ಹಾನಗಲ್ಲ :
ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಹಿರಿಯ ಉತ್ತಮ ರಾಜಕಾರಣಿ ಎಂದು ಹೆಸರು ವಾಸಿಯಾದ ಕೇಂದ್ರ ರಸಗೊಬ್ಬರ ಸಚಿವ ಎಚ್.ಎನ್.ಅನಂತಕುಮಾರವರ ನಿಧನಕ್ಕೆ ಹಾನಗಲ್ಲ ತಾಲೂಕ ಬಿಜೆಪಿ ಸಂತಾಪ ವ್ಯಕ್ತಪಡಿಸಿತು.
ಸೋಮವಾರ ಪಟ್ಟಣದ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕಾರ್ಯಕರ್ತರನ್ನು ಸಮಾನವಾಗಿ ಕಂಡು ಪಕ್ಷದ ಹಿತಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅನಂತಕುಮಾರ, ಒಬ್ಬ ಆದರ್ಶ ರಾಜಕಾರಣಿ ಆಗಿದ್ದರು. ಜಾತಿ ಪಕ್ಷ ಭೇದವಿಲ್ಲದೆ ರಾಜ್ಯದ ಹಿತಕ್ಕೆ ಕಾಳಜಿಯಿಂದ ಕೆಲಸಮಾಡುತ್ತಿದ್ದ ಅನಂತಕುಮಾರವರು ಈ ರಾಜ್ಯದ ಹೆಮ್ಮೆಯಾಗಿದ್ದರು.
ಹಿರಿ ಕಿರಿಯ ನಾಯಕರೊಂದಿಗೆ ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಿದ್ದ ಅನಂತಕುಮಾರವರ ನೇಡೆ ನುಡಿಗಳು ಮಾದರಿಯಾಗಿದ್ದವು ಎಂದು ತಿಳಿಸಿದ ಅವರು, ಅನಂತಕುಮಾರವರ ಅಗಲಿಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪಕ್ಷಾತೀತವಾಗಿ ನಾಯಕರು ದು:ಖ ವ್ಯಕ್ತಪಡಿಸಿದ್ದಾರೆ ಎಂದರು
ಅನಂತಕುಮಾರವರು ವಿದ್ಯಾರ್ಥಿ(ಎಬಿವಿಪಿ)ಸಂಘಟನೆಯ ಮೂಲಕ ಸಂಘಟನಾ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ಬಿಜೆಪಿಯ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವುದರೊಂದಿಗೆ 6 ಬಾರಿ ಬೆಂಗಳೂರ ದಕ್ಷೀಣ ಲೋಕಸಭಾ ಚುನಾವಣೆ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದ ಅನೇಕ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದವರು. ರೈತರ ರಸಗೊಬ್ಬರ ಕಾಳಸಂತೆಯಲ್ಲಿ ಮಾರಟವಾಗದಂತೆ, ದೇಶದ ಬೊಕ್ಕಸಕ್ಕೆ 10 ಕೋಟಿ ಸಾವಿರ ಉಳಿತಾಯ ರೈತರಿಗೆ ನೆರವಾದವರು. ದೇಶಾದ್ಯಂತ ಕಡಿಮೆ ದರದಲ್ಲಿ ದೊರೆಯುವ ಜನೌಷಧಿ ಕೇಂದ್ರಗಳನ್ನು ಪ್ರಾರಂಬಿಸಿ ಕಡಿಮೆ ದರದಲ್ಲಿ ಔಷಧಿಗಳು ದೊರಯುವಂತೆ ಮಾಡುವ ಜೊತೆಗೆ ಹೃದಯ ಮಂಡಿ ಶಸ್ತ್ರ ಚಿಕಿತ್ಸೆಯಂತ ಬೆಲೆಯನ್ನು ಕಡಿಮೆ ಮಾಡಿ ಬಡವರಿಗೆ ಚಿಕಿತ್ಸೆ ಸಿಗುವಂತೆ ಮಾಡಿದಂತವರು ಅವರ ಅಗಲಿಕೆಯಿಂದ ಪಕ್ಷಕ್ಕೆ ,ರಾಜ್ಯಕ್ಕೆ, ದೇಶಕ್ಕೆ ಹಾಗೂ ಬಡವರಿಗೆ ತುಂಬಲಾರದ ನಷ್ಠವಾಗಿದೆ ಎಂದರು.
ಈ ಸಂಧರ್ಭದಲ್ಲಿ ಬಿ.ಎಸ್.ಅಕ್ಕಿವಳ್ಳಿ, ಎ.ಎಸ್.ಬಳ್ಳಾರಿ, ಹಸೇನಾಬಿ ನಾಯ್ಕನವರ, ರವಿರಾಜ ಕಲಾಲ, ಪ್ರಶಾಂತ ಕಾಮನಹಳ್ಳಿ, ಸಂತೋಷ ಟೆಕೋಜಿ, ಚಂದ್ರಪ್ಪ ಹರಿಜನ, ಬೋಜರಾಜ ಕರೂದಿ, ಸಂತೋಷ ಭಜಂತ್ರಿ, ಜಮೀರ್ಅಹ್ಮದ್ ದರ್ಗಾ,ಚಂದ್ರು ಉಗ್ರಣ್ಣನವರ, ಮಂಜುನಾಥ ಬಸವಂತಕರ, ನಾಗೇಂದ್ರ ಬೊಮ್ಮನಹಳ್ಳಿ, ಚಮನ್ಸಾಬ್ ಕಿತ್ತೂರ, ಪುಟ್ಟು ಹುಳ್ಳಿಕಾಶಿ, ಪ್ರಶಾಂತ ಗೊಂದಿ, ಅರ್ಜುನ ಬಾಯಮ್ಮನವರ, ಕೊಟೆಪ್ಪ ಚಿಕ್ಕಣ್ಣವರ, ಲಕ್ಷ್ಮಣ ಕೊಂಚಿಗೊಲ್ಲರ,ವಿರುಪಾಕ್ಷ ಕೋರಿ, ಶಿವಕುಮಾರ ಹಳೆಕೋಟಿ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ