ಬೆಂಗಳೂರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಆತುರ ಹೆಚ್ಚಾಗಿದ್ದು, ರಾಜ್ಯ ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆದೇಶವನ್ನು ಪಾಲಿಸುವ ಜನ ತಾವಾಗಿದ್ದು, ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲದಂತೆ ನಡೆದುಕೊಳ್ಳುತ್ತಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಏನಾದರೂ ಆಗಬಹುದೆಂದು ಕಾತುರದಿಂದ ಬಿಜೆಪಿಯ ನಾಯಕರು ಕಾಯುತ್ತಿದ್ದಾರೆ. ಬಿಜೆಪಿಯವರು ಹೇಳುವಂತೆ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತಮ ಬಜೆಟ್ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸಿನಿಂದ ಐವರು ಶಾಸಕರಿಂದ ರಾಜಿನಾಮೆ ಕೊಡಿಸಲು ಬಿಜೆಪಿ ಮುಂದಾಗಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 5 ಶಾಸಕರು ಬೇಡ, ಪಕ್ಷದಲ್ಲಿರುವ 78 ಶಾಸಕರಿಂದಲೂ ರಾಜಿನಾಮೆ ಕೊಡಿಸಲಿ, ಬಿಜೆಪಿಯವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂದು ವ್ಯಂಗ್ಯವಾಗಿ ಶುಭಕೋರಿದರು.
ಆದರೆ ಅಲ್ಲಿ ಯಾವುದೇ ತರಗತಿಗಳು ನಡೆಯದಿರುವುದನ್ನು ಗಮನಿಸಿನಂತರ ಸಂಸ್ಥೆಯಲ್ಲಿ ಭೋಧಕ ಸಿಬ್ಬಂದಿ ಇಲ್ಲದಿರುವುದು,ಸರಿಯಾಗಿ ತರಗತಿಗಳು ನಡೆಯದಿರುವುದು ಗಮನಿಸಿ ಇಲ್ಲಿ ನಮಗೆ ವಿದ್ಯಾರ್ಜನೆ ಮಾಡಲು ಸಾಧ್ಯವಿಲ್ಲ ಎಂದು ವೋಗ್ ಇನ್ಸ್ಟಿಟ್ಯೂಟ್ಗೆ ಬಂದು ದಾಖಲೆಗಳನ್ನು ಹಾಗೂ ಶುಲ್ಕವನ್ನು ವಾಪಸ್ ಕೊಡಿ ಎಂದು ಕೇಳಿದರೂ ಕಳೆದ 6 ತಿಂಗಳಿನಿಂದ ವಿದ್ಯಾರ್ಥಿಗಳನ್ನು ಸತಾಯಿಸಲಾಗಿದೆ.ಎಂದು ನಾಯಕರು ದೂರಿದ್ದಾರೆ.
ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳು ಎಬಿವಿಪಿಯನ್ನು ಸಂಪರ್ಕಿಸಿ ನ್ಯಾಯ ಒದಗಿಸಿಕೊಡಬೇಕಾಗಿ ಕೇಳಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಪೂರ್ವಪರ ವಿಚಾರಿಸದಾಗ ಆಸಲಿ ಸತ್ಯ ಬೆಳಕಿಗೆ ಬಂದಿದೆ. ಜೊತೆ ಸಂಸ್ಥೆ ಯಾವುದೆ ಮಾನ್ಯತೆ ಪಡೆದಿಲ್ಲ ಎಂಬ ಮಾಹಿತಿಯೂ ಬಹಿರಂಗವಾಗಿದೆ.
6 ತಿಂಗಳಿನಿಂದ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದ ಈ ಸಂಸ್ಥೆಯನ್ನು ಗಮನಿಸಿದ ಎಬಿವಿಪಿ ನಾಯಕರು ಪ್ರಾಂಶುಪಾಲರನ್ನು ಭೇಟಿ ಮಾಡಿದಾಗ ದಾಖಲೆ ಹಾಗೂ ಪ್ರವೇಶಾತಿ ಶುಲ್ಕವನ್ನು ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಕರಿಯಪ್ಪ ಅವರಿಂದ ಪಡೆಯಬೇಕೆಂದು ತಿಳಿಸಿದರು.
ಎಬಿವಿಪಿ ನಿಯೋಗ ಈ ಬಗ್ಗೆ ಬೆಂಗಳೂರಿನ ರಿಚ್‍ಮಂಡ್ ರಸ್ತೆಯಲ್ಲಿರುವ ವೋಗ್ ಇನ್ಸ್ಟಿಟ್ಯೂಟ್ಗೆ ಭೇಟಿ ನೀಡಿ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.ಮಾನ್ಯತೆ ಪಡೆಯದೆ ಸಂಸ್ಥೆಯನ್ನು ಹೇಗೆ ನಡೆಸುತ್ತಿದ್ದೀರಿ ಎಂದು ಎಬಿವಿಪಿ ನಾಯಕರು, ಕಾರ್ಯಕರ್ತರು ಪ್ರಶ್ನಿಸಿ ಕಾಲೇಜಿಗೆ ಮುತ್ತಿಗೆಹಾಕಿದರು. ಕಾಲೇಜು ಆಡಳಿತ ಮಂಡಳಿ ಗೂಂಡಾಗಳನ್ನು ಕರಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದೆ . ಈ ಘಟನೆ ಪೊಲೀಸರ ಕಣ್ಣುಮುಂದೆ ನಡೆದರೂ ಸಹ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದೆ ಮೌನದಲ್ಲಿ ಮುಳುಗಿದ್ದಾರೆ ಎಂದು ನಾಯಕರು ಆರೋಪಿಸಿದ್ದಾರೆ.
ಪ್ರತಿಭಟನೆಯ ನಂತರ ಡಾ. ಕರಿಯಪ್ಪ ಅವರ ಪುತ್ರ ನಿಶಾಂತ್ ಲಿಖಿತ ರೂಪದಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಸೋಮವಾರ ವಾಪಸ್ ನೀಡುವುದಾಗಿ ಬರವಸೆ ನೀಡಿದ್ದಾರೆ.ಕೊನೆಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾದ ಜಯಪ್ರಕಾಶ, ಮಹಾನಗರ ಕಾಯರ್ಯದರ್ಶಿಯಾದ ಸೂರಜ್ ಪಂಡಿತ್, ನಗರ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ, ಶಿವಾನಂದ ಹಾಗೂ ಜಿಲ್ಲಾ ಸಂಚಾಲಕರಾದ ಗಗನ, ತೇಜಸ್, ಮಹೇಶ,ಪರಮೇಶ ಕಾರ್ಯಕರ್ತ ನಿಶಾಂತ ಹಾಗೂ ವಿದ್ಯಾರ್ಥಿನಿ ಪ್ರಮುಖರಾದ ಸ್ವಾತಿ, ದೀಕ್ಷಾ, ಪ್ರಿಯಾ , ನಿಧಿ, ಕೀರ್ತಿ ಮೊದಲಾವರು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ