ರಕ್ತದಾನ ಆಂದೋಲನವಾಗಬೇಕು- ಎಸ್. ನಾಗಣ್ಣ

ಬೆಂಗಳೂರು

      ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಇಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ನಗರದ ರೆಡ್ ಕ್ರಾಸ್ ಭವನದಲ್ಲಿ ಆಚರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳನ್ನು ಡಾ. ವಿ.ಎಲ್.ಎಸ್. ಕುಮಾರ್ ಉಪಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಇವರು ಸ್ವಾಗತಿಸಿ ಪರಿಚಯಿಸಿದರು.

     ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಆಗಮಿಸಿದ್ದ ಡಾ. ವೂಡೇ ಪಿ. ಕೃಷ್ಣ, ಗೌರವ ಪ್ರಧಾನ ಕಾರ್ಯದರ್ಶಿಗಳು, ಶೇಷಾದ್ರಿಪುರಂ ಶಿಕ್ಷಣ ದತ್ತಿ, ಬೆಂಗಳೂರು ಮಾತನಾಡಿ ಆರೋಗ್ಯಕರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಕೋವಿಡ್-19 ನಂತಹ ಕ್ಲಿಷ್ಟ ಸಮಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ 25 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿ ಅಗತ್ಯವಿರುವ ಬಡ ರೋಗಿಗಳಿಗೆ ರಕ್ತವನ್ನು ಪೂರೈಸಲಾಯಿತು. ಮಕ್ಕಳಿಗೆ ಮೌಲ್ಯಪೂರ್ಣ ತಿಳುವಳಿಕೆಯನ್ನು ಕೊಡಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ದೇಶದ ಜನರ ಆರೋಗ್ಯ ಕಾಪಾಡುವಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.

     ಸಮಾರಂಭದ ಅಧ್ಯಕ್ಷತೆಯನ್ನು ಎಸ್. ನಾಗಣ್ಣ ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರು ಇವರು ವಹಿಸಿದ್ದರು. ದೈವಿದತ್ತ ಪವಿತ್ರವಾದ ರಕ್ತ ಸದುಪಯೋಗವಾಗಬೇಕು. ಲಾಭರಹಿತ ಸಂಸ್ಥೆಗಳಿಗೆ, ಸೇವಾ ಮನೋಭಾವದ ಸಂಸ್ಥೆಗಳಿಗೆ ರಕ್ತವನ್ನು ಕೊಡುವ ವ್ಯವಸ್ಥೆಯಾಗಬೇಕು. ದೇಶಕ್ಕೆ 135 ಲಕ್ಷ ಯೂನಿಟ್ ರಕ್ತದ ಅಗತ್ಯವಿದೆ. ಮಾದ್ಯಮಗಳು ಇನ್ನೂ ಹೆಚ್ಚಾಗಿ ಸಮರ್ಥವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು. ‘ನಿನ್ನ ಸುರಕ್ಷತೆಯ ನಂತರ ನಿನ್ನ ಸೇವೆ ಮಾಡು’ ಎಂಬುದನ್ನು ತಿಳಿಸಿದರು. ಜೊತೆಗೆ ಇಂದು ರಕ್ತ ಲಾಭದಾಯಕ ಉದ್ದಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

     ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಉಪಸಮಿತಿಯ ಸದಸ್ಯರಾದ ರಾಜು ಚಂದ್ರಶೇಖರ್ ರವರು ಮಾತನಾಡಿ, ರಕ್ತದಾನದ ಮಹತ್ವವನ್ನು ತಿಳಿಸಿದರು. ಇದೇ ಸಮಾರಂಭದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಹಕರಿಸಿದ 10 ಸ್ವಯಂಪ್ರೇರಿತ ಸಂಸ್ಥೆಗಳನ್ನು ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೆಡ್ ಕ್ರಾಸ್ ಸzಸ್ಯರು, ರಕ್ತದಾನಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link