ್ನು ದೇಶದಲ್ಲಿ ಅಧಿಕಾರ ತರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಚೊಕ್ಕಬಸವನಗೌಡ.ದಮ್ಮೂರು ಸೋಮಪ್ಪ. ಕೆ ನಾಗಮ್ಮ ಮುದಿಯಪ್ಪ ನೆನಕ್ಕಿ ವಿರುಪಾಕ್ಷಿ. ಬಕ್ಕಾಟೆ ಈರಯ್ಯ.ಗೋಡೆ ಸಂಪತ್ ಕುಮಾರ್. ಅಗಲೂರು ಮಲ್ಲನಗೌಡ. ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ