ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಿಕ್ತು ಸೂಪರ್‌ ಟ್ವಿಸ್ಟ್….!

ಬೆಂಗಳೂರು :

   ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಯಲಾಗಿದ್ದು, ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್ ನಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ರಕ್ತಸಿಕ್ತ ಫೋಟೋಗಳು ಪತ್ತೆಯಾಗಿವೆ.

   ಎಫ್ ಎಸ್ ಎಲ್ ಅಧಿಕಾರಿಗಳ ಮೊಬೈಲ್ ರಿಟ್ರೀವ್ ವೇಳೆ ಸ್ಫೋಟಕ ವಿಚಾರ ಬಯಲಾಗಿದೆ.ಎರಡು ಮೊಬೈಲ್ ಫೋನ್‌ನಲ್ಲಿ ರೇಣುಕಾಸ್ವಾಮಿಯ ನಾಲ್ಕು ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ.

   ಎಫ್ ಎಸ್ ಎಲ್ ನಲ್ಲಿ ರೇಣುಕಾಸ್ವಾಮಿಯ ನಾಲ್ಕು ಫೋಟೋಗಳು ರಿಟ್ರೀವ್ ಮಾಡಲಾಗಿದ್ದು, ಹಲ್ಲೆ ಬಳಿಕ ರೇಣುಕಾಸ್ವಾಮಿಯನ್ನು ಮಲಗಿಸಿರೋ ಫೋಟೋ, ಹಲ್ಲೆಗೊಳಗಾದ ಬಳಿಕ ರಕ್ತದ ಮಡುವಿನಲ್ಲಿ ರೇಣುಕಾಸ್ವಾಮಿ ಇರುವ 2 ಫೋಟೋಗಳು ಪತ್ತೆಯಾಗಿವೆಯಂತೆ. ಜೊತೆಗೆ ಆರೋಪಿಗಳು ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕೈ ಮುಗಿಯುತ್ತಿರುವ ಎರಡು ಫೋಟೋ ಸಿಕ್ಕಿವೆ ಎನ್ನಲಾಗಿದೆ.

    ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನದ ಬಳಿಕ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಎ1 ಆರೋಪಿ ಎಂದು, ದರ್ಶನ್ ರನ್ನು ಎ2 ಆರೋಪಿ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ ತನಿಖೆ ವೇಳೆ ಇಡೀ ಕೃತ್ಯದ ಸೂತ್ರಧಾರ ದರ್ಶನ್ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಇದೀಗ್ ದರ್ಶನ್ ರನ್ನು ಎ1 ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

   ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆರೋಪಿಗಳ ವಿವರವನ್ನು ಉಲ್ಲೇಖಿಸುವಾಗ ದರ್ಶನ್ ಅವರನ್ನು ಎ1 ಎಂದು ಪೊಲೀಸರು ಉಲ್ಲೇಖಿಸುವ ಸಾಧ್ಯತೆ ಇದೆ.

 

Recent Articles

spot_img

Related Stories

Share via
Copy link