ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ..!!

ಕೊರಟಗೆರೆ:-

    ಕಾಂಗ್ರೇಸ್ ಮತ್ತುಜೆಡಿಎಸ್ ಭದ್ರ ಕೋಟೆ ಕೊರಟಗೆರೆ ಕ್ಷೇತ್ರದ ಮತದಾರರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಆರ್ಶಿವಾದ ಮಾಡಿ ನೂತನಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪವನಕುಮಾರ್ ಸಂತಸ ವ್ಯಕ್ತಪಡಿಸಿದರು.

     ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ಕೊರಟಗೆರೆ ಘಟಕದ ವತಿಯಿಂದ ಗುರುವಾರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುವ ವೇಳೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

      ರಾಜ್ಯದ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ಸ್ವಕ್ಷೇತ್ರದಲ್ಲಿ ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿ ಬಸವರಾಜುಗೆ ಆರ್ಶಿವಾದ ಮಾಡಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಯ ಅಧಿಕಾರ ಮತ್ತು ಆಶ್ವಾಸನೆಗೆ ಮನ್ನಣೆ ನೀಡದ ಮತದಾರರು ದೇಶದ ಅಭಿವೃದ್ದಿಗೆ ಮತ ಹಾಕಿ ನರೇಂದ್ರ ಮೋದಿ ಸರಕಾರಕ್ಕೆ ಬೆಂಬಲ ನೀಡಿದ್ದಾರೆಎಂದು ತಿಳಿಸಿದರು.

       ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ ಮಾತನಾಡಿ ನರೇಂದ್ರ ಮೋದಿಯ ಸುನಾಯಿಗೆ 22ಪಕ್ಷಗಳು ಕೊಚ್ಚಿಹೋಗಿವೆ. ದೇಶ ಕಾಯುವ ಚೌಕಿದಾರನ ಪರವಾಗಿ ದೇಶದ ಮತದಾರರು ಮತದಾನ ಮಾಡಿದ್ದಾರೆ. ಜನಸಾಮಾನ್ಯರ ಪರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೆಲಸ ಮಾಡಿ ಭಾರತ ದೇಶದ ಅಭಿವೃದ್ದಿಗೆ ಹಗಲು ರಾತ್ರಿ ಕೆಲಸ ಮಾಡುತ್ತಾರೆಎಂದು ಹೇಳಿದರು.

       ಬಿಜೆಪಿ ಯುವಮುಖಂಡ ಸ್ವಾಮಿ ಮಾತನಾಡಿ ಭಾರತದೇಶದಲ್ಲಿ 2014ರಲ್ಲಿ ಮೋದಿ ಅಲೆ ಮಾತ್ರ.2019ರಲ್ಲಿ ಮೋದಿ ಸುನಾಯಿಯಿಂದ ಎದುರಾಳಿಗಳು ನೆಲಕಚ್ಚಿದ್ದಾರೆ.ಐದು ವರ್ಷದ ಭ್ರಷ್ಟಚಾರರಹಿತ ಆಡಳಿತವನ್ನು ಮೋದಿ ನೀಡಿದ್ದಾರೆ . ಬಡಜನರ ಅಭಿವೃದ್ದಿಗಾಗಿ ಮೋದಿ ಇನ್ನಷ್ಟು ಯೋಜನೆಗಳನ್ನು ಈಗಾಗಲೇ ಸಿದ್ದಪಡಿಸಿದ್ದಾರೆ.ದೇಶದ ಯುವಜನತೆ ಮೋದಿ ಪರವಾಗಿದ್ದಾರೆ ಎಂದು ತಿಳಿಸಿದರು.

      ಕೊರಟಗೆರೆ ಬಿಜೆಪಿ ಘಟಕದ ವತಿಯಿಂದ ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕೊರಟಗೆರೆ ಪಟ್ಟಣದ ಎಸ್‍ಎಸ್‍ಆರ್ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹೊಳವನಹಳ್ಳಿ, ಕೋಳಾಲ ಹೋಬಳಿಯಲ್ಲಿ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ನರೇಂದ್ರ ಮೋದಿಗೆ ಜೈಕಾರ ಕೂಗಿದರು.

     ಸಂಭ್ರಮಾಚರಣೆ ವೇಳೆಯಲ್ಲಿ ಲಾಯರ್ ಸಂತೋಷ್, ಬಿಜೆಪಿ ಯುವ ಮುಖಂಡರಾದ ಗುರುಧತ್, ಪ್ರಕಾಶ್‍ರೆಡ್ಡಿ, ಆಟೋಗೋಪಿ, ಮಧು, ದೇವರಾಜು, ಮಿಥುನ್, ಶಶಿಕುಮಾರ್, ಕಿರಣಕುಮಾರ್, ನಾಗರಾಜು, ಶಿವಲಿಂಗಯ್ಯ, ಅಜಯ್, ಮಂಜುನಾಥ, ಮಲ್ಲಿಕಾರ್ಜುನಯ್ಯ, ರವಿ, ವೆಂಕಟಚಲಯ್ಯ, ಗಿರೀಶ್, ನವೀನ, ಮಧು, ಅಕ್ಕಣ್ಣ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link