ಬಿಜೆಪಿಗೆ ಬಡವರ ಪರವಾದ ಕಾಳಜಿಯೇ ಇಲ್ಲ

ಚಿತ್ರದುರ್ಗ

        ಜನತೆಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀದುವುದಾಗಿ ಹೇಳುವುದರ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಸೌಲಭ್ಯವನ್ನು ನೀಡದೆ ಮತದಾರರಿಗೆ ಮೋಸ ಮಾಡಿದೆ ಇದನ್ನು ಮತದಾರತು ಮರೆತ್ತಿಲ್ಲ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ಧಾರೆ ಎಂದು ಮಾಜಿ ಸಚಿವ ಹೆಚ್. ಅಂಜನೇಯ ತಿಳಿಸಿದರು.

        ನಗರದಲ್ಲಿ ಭಾನುವಾರ ಸುದ್ದೊಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರಿಗೆ ಈಗ ನೀಡುವ 2000 ರೂ.ಗಳ ಸಹಾಯಧನವನ್ನು ಅವರು ಅಧಿಕಾರಕ್ಕೆ ಬಂದ ವರ್ಷದಲ್ಲಿಯೆ ಮಾಡಬಹುದಾಗಿತ್ತು ಆಗದಿದ್ದರೆ ಮುಂದಿನ ವರ್ಷ ಮಾಡಬಹುದಾಗಿತ್ತು ಆದರೆ ಚುನಾವಣೆ ಸಮೀಪದಲ್ಲಿ ಇದ್ದಾಗ ಮಾಡಿದ್ದಾರೆ ಇದ್ದೇಲ್ಲಾ ಚುನಾವಣೆಯ ಗಿಮ್ಮಿಕ್ ಹೊರೆತು ಜನತೆಯ ಪರ ಕಾಳಜಿಯಿಂದ ಅಲ್ಲ ಎಂದು ಆರೋಪಿಸಿದರು.

        ಕೇಂದ್ರ ಸರ್ಕಾರಕ್ಕೆ ಬಡವರ ಪರವಾದ ಕಾಳಜಿ ಇಲ್ಲ, ಇದಿದ್ದರೆ ಏರುತ್ತಿರುವ ಬೆಲೆಗಳನ್ನು ನಿಯಂತ್ರಣದಲ್ಲಿ ಇಡಬಹುದಾಗಿತ್ತು, ಇದೇ ರೀತಿ ರೈತರ ಪರವಾದ ಕಾಲಜಿಯೂ ಸಜಾ ಇಲ್ಲೌಆಗಿದೆ, ಅವರು ಸಾಲವನ್ನು ಮನ್ನಾ ಮಾಡುವಂತೆ ಹಲವಾರು ಭಾರಿ ಮನವಿ ಮಾಡಿದ್ದರು ಸಹಾ ಅದರ ಬಗ್ಗೆ ಕಾಳಜಿಯನ್ನು ತೋರದೇ ನಿರ್ಲಕ್ಷ್ಯ ಮಾಡಿದ್ದಾರೆ ಇದ್ದಲ್ಲದೆ ರಾಜ್ಯದಿಂದ ಗೆಲುವು ಸಾಧಿಸಿದ ಬಿಜೆಪಿ ಸಂಸದರು ಸಹಾ ಇದರ ಬಗ್ಗೆ ಧ್ವನಿ ಎತ್ತಲ್ಲ ಎಂದು ಆಂಜನೇಯ ದೂರಿದರು.

       ಚಿತ್ರದುರ್ಗದ ಸಂಸದರಾಗಿ ಕಳೆದ 5 ವರ್ಷದಿಂದ ಕ್ಷೇತ್ರದ ಅಭೀವೃದ್ದಿಗಾಗಿ ಚಂದ್ರಪ್ಪರವರು ಅಪಾರವಾದ ಕೆಲಸವನ್ನು ಮಾಡಿದ್ದಾರೆ. ಈ ಹಿಂದೆ ಯಾವ ಸಂಸದರು ಸಹಾ ಮಾಡದ ಕೆಲಸವನ್ನು ಮಾಡುವುದು ಮಾತ್ರವಲ್ಲದೆ ಜನತೆಗೆ ಸಿಗುವಂತ ಸಂಸದರಾಗಿದ್ದಾರೆ, ಹಿಂದಿನ ಚುನಾವಣೆಯಲ್ಲಿ ಮೋದಿಯ ಅಲೆ ಇದ್ದರು ಸಹಾ ಕ್ಷೇತ್ರದ ಮತದಾರರು ಕಾಂಗ್ರೇಸ್ ಪರವಾಗಿ ಮತವನ್ನು ಹಾಕುವುದರ ಮೂಲಕ ಚಿತ್ರದುರ್ಗ ಕಾಂಗ್ರೇಸ್ ಭದ್ರ ಕೋಟೆ ಎಂದು ಸಾಬೀತು ಮಾಡಿದ್ಧಾರೆ,

       ಇದೇ ರೀತಿ ಈ ಬಾರಿಯೂ ಸಹಾ ಮತದಾರರು ಮತ್ತೋಮ್ಮೆ ಕಾಂಗ್ರೇಸ್ ಪರವಾದ ಅಲೆಯನ್ನು ಸೃಷ್ಟಿ ಮಾಡಲಿದ್ದಾರೆ, ಈ ಹಿಂದೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ದೆ ಇತ್ತು ಆದರೆ ಈ ಬಾರಿ ಮೃತ್ರಿ ಆಗಿರುವುದರಿಂದ ಜೆಡಿಎಸ್ ಸಹಾ ನಮ್ಮ ಜೋತೆಯಲ್ಲಿ ಇರುವುದರಿಂದ ಮತ್ತಷ್ಟು ಶಕ್ತಿ ಬಂದಿದೆ ಎಂದರು.

        ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮಾದಿಗ ಜನಾಂಗದ ನಾರಾಯಣ ಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ ಇದರಿಂದ ನಮ್ಮ ಅ¨ಭ್ಯರ್ಥಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅಲ್ಲದೆ ಬಿಜೆಪಿಯಿಂದ ಯಾರಾದರೂ ಇರಬೇಕಿತ್ತು ಆಗಲೂ ಸಹಾ ನಾವು ಅವರನ್ನು ಎದುರಿಸುತ್ತಿದ್ದೇವು ಅದೇ ರೀತಿ ಎಂದ ಸಚಿವರು ಭೋವಿ ಸಮಾಜದವರೂ ಈ ಬಾರಿ ಮತದಾನ ಮಾಡುವುದಿಲ್ಲ ಎಂದು ಹೇಳುತ್ತಿದ್ಧಾರೆ ಇದರ ಬಗ್ಗೆ ಸ್ವಾಮಿಜೀಯವರ ಬಳಿ ಮಾತಣಾಡುವುದಕ್ಕಿಂತ ಸಮಾಜದವರಾದ ಸಚಿವರು ಇದರ ಬಗ್ಗೆ ಗಮನ ನೀಡುತ್ತಾರೆ ಎಂದು ತಿಳಿಸಿದರು.

       ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾರ್ಚ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕನಕ ವೃತ್ತದಿಂದ ಮೆರವಣಿಗೆ ನಡೆಯಲಿದ್ದು ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಿಗೆ ಭಾಗವಹಿಸಲಿದ್ದಾರೆ 10 ಗಂಟೆಗೆ ಕನಕವೃತ್ತದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಾಗಲಿದೆ. ಒನಕೆ ಓಬವ್ವ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡುರಾವ್, ಈಶ್ವರ್ ಖಂಡ್ರೆ ಹಾಗೂ ಅನೇಕ ಹಿರಿಯ ಮುಖಂಡರು ಆಗಮಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap