ನಿರ್ಭಯಾ ಹಂತಕರಿಗೆ ಗಲ್ಲು: ಮಾನವ ಹಕ್ಕು ಚರಿತ್ರೆಗೆ ಕಪ್ಪು ಚುಕ್ಕೆ : ಅಮ್ನೆಸ್ಟಿ ಇಂಡಿಯಾ

ನವದೆಹಲಿ:

   ಕಳೆದ 7 ವರ್ಷದಿಂದ ದೇಶದ ಜನತೆ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವುದು ಯಾವಾಗ ಎಂದು ಕಾಯುತ್ತಿದ್ದರೆ ಅವರ ಪರ ನಿಂತ ಏಕೈಕ ಸಂಸ್ಥೆ ಅಮ್ನೆಸ್ಟಿ ಇಂಡಿಯಾ , ಇಂದು ಮುಂಜಾನೆ ಅವರನ್ನು ಗಲ್ಲಿಗೇರಿಸಿದ ಬಳಿಕ ಪ್ರತಿಕ್ರಯೆ ನೀಡಿದ ಸಂಸ್ಥೆ ಈ ಗಲ್ಲು ಶಿಕ್ಷೆ ಭಾರತದಲ್ಲಿ ಮಾನವ ಹಕ್ಕು ಚರಿತ್ರೆಗೆ ಬಳಿದ ಕಪ್ಪು ಚುಕ್ಕೆ ಎಂದಿದೆ. 

   ನಿರ್ಭಯಾ ಹತ್ಯಾಚಾರಿಗಳನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿರುವ ಅಮ್ನೆಸ್ಟಿ ಇಂಡಿಯಾ ಸಂಸ್ಥೆ, ಮರಣ ದಂಡನೆ ಎಂದೂ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ ಪರಿಹಾರವಲ್ಲ ಎಂದು ಹೇಳಿದೆ. ಅಲ್ಲದೆ ನಿರ್ಭಯಾ ಹಂತಕರ ಗಲ್ಲು ಭಾರತದ ಮಾನವ ಹಕ್ಕು ಹೋರಾಟದ ಮೇಲಾದ ಅಳಿಸಲಾಗದ ಕಲೆ ಎಂದು ವಿಷಾಧ ವ್ಯಕ್ತಪಡಿಸಿದೆ.

   ‘2015 ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ಭಾರತದಲ್ಲಿ ಗಲ್ಲು ಶಿಕ್ಷೆಯಾಗಿರಲಿಲ್ಲ. ಆದರೆ ಇಂದು ಏಕಕಾಲದಲ್ಲೇ ನಾಲ್ಕು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಭಾರತದಲ್ಲಿನ ಜನಪ್ರತಿನಿಧಿಗಳು ಅಪರಾಧವನ್ನು ನಿಭಾಯಿಸುವ ಅಥವಾ ನಿಯಂತ್ರಿಸುವುದಕ್ಕಾಗಿ ಮರಣ ದಂಡನೆ ಅಥವಾ ಗಲ್ಲು ಶಿಕ್ಷೆಯನ್ನು ವೈಭವೀಕರಿಸಿದ್ದಾರೆ. ಆದರೆ ಮಹಿಳೆಯ ವಿರುದ್ಧದ ದೌರ್ಜನ್ಯ ತಡೆಗೆ ಮರಣದಂಡನೆ ಎಂದಿಗೂ ಪರಿಹಾರವಲ್ಲ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯಲು ಸಂರಕ್ಷಣಾ ಕಾರ್ಯ ವಿಧಾನಗಳಂತಹ ಪರಿಣಾಮಕಾರಿ, ದೀರ್ಘಕಾಲೀನ ಪರಿಹಾರಗಳನ್ನು ಜಾರಿಗೊಳಿಸಬೇಕಿದೆ. ತನಿಖಾ ವ್ಯವಸ್ಥೆಯನ್ನು ಸುಧಾರಿಸುವುದು, ಕಾನೂನು ಕ್ರಮಗಳನ್ನು ಬಲಪಡಿಸುವುದು ಮತ್ತು ಸಂತ್ರಸ್ಥ ಕುಟುಂಬಗಳಿಗೆ ಬೆಂಬಲ ನೀಡುವುದು ನಿಜಕ್ಕೂ ಅತ್ಯಗತ್ಯವಾಗಿದೆ. ದೂರಗಾಮಿ ಕಾರ್ಯವಿಧಾನ ಮತ್ತು ಸಾಂಸ್ಥಿಕ ಸುಧಾರಣೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link