ನಿಮ್ಮೂರಿನ ನಿಮ್ಮ ಮನೆ ಮಗನನ್ನು ಹರಸಿ ಹಾರೈಸಿ ಬೆಳೆಸಿ:-ಸಂತೋಷ್‍ಕುಮಾರ್

ಹಗರಿಬೊಮ್ಮನಹಳ್ಳಿ

        ನಿಮ್ಮೂರಿನ ನಿಮ್ಮ ಮನೆ ಮಗನಾದ ನಾನು ಈಗತಾನೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಸಂತೋಷ್‍ಕುಮಾರ್ ಬೆಟಗೇರಿ ಹೇಳಿದರು.

         ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಳೆ ಹಗರಿಬೊಮ್ಮನಹಳ್ಳಿಯ ಸ.ಹಿ.ಪ್ರಾ.ಶಾಲೆ ಹಳೇ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಆಯೋಜಿಸಲಾಗಿದ್ದ ‘ಒಂಬತ್ತನೇ ಅದ್ಭುತ’ ಕನ್ನಡ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿ ಈದಿನ ನನ್ನೆಲ್ಲಾ ಪ್ರಾಥಮಿಕ ಶಾಲೆಯ ಸ್ನೇಹಿತರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸಂತೋಷ ತಂದಿದೆ ಬೆಲೆಕಟ್ಟಲಾಗದ ಇವರ ಸ್ನೇಹ ವಿಶ್ವಾಸವನ್ನುಗಳಿಸಿದ್ದೇನೆ ಎಂಬ ಹೆಮ್ಮೆ ನನಗಿದೆ ಅತಿ ಶೀಘ್ರದಲ್ಲೆ ಬಿಡುಗಡೆ ಕಾಣಲಿರುವ ‘ಒಂಬತ್ತನೇ ಅದ್ಬುತ’ ಎಂಬ ಕನ್ನಡ ಸಿನಿಮವನ್ನು ನಿರ್ಮಾಣ, ನಿರ್ದೇಶನ ಮಾಡುವುದರ ಮೂಲಕ ನಾನೆ ಅದರಲ್ಲಿ ನಾಯಕನಾಗಿ ಪ್ರಪ್ರಥಮ ಬಾರಿಗೆ ನಟಿಸಿದ್ದೇನೆ.

         ನಮ್ಮದು ಕಡಿಮೆ ಬಜೆಟ್‍ನ ಸಿನಿಮಾವಾದರು ಸಂಪೂರ್ಣ ಯೂತ್‍ಫುಲ್ ಆಗಿರುವುದರಿಂದ ಯುವಕರೇ ಚಿತ್ರದ ಪ್ರೇಕ್ಷಕರಾಗಿರುತ್ತಾರೆ. ಜೀವನದಲ್ಲಿ ಏನಾದರು ಒಂದು ಸಾಧಿಸಬೇಕೆಂದು ಗಾಂಧಿನಗರಕ್ಕೆ ಬಂದ ನಾನು ಸುಮಾರು 15 ವರ್ಷಗಳ ಕಾಲ ಚಿತ್ರ ರಂಗದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿದ್ದೇನೆ. ಆ ಅನುಭವದಿಂದಲೇ ಸ್ವಂತ ಚಿತ್ರ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದರು.

       ಪತ್ರಕರ್ತ ಜೆ.ನಾಗರಾಜ್ ಮಾತನಾಡಿ ನಮ್ಮೂರಿನ ಒಬ್ಬ ಹುಡುಗ ಈ ಮಟ್ಟಿಗೆ ಗಾಂಧಿ ನಗರದಲ್ಲಿ ‘ಒಂಬತ್ತನೇ ಅದ್ಬುತ’ ಎಂಬ ಹೆಸರಿನ ಟ್ರೈಲರ್‍ನಿಂದಲೇ ಸೌಂಡ್ ಮಾಡುತ್ತಿರುವುದು ಇಡೀ ನಮ್ಮೂರಿಗೆ ಹೆಮ್ಮೆಯ ಸಂಗತಿ. ಸಂತೋಷ್‍ಕುಮಾರ್ ಬೆಟಗೇರಿಯವರ ಹೊಸ ಆಲೋಚನೆಗಳು ಈ ಚಿತ್ರದ ಪೋಸ್ಟರ್‍ನಲ್ಲಿ ಅನಾವರಣಗೊಂಡು ನೋಡುಗರನ್ನು ಆಕರ್ಷಿಸುತ್ತಿವೆ. ಹಾಗಾಗಿಯೇ ಯೂಟೂಬ್‍ನಲ್ಲಿ ಲಕ್ಷಾಂತರ ಜನ ಈ ಚಿತ್ರದ ಟ್ರೈಲರ್‍ನ್ನು ವೀಕ್ಷಿಸುತ್ತಿದ್ದಾರೆ.

         ಅದೇರೀತಿ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲೂಸಹ ಈ ಯುವ ನಾಯಕ ನಿರ್ದೇಶಕನಿಗೆ ಜನಮನ್ನಣೆ ಸಿಗಲಿ. ಇವರಿಂದ ಇನ್ನೂ ಹಲವಾರು ಚಿತ್ರಗಳನ್ನು ನಾವು ನೋಡುವಂತಾಗಲಿ ಎಂದರು.

         ವೆಂಕಟೇಶ್ ಬಡಪ್ಪನವರ್ ಮಾತನಾಡಿ ಸಂತೋಷ್‍ಕುಮಾರ ಮತ್ತು ನಾವು ಚಿಕ್ಕಂದಿನಿಂದಲೂ ಸ್ನೇಹಿತರಾಗಿ ಹಾಡಿ ಬೆಳೆದಿದ್ದೇವೆ ಇಂದು ಅವರು ‘ಒಂಬತ್ತನೇ ಅದ್ಬುತ’ ಎಂಬ ಚಿತ್ರ ನಿರ್ಮಾಣ ಮಾಡಿ ನಿರ್ದೇಶಿಸುವುದರ ಜೊತೆಗೆ ತಾವೇ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ನಮಗೂ ಹಾಗೂ ನಮ್ಮೂರಿಗೂ ಹೆಮ್ಮೆಯ ಸಂಗತಿಯಾಗಿದೆ. ಅವರ ಚಿತ್ರ ಪ್ರಚಾರಕ್ಕೆ ನಾವೆಲ್ಲ ಸ್ನೇಹಿತರ ಬಳಗದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

          ಜಿಲಾನ್ ಭಾಷ ಮಾತನಾಡಿ ನಮ್ಮೊಟ್ಟಿಗೆ ಓದಿ ಬೆಳೆದ ಸ್ನೇಹಿತನೊಬ್ಬ ಸಿನಿಮಾ ಮಾಡುತ್ತಿದ್ದಾನೆಂದರೆ ನಮಗೆಲ್ಲಾ ಅದು ಸಂತಸದ ವಿಷಯವಾಗಿದೆ. ಹಗರಿಬೊಮ್ಮನಹಳ್ಳಿಯಿಂದ ಹೋಗಿ ಬೆಂಗಳೂರು ನಗರದಲ್ಲಿ 15 ವರ್ಷಗಳಕಾಲ ಚಿತ್ರ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರಬಳಿಯೂ ಕೆಲಸ ಕಲಿತಿರುವ ಸಂತೋಷ್ ಕುಮಾರ್ ಆ ಪ್ರತಿಭೆಯನ್ನೆಲ್ಲ ತಮ್ಮ ‘ಒಂಬತ್ತನೇ ಅದ್ಬುತ’ ಚಿತ್ರಕ್ಕೆ ಧಾರೆಎರೆದಿದ್ದಾರೆ. ಯುಟೂಬ್‍ನಲ್ಲಿ ಈಗಾಗಲೇ 4ಲಕ್ಷಕ್ಕೂ ಹೆಚ್ಚು ಜನ ಈ ಚಿತ್ರದ ಟ್ರೈಲರ್‍ನ್ನು ವೀಕ್ಷಿಸಿರುವುದೇ ಇವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

        ಈ ಸಂದರ್ಭದಲ್ಲಿ ವೀರೇಶ್ ಮಜ್ಗಿ, ಹಳೇ ಹ.ಬೊ.ಹಳ್ಳಿ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳ ಸ್ನೇಹಬಳಗದಿಂದ ಎಣ್ಣೆ ಯಾಸೀನ್,ವಿ.ರವಿಕುಮಾರ್, ಕೊಪ್ಪಳ ಕೊಟ್ರೇಶ್, ಎಸ್.ಎಂ.ಪ್ರಶಾಂತ್, ಕೋಡಿಹಳ್ಳಿ ರವಿಕುಮಾರ್, ಸಂಜೀವರೆಡ್ಡಿ, ಕಠಾರಿ ಶಂಕರ್, ಸಂಜೀವರೆಡ್ಡಿ, ಸಣ್ಣ ಕೊಟ್ರೇಶ್, ಹೆಚ್.ಎಂ.ರಾಜೇಶ್, ತಳವಾರ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link