ಬ್ಯಾಡಗಿ:
ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ಮತ್ತು ಕೈಗಾರಿಕಾ ನೀತಿಗಳಿಂದ ಹಾಗೂ ರೂಪಾಂತರ ಸುಧಾರಣೆಗಳಿಂದಾಗಿ ಖಾಸಗಿ ವಲಯದಲ್ಲಿ ಹೂಡಿಕೆಯ ದರ ಹೆಚ್ಚಾಗಿ ಭಾರತದ ಅಭಿವೃದ್ಧಿಯೂ ಸಹ ವೃದ್ದಿಸುತ್ತಿದ್ದು, ಇದರಿಂದ ದೇಶದಲ್ಲಿ ನಿರಂತರವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಲಿವೆ ಎಂದು ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಟದ ಸಂಚಾಲಕ ವಿಶ್ವನಾಥ ಭಟ್ ಹೇಳಿದರು.
ಅವರು ತಾಲೂಕಿನ ಮೋಟೆಬೆನ್ನೂರ ಗ್ರಾಮದ ಬಳ್ಳಾರಿ ರುದ್ರಪ್ಪ ಕಾಲೇಜ್ ಸಭಾಭವನದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಪಕ್ಷದ ವಿಶೇಷ ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ 2014 ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಮೂರು ಪ್ರಮುಖ ವಿಚಾರಗಳನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಇತ್ಯರ್ಥ ಪಡಿಸುವುದಾಗಿ ಘೋಶಿಸಿತ್ತು, 1) ಆರ್ಥಿಕ ಬಿಕ್ಕಟ್ಟು, 2) ಭ್ರಷ್ಟಾಚಾರ 3) ಭರವಸೆಗಳನ್ನು ಅನುಷ್ಠಾನಗೊಳಿಸುವುದು. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಮೂರು ಪ್ರಮುಖ ವಿಷಯಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ದೇಶದ ಸುಭದ್ರತೆಯನ್ನು ಕಾಪಾಡುವುದರೊಂದಿಗೆ ಅಭಿವೃದ್ಧಿ ಪಥದೊಂದಿಗೆ ಮುನ್ನಡೆ ಸಾಧಿಸುತ್ತಲಿದೆ ಎಂದರು.
ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪ್ರತಿಯೊಬ್ಬ ಕಾರ್ಯಕರ್ತನೂ ಹೆಮ್ಮೆಯಿಂದ ಬಿಜೆಪಿ ಪರ ಮತ ಯಾಚಿಸಿ ಮತ್ತೆ ಕೇಂದ್ರದಲ್ಲಿ ಮೋದಿ ಸರಕಾರಕ್ಕೆ ಮನ್ನಣೆ ನೀಡಬಹುದು.2014 ರಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದಾಗ ಅವ್ಯವಸ್ಥೆಯ ಆಗರವಾಗಿದ್ದ ಆರ್ಥಿಕ ವ್ಯವಸ್ಥೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಪೂರ್ವ ಯೋಜಿತ ಕ್ರಮ ಅನುಸರಿಸುವ ಮೂಲಕ ಮೊದಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿ ಅನಗತ್ಯವಾಗಿ ಕಾರ್ಪೋರೇಟ ವಲಯಕ್ಕೆ ಹರಿದು ಹೋಗುತ್ತಲಿದ್ದ, ಹಣದ ಮೂಲವನ್ನು ಕಡಿತಗೊಳಿಸುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ, ಆದಾಯದ ಮೂಲವನ್ನು ಪ್ರಾಪಿಟ್ ಶೇರ್ ಬದಲು ರೆವಿನ್ಯೂ ಶೇರ್ ಎಂದು ಬದಲಾಯಿಸಿ ಖಚಿತ ಆದಾಯ ಸರಕಾರಕ್ಕೆ ಬರುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಮೋದಿ ಸರಕಾರ ಮಾಡಿದೆ ಎಂದರು.
ಕೇಂದ್ರ ಸರಕಾರ ಕೃಷಿ ರೈತ ಸಮುದಾಯಕ್ಕೆ ಬಹುಮುಖಿ ಯೋಜನೆಗಳನ್ನು ಜಾರಿಗೊಳಿಸಿದೆ, ಯುವಕರಿಗೆ ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ವಿವಿಧ ವಲಯಗಳಲ್ಲಿ ಉದ್ಯೋಗಗಳ ಸೃಷ್ಟಿ ಮಾಡಿದೆ. ಮಹಿಳೆಯರಿಗೆ ಸಬಲೀಕರಣ ಹಾಗೂ ಆಧ್ಯತೆಯನ್ನು ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅವುಗಳಲ್ಲಿ ಪ್ರಮುಖವಾಗಿ ಬಯಲು ಶೌಚಾಲಯ ಮುಕ್ತ, ಉಜ್ವಲ್, ಜನಧನ ಬ್ಯಾಂಕ್ ಖಾತೆಯ ಮೂಲಕ 10 ಸಾವಿರ ಓವರ್ ಡ್ರಾಪ್ ಪಡೆಯುವ ಸೌಲಭ್ಯ, ಮುದ್ರಾಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ, ಇಂದ್ರ ಧನುಷ್ ಹಾಗೂ ಭೇಟಿ ಬಚಾವೋ-ಭೇಟಿ ಪಡಾವೋ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಪ್ರಮುಖವಾಗಿವೆ ಎಂದರು.
ದುರ್ಬಲ ವರ್ಗದವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗಾಗಿ ಜನರಿಕ್ ಔಷಧಿ ಮಳಿಗೆಗಳು, ಉಚಿತ ಡಯಾಲಿಸಿಸ್ ಶೇ.50 ರಿಂದಾ 70 ರಷ್ಟು ಕಡಿಮೆ ಬೆಲೆಯಲ್ಲಿ ಹೃದಯದ ಸ್ಟೆಂಟ್ ಮತ್ತು ಮೊಣಕಾಲು ಇಂಪ್ಲಾಟ್ ಸೌಲಭ್ಯ, ಕಾರ್ಮಿಕ ವರ್ಗಕ್ಕಾಗಿ ಕನಿಷ್ಠವೇತನ, ಶೇ.42ಕ್ಕೆ ಏರಿಕೆ, ಯುವ ಪೀಳಿಗೆಗೆ ಉನ್ನತ ಶಿಕ್ಷಣಕ್ಕಾಗಿ ಹಲವು ವಿಶ್ವವಿದ್ಯಾಲಯಗಳು ಹಾಗೂ 103 ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಲಾಗಿದೆ ಎಂದರಲ್ಲದೇ ಮುಖ್ಯವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವ ಹೊಸ ಪ್ರಯೋಗವನ್ನು ಜಾರಿ ಮಾಡಿ ಸಂದರ್ಶನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ ನಡೆಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಟದ ಸಂಚಾಲಕ ಮಂಜುನಾಥ ಪುತಲೇಕರ ವಹಿಸಿದ್ದರು. ಅತಿಥಿಯಾಗಿ ಪಿಕಾರ್ಡ ಬ್ಯಾಂಕ್ ರಾಜ್ಯ ಸದಸ್ಯ ಸುರೇಶ ಯತ್ನಳ್ಳಿ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
