ಬೆಂಗಳೂರು
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಇನ್ನೊಂದು ವಾರದಲ್ಲಿ ದೆಹಲಿಯಿಂದ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಹಾಲಿ ಸಂಸದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ಕಲ್ಪಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪ್ರತಿನಿಧಿಸುತ್ತಿದ್ದು, ಇದೀಗ ಅವರ ಜತೆಗೆ ಡಾ. ಎಚ್.ಎಂ. ಚಂದ್ರಶೇಖರ್ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಚಂದ್ರಶೇಖರ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ.
ಕೊಪ್ಪಳದಲ್ಲಿ ಸಿಂಗನಾಳ್ ವಿರೂಪಾಕ್ಷಪ್ಪ, ಸಿ.ವಿ.ಚಂದ್ರಶೇಖರ್, ತುಮಕೂರು – ಎಚ್.ಎನ್.ಚಂದ್ರಶೇಖರ್
ಬಾಗಲಕೋಟೆ – ಪಿ.ಸಿ. ಪೂಜಾರ್, ಸಂಗಮೇಶನಿರಾಣಿ ಹಾಗೂ ಬಳ್ಳಾರಿ – ವೆಂಕಟೇಶ್ ಪ್ರಸಾದ್(ಶಾಸಕ ನಾಗೇಂದ್ರ ಸೋದರ ) ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಇನ್ನುಳಿದಂತೆ ಬೆಂಗಳೂರು ದಕ್ಷಿಣ – ತೇಜಸ್ವಿನಿಅನಂತ್ ಕುಮಾರ್, ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್, 4. ಬೆಂಗಳೂರು ಗ್ರಾಮಾಂತರ -ಅಶ್ವತ್ಥನಾರಾಯಣ್ ಗೌಡ, ತುಳುಸಿ ಮುನಿರಾಜುಗೌಡ, ಸಿ.ಪಿ. ಯೋಗೇಶ್ವರ್ , ಎಂ.ಆರ್. ರುದ್ರೇಶ್, 5.ಚಿಕ್ಕಬಳ್ಳಾಪುರ – ಬಚ್ಚೇಗೌಡ ಅಥವಾ ಅವರ ಪುತ್ರಶರತ್ ಬಚ್ಚೇಗೌಡ, ಕೋಲಾರ – ಡಿ.ಎಸ್. ವೀರಯ್ಯ ಅಥವಾ ಚಲವಾದಿ ನಾರಾಯಣ ಸ್ವಾಮಿ, ಮೈಸೂರುಕೊಡಗು ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹಅವರ ಜತೆಗೆ ಡಾ.ಮಂಜುನಾಥ್ ಅಥವಾ ಡಿಮಾದೇಗೌಡರ ಹೆಸರು ಚಾಲ್ತಿಯಲ್ಲಿದೆ.
ತುಮಕೂರು – ಎಚ್.ಎನ್. ಚಂದ್ರಶೇಖರ್, ಸೊಗಡುಶಿವಣ್ಣ, ಜಿ.ಎಸ್. ಬಸವರಾಜ್, ಚಾಮರಾಜನಗರ -ಎಂ.ಶಿವಣ್ಣ
ಶಿವಮೊಗ್ಗ – ಬಿ.ವೈ. ರಾಘವೇಂದ್ರ, ಉಡುಪಿ,ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ. ಡಿ.ಎನ್ಜೀವರಾಜ್, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ಚಿತ್ರದುರ್ಗ – ಜನಾರ್ಧನ ಸ್ವಾಮಿ, ಡಾ.ಲಕ್ಷ್ಮೀನಾರಾಯಣ್, ದಾವಣಗೆರೆ – ಜಿ.ಎಂ. ಸಿದ್ದೇಶ್ವರ್, ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್, ಉತ್ತರಕನ್ನಡ – ಅನಂತ್ ಕುಮಾರ್ ಹೆಗಡೆ, ಚಿಕ್ಕೋಡಿ – ರಮೇಶ್ ಕತ್ತಿ, ಧಾರವಾಡ – ಪ್ರಹ್ಲಾದ್ ಜೋಶಿ /ವಿಜಯ್ ಸಂಕೇಶ್ವರ, ಕೊಪ್ಪಳ – ಸಿ.ವಿ. ಚಂದ್ರಶೇಖರ್,ಸಿಂಗನಾಳ್ ವಿರೂಪಾಕ್ಷಪ್ಪ, ಸಂಗಣ್ಣ ಕರಡಿ, ಬೀದರ್ -ಭಗವಂತ ಖೂಬಾ ಅಥವಾ ಮಲ್ಲಿಕಾರ್ಜುನ ಖೂಬಾ, ಹಾವೇರಿ ಶಿವಕುಮಾರ್ ಉದಾಸಿ, ಬೆಳಗಾವಿ -ಸುರೇಶ್ ಅಂಗಡಿ ಅಥವಾ ಪ್ರಭಾಕರ್ ಕೋರೆ, ಬಾಗಲಕೋಟೆ – ಪಿ.ಎಚ್. ಪೂಜಾರ್, ಸಂಗಮೇಶನಿರಾಣಿ, ಪಿ.ಸಿ. ಗದ್ದಿಗೌಡರ್, ವಿಜಯಪುರ – ರಮೇಶ್ಜಿಗಜಣಗಿ, ಹಾಸನ – ಯೋಗಾ ರಮೇಶ್, ಒಂದು ವೇಳೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಕಾಂಗ್ರೆಸ್ ಮುಖಂಡ ಎ. ಮಂಜು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ್ದಾರೆ.
ಮಂಡ್ಯ – ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದು, ಹಾಗೊಂದು ವೇಳೆ ಬಿಜೆಪಿಗೆ ಸೇರಲು ಸುಮಲತಾ ಒಪ್ಪಿಕೊಂಡರೆ ಇವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಮುಖಂಡರು ಉದ್ದೇಶಿಸಿದ್ದಾರೆ. ಬಳ್ಳಾರಿಯಲ್ಲಿ ಶಾಸಕ ನಾಗೇಂದ್ರ ಅವರ ಸಹೋದರ ಬಳ್ಳಾರಿ – ವೆಂಕಟೇಶ್ ಅಥವಾ ಜೆ.ಶಾಂತಾ, ರಾಯಚೂರು – ಸಣ್ಣಪಕ್ಕೀರಪ್ಪ/ತಿಪ್ಪರಾಜ ಹವಾಲ್ದಾರ್, ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟರೆ, ಹಾಲಿ ಕಾಂಗ್ರೆಸ್ ಸಂಸದ ಬಿ.ವಿನಾಯಕ್ಗೆ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸುವ ಸಾಧ್ಯತೆಯಿದೆ. ಕಲಬುರಗಿಯಲ್ಲಿ – ಉಮೇಶ್ಜಾಧವ್ ಸ್ಪರ್ಧಿಸಲಿದ್ದಾರೆ.