ಬಿಜೆಪಿ ಗೆಲುವು ಖಚಿತ : ಜಿ.ಎಸ್.ಬಸವರಾಜು

ಮಧುಗಿರಿ:

         ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾಜಪ ಪಕ್ಷದ ವಿರುದ್ಧ ಯಾರೇ ಸ್ಪರ್ಧಿಸಿದರೂ ನಮ್ಮ ಪಕ್ಷದ ಗೆಲವು ಖಚಿತವೆಂದು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಳಿಸಿದರು.

        ಪಟ್ಟಣದ ಮಂಜುನಾಥ ಕಂಫಟ್ರ್ಸನಲ್ಲಿ ಶುಕ್ರವಾರ ಏರ್ಪಡಿಸಿದ್ದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯ ಹಲವು ಜನಪರ ಯೋಜನೆಗಳೆ ನಮ್ಮ ಗೆಲುವಿಗೆ ಶ್ರೀ ರಕ್ಷೆ. ಮಾಜಿ ಪ್ರಧಾನಿ ದೇವೇಗೌಡರು ನೀರು ಹಂಚಿಕೆ ವಿಚಾರದಲ್ಲಿ ನಮ್ಮ ಜಿಲ್ಲೆಯನ್ನು ಅತ್ಯಂತ ಹೀನಾಯಾವಾಗಿ ಖಂಡಿದ್ದು ಇಲ್ಲಿನ ಜನತೆಯ ಬರಗಾಲ ಅಂದು ಅವರಿಗೆ ಅರ್ಥವಾಗಿರಲಿಲ್ಲವೇ ಇಂದೂ ನಮ್ಮ ಜನರ ಮತ ಮಾತ್ರ ಇವರಿಗೆ ಬೇಕಾಗಿದೆ ಇಂತಹವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೆ.

       ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಯಾಗುವುದು ನಿಶ್ಚಿತವಾಗಿದ್ದು ಜಿಲ್ಲೆಯ ಜನರಿಗೆ ಏನೇ ಪೊಳ್ಳು ಭರವಸೆ ಆಶ್ವಾಸನೆ ನೀಡಿದರು ಈ ಹಿಂದೆ ನಾನು ಸಂಸದನಾಗಿ ಜಿಲ್ಲೆಗೆ ನೀಡಿರುವ ಕೊಡುಗೆಯಿಂದ ಇಲ್ಲಿನ ಜನ ನನ್ನನ್ನು ಬೆಂಬಲಿಸುತ್ತಾರೆ ಕಾರ್ಯಕರ್ತರು ಶ್ರಮವಹಿಸಿ ದೇಶದ ಹಿತಕ್ಕಾಗಿ ಮೋದಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

       ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಎಸ್.ಈ.ರಮೇಶ್ ರೆಡ್ಡಿ, ತಾಲೂಕು ಪದಾಧಿಕಾರಿಗಳಾದ ಬಿ.ಎನ್.ಲಕ್ಷ್ಮೀಪತಿ, ಎಂ.ಸುರೇಶ್, ಹಿತೇಶ್, ನಾಗೇಂದ್ರ, ಮನು ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link