ಸಂವಿಧಾನ ಬದಲಿಸಿದರೆ ರಕ್ತ ಕ್ರಾಂತಿ: ಡಿ.ಬಸವರಾಜ್

ದಾವಣಗೆರೆ:

   ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‍ರವರ ಜನ್ಮ ದಿನವನ್ನು ಇಂದು ಜಗತ್ತಿನಾದ್ಯಂತ ವಿಶ್ವಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ ತಿಳಿಸಿದರು.

    ನಗರದ ಡಾ|| ಅಂಬೇಡ್ಕರ್ ವೃತ್ತದಲ್ಲಿ ಎನ್.ಎಸ್.ಯು.ಐ. (ವಿದ್ಯಾರ್ಥಿ ಕಾಂಗ್ರೆಸ್) ಏರ್ಪಡಿಸಿದ್ದ ಅಂಬೇಡ್ಕರ್‍ರವರ 129ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ಕೆಲವು ಕೋಮುವಾದಿಗಳು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಯಿಸಿದರೆ ರಕ್ತ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದರು.

       ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಸಂವಿಧಾನದ ಪೀಠಿಕೆಯನ್ನು ಬೋದಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ವಿದ್ಯಾರ್ಥಿ ಕಾಂಗ್ರೆಸ್ ಎನ್.ಎಸ್.ಯು.ಐ ಉತ್ತರವಲಯ ಅಧ್ಯಕ್ಷರಾದ ಗಿರಿಧರ್ ಟಿ.ವಿ, ಕಾಂಗ್ರೆಸ್ ಮುಖಂಡರುಗಳಾದ ಮುಜಾಯದ್, ಎಸ್.ಎಂ. ಜಯಪ್ರಕಾಶ್, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್, ವಿನಯ್ ಜೋಗಪ್ಪನವರ್, ಕೆ.ಎಲ್. ಹರೀಶ್ ಬಸಾಪುರ್, ಕೊಂಡಜ್ಜಿ ಮಲ್ಲಿಕಾರ್ಜುನ್, ಹೆಚ್. ಹರೀಶ್, ಮನು ಡಿ. ದುಗ್ಗಪ್ಪ, ಕಮರ್‍ಅಲಿ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap