ಚಿತ್ರದುರ್ಗ
ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ. ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ ಎಂದು ಕಾರ್ಮಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬಿಜೆಪಿಯ ನಾಯಕರಿಗೆ ಟಾಂಗ್ ನೀಡಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ ಜಾಧವ್ ರಾಜೀನಾಮೆ ವಿಚಾರವಾಗಿ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ನನಸಾಗುವುದಿಲ್ಲ. ಯಡಿಯೂರಪ್ಪ ಹೇಳಿದಂತೆ ರಾಜಕೀಯ ಬೆಳವಣಿಗೆಗಳು ನಡೆದಿದ್ದರೆ ಅವರು ಯಾವತ್ತೋ ಮುಖ್ಯಮಂತ್ರಿಯಾಗುತ್ತಿದ್ದರು. ಅಂದು ಮೂರು ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿರಲಿಲ್ಲ. ಯಾರು ಯಾರು ಎಲ್ಲೆಲ್ಲಿ ಅಭಿಮಾನವಿದೆ ಅಲ್ಲಿಗೆ ಹೋಗ್ತಾರೆ ಎಂದರು.
ಇನ್ನು ರಾಜೀನಾಮೆ ನೀಡಿದ ಕೈ ಚಿಂಚೋಳಿ ಶಾಸಕ ಜಾಧವ್‍ಕುರಿತು, ಅವರೊಬ್ಬರಿಂದ ಕಾಂಗ್ರೆಸ್‍ಗೆ ಏನೂ ಹಾನಿ ಇಲ್ಲ. ಪಕ್ಷಾಂತರ ಮಾಡಿದವರಿಗೆ ಜನ ಬುದ್ಧಿ ಕಲಿಸುತ್ತಾರೆ. ಯಾವ ಕಾರಣಕ್ಕೆ ಬಿಜೆಪಿ ಸೇರುತ್ತಾರೆ ಎಂಬುದನ್ನು ಮತ ಹಾಕಿದ ಜನ ಯೋಚಿಸಲಿ. ನಾಲ್ಕೂವರೆ ವರ್ಷ ಬಾಕಿ ಇರುವಾಗಲೇ ಯಾಕೆ ರಾಜೀನಾಮೆ ನೀಡಿದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ಕಂಪ್ಲಿ ಶಾಸಕ ಗಣೇಶ- ವಿಜಯನಗರ ಕ್ಷೇತ್ರದ ಆನಂದಸಿಂಗ್ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರು ಫ್ರೆಂಡ್ಸ್, ವೈಯಕ್ತಿಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಒಂದೇ ತಾಯಿಯ ಮಕ್ಕಳೇ ಜಗಳ ಮಾಡಿಕೊಳ್ಳುತ್ತಾರೆ. ಇದು ಸಹ ಸಂಸಾರದ ಜಗಳ ತಾನೆ. ಸರಿ ಆಗುತ್ತದೆ ಎಂದು ಜಾರಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
