ಮಲೇಬೆನ್ನೂರು
ಚುನಾವಣೆಗೆ ಅಭ್ಯರ್ಧಿಯಾಗಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ ಲೆಕ್ಕ ಕೂಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಪ್ಪ ಮಗನಿಗೆ ಚುನಾವಣೆಯಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ದಾವಣಗೆರೆ ಜಿಲ್ಲಾ ಲೋಕಸಭಾ ಚುನಾವಣಾ ಉಸ್ತುವಾರಿಗಳು ಹಾಗೂ ವಿಧಾನ ಪರಷತ್ ಸದಸ್ಯ ಆಯನೂರು ಮಂಜುನಾಥ್ ಶ್ಯಾಮನೂರು ಕುಟುಂಬಕ್ಕೆ ಟಾಂಗ್ ನೀಡಿದರು.
ಅವರು ಕೊಕ್ಕನೂರಿನಲ್ಲಿ ಭಾನುವಾರ ಎರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ ವರಮಾನ ತೆರಿಗೆ ದಾಳಿಯಾದಾಗ ಸಿದ್ದೇಶ್ವರ್ ಲೆಕ್ಕ ತೋರಿಸಿದ್ದಾರೆ.ಆದರೆ ಅಪ್ಪ ಮಕ್ಕಳು ಇನ್ನೂ ಲೆಕ್ಕ ಕೊಡಲು ಆಗಿಲ್ಲ ಹಾಗಾಗಿ ಚುನಾವಣೆಗೆ ನಿಲ್ಲಲು ಟುಸ್ಸುಪುಸ್ಸು ಅಂತಾ ಇದೆ ಎಂದರು.
ಈ ಬಾರಿ ಬಿಜೆಪಿಯಿಂದ ಸೇನಾಧಿಪತಿ ಜಿ.ಎಂ.ಸಿದ್ದೇಶ್ವರ್ ಇವರು ಎದುರು ಆಭ್ಯರ್ಥಿ ಯಾರೂ ಅಂತ ಗೊತ್ತಿಲ್ಲ, ಯಾಕೆಂದರೆ ಅಪ್ಪ ಮಗ ಇನ್ನೂ ಎದ್ದಿಲ್ಲ ಎಂದು ವ್ಯಂಗ್ಯವಾಡಿದರು. ನರೇಂದ್ರ ಮೋದಿ ಒಬ್ಬ ಕಡು ಬಡತನ ಮಗ. ಅವನು ದೇಶದ ಪ್ರಧಾನಿಯಾಗಬಹುದು ಎಂದು ತೋರಿಸಿದ ವ್ಯಕ್ತಿ ಇದನ್ನು ಶ್ರೀಮಂತ ಕುಟುಂಬಗಳು ವಿರೋಧಿಸುತ್ತಿದ್ದಾರೆ. ನೆಹರು ಮನೆತನದಲ್ಲಿ ಹುಟ್ಟಿದವರು ನೇರವಾಗಿ ವಂಶಪಾರಂರ್ಯವಾಗಿ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ಕುಟುಕಿದರು.
ವಾಜಪೇಯಿ ಮನಮೋಹನ್ ಸಿಂಗ್ ಮತ್ತು ನರೆಂದ್ರ ಮೋದಿ ಈ ಮೂರು ವ್ಯಕ್ತಿಗಳು ಪ್ರಧಾನ ಮಂತ್ರಿಗಳಾಗಿದ್ದಾಗ ನಾನು ಸಂಸತ್‍ನಲ್ಲಿದ್ದು ಹತ್ತಿರದಿಂದ ಇವರ ಆಡಳಿತ ನೋಡಿದ್ದೇನೆ.ಇವರಲ್ಲಿ ವಾಜಪೇಯಿ ಮತ್ತು ನರೇಂದ್ರ ಮೋದಿ ಇವರಿಬ್ಬರೂ ಇಡೀ ಪ್ರಪಂಚ ಮೆಚ್ಚಿದ ವ್ಯಕ್ತಿಗಳಾಗಿದ್ದರು ಎಂದರು.
ವಾಜಪೇಯಿ ಪ್ರಧಾನ ಮಂತ್ರಿಗಳಾಗಿದ್ದಾಗ ಪಾಕ್ ಮತ್ತು ಭಾರತದ ಸಂಬಂಧ ಹಾಳಾಗಬಾರದೆಂದು ಲಾಹೋರಗೆ ಬಸ್ಸುನ್ನು ಬಿಟ್ಟರು ಭಾರತ ಮತ್ತು ಪಾಕ್ ಕ್ರಿಕೆಟ್ ನಡೆಯುವಂತೆ ನೋಡಿಕೊಂಡರು.ಹಾವಿಗೆ ಹಾಲೆರೆದರೆ ವಿಷ ಕಕ್ಕುವಂತೆ ಉಗ್ರರು ಬಾಂಬೆಯಲ್ಲಿ ತಾಜ್ ಹೊಟೇಲ್‍ಗೆ ನುಗ್ಗಿ ಹತ್ಯಾಕಾಂಡ ನಡೆಸಿದರು ಮನಮೋಹನ್ ಸಿಂಗ್ ಯಾವುದೇ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಿದ್ದು ಮೋಜಿಗಲ್ಲ ಪಾಕಿಸ್ತಾನ ಘೋಷಿಸಿತ್ತಿರುವ ಉಗ್ರ ಚಟುವಟಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಇದರಿಂದಲೇ ಇಂದು ದುಷ್ಟರನ್ನು ಬಡಿಯಲು ಸಾಧ್ಯವಾಗಿದೆ ಎಂದರು.
ಪುಲ್ವಮಾ ಘಟನೆ ನಂತರ ನಮ್ಮ ಸೈನಿಕರು ವಾಯದಾಳಿ ನಡೆಸಿದ್ದು ಇದ್ದಕ್ಕೊ ಕಾಂಗ್ರೆಸ್ನªರು ಸಾಕ್ಷಿ ಕೇಳುತ್ತಿದ್ದಾರೆ. ಸಾಕ್ಷಿಗಾಗಿ ಪೋಟೋ ತರಲು ನಮ್ಮ ಸೈನಿಕರೇನು ಹನಿಮೂನ್ ಮಾಡಿಕೂಳ್ಳಲು ಹೋಗಿರಲಿಲ್ಲ. ಇನ್ನು ಮುಂದೆ ಸಾಕ್ಷಿಕೇಳುವ ರಾಹುಲ್ ಗಾಂಧಿಯನ್ನೇ ವಿಮಾನದ ಮುಂದುಗಡೆ ಕಟ್ಟಿಕೊಂಡು ಹೋಗಬೇಕು ಎಂದರು.