ಹೊಸದಿಲ್ಲಿ:
ದಕ್ಷಿಣದ ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾಗೆ ಕಂಟಕವೊಂದು ಎದುರಾಗಿದ್ದು ರಾವಣಾಸುರನ ವೇಷ ಭೂಷಣ ಬದಲಿಸುವ ಮೂಲಕ ವಿವಾದ ಹುಟ್ಟಿಸಿದೆ. ಹೊಸ ಪೋಸ್ಟರ್ ನಲ್ಲಿ ಪಾತ್ರ ಮತ್ತು ಪಾತ್ರಕ್ಕನುಗುಣವಾದ ವೇಷ ಭೂಷಣ ಇಲ್ಲ ಮತ್ತು ಅನುಚಿತವಾಗಿ ಚಿತ್ರಿಸಿರುವ ಅರೋಪದ ಮೇರೆಗೆ ಚಿತ್ರದ ನಿರ್ದೇಶಕರು ಹಾಗೂ ನಟರ ವಿರುದ್ಧ ದೂರು ದಾಖಲಿಸಲಾಗಿದೆ.
ಸಂಜಯ್ ದೀನಾನಂತ್ ತಿವಾರಿ ಹಾಗೂ ಪಂಕಜ್ ಮಿಶ್ರಾ ಎಂಬವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಚಿತ್ರತಂಡ ಘಾಸಿ ಮಾಡಿದೆ ಎಂದು ಆರೋಪಿಸಿದ್ದಾರೆ.ರಾಮನು ಅರಣ್ಯ ವಾಸದ ಸಂದರ್ಭದಲ್ಲಿ ಸನ್ಯಾಸಿಯ ದಿರಿಸು ಧರಿಸಿರುತ್ತಾರೆ. ಜನಿವಾರವಿಲ್ಲದಂತೆ ಪಾತ್ರಗಳನ್ನು ಚಿತ್ರಿಸಿದ್ದಾರೆ ಎಂದು ಆರೋಪಿಸಲಾಗಿದೆ.