ಹಗರಿಬೊಮ್ಮನಹಳ್ಳಿ:
ಬಳ್ಳಾರಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಜೆ.ಶಾಂತರವರ ಗೆಲುವು ಸಾಧಿಸುವ ಮೂಲಕ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಲಿದೆ ಎಂದು ಮಾಜಿ ಶಾಸಕ ಕೆ.ನೇಮಿರಾಜ್‍ನಾಯ್ಕ್ ಭರವಸೆ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, ಅಭ್ಯರ್ಥಿ ಜೆ.ಶಾಂತರವರ ಪರವಾಗಿ ಶಾಸಕ ಶ್ರೀರಾಮುಲು ನೇತೃತ್ವದಲ್ಲಿ ನಮ್ಮ ಕ್ಷೇತ್ರದ ಡಣಾಪುರದಿಂದ ಅ.20ರಿಂದ ಆರಂಭವಾಗುವ ಪ್ರಚಾರ ಕಾರ್ಯವು ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಲಿದ್ದು, ಎರಡು ದಿನಗಳ ಕಾಲ ಅ.21ರವರೆಗೆ ಒಟ್ಟು 31 ಬಹಿರಂಗ ಪ್ರಚಾರ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಅ.30ರಿಂದ 31ರವರೆಗೆ ಅಭ್ಯರ್ಥಿ ಜೆ.ಶಾಂತರವರೇ ಆಗಮಿಸಲಿದ್ದು, ಮತ್ತೊಮ್ಮೆ ಕ್ಷೇತ್ರದೆಲ್ಲೆಡೆ ಪ್ರಚಾರ ನಡೆಸಲಾಗುವುದು. ಜೆ.ಶಾಂತರವರು ನಮ್ಮ ಜಿಲ್ಲೆಯವರೇ ಆಗಿರುವುದಿಂದ ಇಲ್ಲಿಯ ಸಮಸ್ಯೆಗಳ ಬಗ್ಗೆ ಅವರಿಗೆ ಹೆಚ್ಚಿನ ಜವಬ್ದಾರಿ ಇರುತ್ತದೆ. ಆ ಕಾರಣಕ್ಕೆ ಶಾಂತರವರನ್ನು ನಾವು ಗೆಲ್ಲಿಸಕೊಳ್ಳಬೇಕಿದೆ.
ಈ ಉಪಚುನಾವಣೆಯು ಮುಂದೆಬರಲಿರುವ 2019ರ ಲೋಕಾಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ಈಗಿರುವ ಸಮಿಶ್ರ ಸರ್ಕಾರದವರ ದುಡ್ಡಿನ ದರ್ಪ ಹಾಗೂ ದಬ್ಬಾಳಿಕೆಗೆ ಜನತೆ ರೋಷಿ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಲಿವೆ. ಆರ್ಥಿಕವಾಗಿ ಭಾರತವನ್ನು ಸದೃಢವಾಗಿಸಲು ಮೋದಿಯವರು ಅವಿರತವಾಗಿ ಶ್ರಮಿಸುತಿದ್ದಾರೆ. ಅವರ ಜನಪರ ಯೋಜನೆಗಳನ್ನೆ ಮುಂದಿಟ್ಟುಕೊಂಡು ಈ ಉಪಚುನಾವಣೆಯಲ್ಲೂ ಸಹ ಜನರ ಮತಯಾಚಿಸುತ್ತೇವೆ ಎಂದರು.
ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸಾಲಮನ್ನಾದ ನಾಟಕವಾಡುತ್ತಿದೆ, ಈ ಭರವಸೆ ರೈತರಿಗೆ ಬಿಸಿ ತುಪ್ಪವಾಗಿದೆ ಎಂದು ಲೇವಡಿ ಮಾಡಿದರು. ಈಗಿನ ಶಾಸಕರು ಚುನಾವಣೆಯಲ್ಲಿ ಕೆಲವೆಡೆ ಜನರು ಅಭಿವೃದ್ಧಿ ಕುರಿತು ಪ್ರಶ್ನಿಸುತಿದ್ದರು. ಅದನ್ನೆ ಜನರ ವಿರುದ್ಧ ಸೇಡಿನರಾಜಕಾರಣ ಮಾಡುತಿದ್ದಾರೆ. ಮರಳು ಮಾಫಿಯಾ ನಡೆಯುತಿದ್ದರು. ರಾಜಕಾರಣಕ್ಕೆ ಅಧಿಕಾರಿಗಳು ಮುದುಡಿ ಕುಳಿತಿದ್ದಾರೆ. ಅಲ್ಲದೆ, ಒಂದು ರೀತಿ ಇದು ಹಪ್ತಾ ರಾಜಕಾರಣ ನಡೆಯುತ್ತಿದೆ ಎಂದು ಕಿಚಾಯಿಸಿದರು. ನಮ್ಮ ಜಿಲ್ಲೆಯಲ್ಲಿ ಆಡಳಿತ ನಿಂತ ನೀರಾಗಿದ್ದು, ಈಗ ಇಂದಿರಾಗಾಂಧಿ ಕಾಲದ ತುರ್ತುಪರಿಸ್ಥಿತಿಯ ರಾಜಕಾರಣ ಸ್ಥಿತಿ ಬಂದಂತಾಗಿದೆ ಎಂದರು.
ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಯಾವುದೇ ವೈಮನಸ್ಸಿಲ್ಲ. ನಮ್ಮ ಕ್ಷೇತ್ರದಿಂದ ಅಭ್ಯರ್ಥಿ ಜೆ.ಶಾಂತರವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ.ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್, ಮರಿಯಮ್ಮನಹಳ್ಳಿ ಅಧ್ಯಕ್ಷ ಹಾಗೂ ಕ್ಷೇತ್ರದ ಉಸ್ತುವಾರಿ ಬಿ.ಎಂ.ಎಸ್.ಪ್ರಕಾಶ್, ಕಾರ್ಯದರ್ಶಿ ಜೆ.ಬಿ.ಶರಣಪ್ಪ, ರೈತ ಮೋರ್ಚ ಪಿ.ಸೂರ್ಯಬಾಬು, ಒ.ಬಿ.ಸಿ.ಘಟಕದ ಅಧ್ಯಕ್ಷ ನಿಂಗಪ್ಪ, ಕೆ.ರೋಹಿತ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಗಂಗಣ್ಣ, ನಾಗರಾಜ್ ಹಾಗೂ ರಾಹುಲ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








