ಶಿವಮೊಗ್ಗ:
ರಾಮನಗರದ ಕಹಿ ನೆನಪು ಆರುವ ಮುನ್ನವೇ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ ,ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ ನಗರದ 7ನೇ ವಾರ್ಡಿನ ಮತದಾರರಿಗೆ ಹಣ ಹಂಚಿಕೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯವಾದ ಬೆನ್ನಲ್ಲೇ ಈ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷದವರಿಗೆ ಚುನಾವಣಾ ಅಸ್ತ್ರ ದೊರೆತಂತೆ ಆಗಿದೆ ಮತ್ತು ಜನತೆ ಈ ಬೆಳವಣಿಗೆ ಇಂದ ಬಿಜೆಪಿಗೆ ತನ್ನ ಭದ್ರಕೋಟೆಯಲ್ಲೇ ಸೋಲಿನ ಭೀತಿ ಎದಿರಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇತ್ತ ಮತದಾರರಿಗೆ ವೋಟಿನ ಚೀಟಿ ಜೊತೆಗೆ 500ರೂ ಕೊಟ್ಟ ಆರೋಪದ ಮೇಲೆ ಕೆಲವು ಬಿಜೆಪಿ ಕಾರ್ಯಕರ್ತರನ್ನು ಬಂದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








