ಪುಸ್ತಕ ದಾನ ಮಹಾದಾನ : ಲಕ್ಷ್ಮೀ ಕಿರಣ್

ಬಳ್ಳಾರಿ

         ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2018 ಕಾರ್ಯಕ್ರಮವನ್ನು ನಗರ ಕೇಂದ್ರ ಗ್ರಂಥಾಲಯದ ಕಛೇರಿಯಲ್ಲಿ 14 ರಿಂದ 20 ರವರೆಗೆ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಪುಸ್ತಕ ದಾನ ಉದ್ಘಾಟನೆ ಪೂಜ್ಯ ಮಹಾಪೌರರಾದ ಆರ್.ಸುಶೀಲ ಬಾಯಿ ಚಾಲನೆ ನೀಡಿದರು,Sಖ.ರಂಗನಾಥ್ ಅವರ ಭಾವ ಚಿತ್ರಕ್ಕೆ ಪುಸ್ಪರ್ಚನೆ ಮಾಡಿದರು. ಸಾಹಿತಿಗಳಾದ ಶ್ರೀ ಧನ್ವಂತರಿ ಮಾನ್ವಿ ನಗರ ಗ್ರಂಥ ಪಾಲಕರು ಬಿ.ಇ.ಓ ವೆಂಕಟೇಶ ಪೂರ್ವ ವಲಯ ವೈ ಹನುಮಂತ ರೆಡ್ಡಿ ನಿವೃತ್ತ ಪ್ರಾರ್ಚಾರ್ಯರು ಬಳ್ಳಾರಿ ಇವರು ಗ್ರಂಥಾಲಯದ ಒದುಗರಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿದರು, ಅದರಂತೆ ಇನ್ನೋರ್ವ ಮಹಿಳೆ ಉಪನ್ಯಾಸಕಿಯಾಗಿ ನಳಂದ ಕಾಲೇಜ್‌ನಲ್ಲಿ ಸೇವೆ ಮಾಡುತ್ತ ಪುಸ್ತಕ ದಾನ ಮಾಡಿದರು,ಹೀಗೆ ಈ ಅಭಿಯಾನಕ್ಕೆ ಮೆರಗು ತಂದು ಕೊಟ್ಟರು.

       ನಗರದ ಅನಂತಪುರ ರಸ್ತೆಯಲ್ಲಿ ಇರುವ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿತ್ತು, ನಂತರ ಕೇಂದ್ರ ಗ್ರಂಥಾಲಯ ಅಧಿಕಾರಿ ಲಕ್ಷ್ಮಿ ಕಿರಣ್ ಮಾತಾನಾಡಿ ಅನ್ನ ದಾನ ನೇತ್ರ ದಾನ ಈ ಎಲ್ಲಾ ದಾನಗಳಲ್ಲಿ ಒಂದಾದ ಪುಸ್ತಕ ದಾನವು ಕೊಡ ಶ್ರೇಷ್ಠ ದಾನ ಎಂಬುದು ಮರೆಯಲಾಗದ ಸಂಗತಿ ಏಕೆಂದರೆ ಅನ್ನ ನೀಡಿದರೆ ಹಸಿವು ನೀಗುತ್ತೆ ನೇತ್ರ ದಾನ ಮಾಡಿದರೆ ಕಣ್ಣಿನ ದೃಷ್ಟಿಯಿಂದ ಪಾರಾಗಬಹುದು ಪುಸ್ತಕ ದಾನದಿಂದ ಎಲ್ಲವನ್ನು ಗಳಿಸುವ ಸಂಸತ್ತನ್ನು ನೀಡಿದಂತೆ ಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು,

         ಈ ಸಪ್ತಾಹದ ಉದ್ದೇಶ ಏನೆಂದರೆ ಯಾವುದೇ ವಿದ್ಯಾರ್ಥಿಗಳು ಅಥವಾ ನಾಗರೀಕರು ದೈನಂದಿನ ಜೀವನದಲ್ಲಿ ಅವರು ಬದುಕು ಸಾಗಿಸುವುದುಪುಸ್ತಕ ಕೊಂಡು ಒದಲು ಆರ್ಥಿಕ ಮುಗ್ಗಟ್ಟು ಉಂಟಾದ ಪರಿಣಾಮವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸಂಚಾರಿ ಗ್ರಂಥಾಲಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಹವ್ಯಾಸಿ ಓದುಗರಿಗೆ ಹತ್ತು ಹಲವು ಕಾರ್ಯಕ್ರಮ ದೊರಕಿಸಿಕೊಟ್ಟಿತು ನಗರದಲ್ಲಿ 12 ಗ್ರಂಥಾಲಯ ಹಾಗೂ 07 ಕೇಂದ್ರೀಯ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತವೆ, ಸಾಂಪ್ರದಾಯಿಕ ಗ್ರಂಥಾಲಯ ದಿಂದ ಡಿಜಿಟಲ್ ಗ್ರಂಥಾಲಯದ ಕಡೆಗೆ ನಾವು ಸಾಗುತ್ತಿದ್ದೇವೆ ಎಂಬುದು ಮಾಹಿತಿ ನೀಡಿದರು,

         ನಂತರದ ಭಾಗವಾದ ಉತ್ತಮ ಓದುಗರನ್ನು ಗುರುತಿಸಿ ನಾಲ್ಕು ಜನರಿಗೆ ಸನ್ಮಾನ ಮಾಡಿ ಅವರಿಗೆ ಮತ್ತು ಇತರರಿಗೆ ಸ್ಪೂರ್ತಿ ಪಡೆದು ಉತ್ತೇಜನ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಓದುಗರಿಗೆ ಅನುಕೂಲ ಕಲ್ಪಿಸುತ್ತದೆ,ಸನ್ಮಾನ ಕ್ಕೆ ಭಾಜನರಾದವರಲ್ಲಿ ಆಧಿ ಲಕ್ಷ್ಮೀ ಇವರು ಸರ್ಕಾರಿ ಅಧಿಕಾರಿ ಪಿಡಿಒ ಯಾಗಿ ಕಾರ್ಯ ನಿರ್ವಹಿಸುತ್ತ ಕೆ ಎ ಎಸ್ ಪರೀಕ್ಷೆ ಬರಿಯಲು ಈ ಗ್ರಂಥಾಲಯ ಪುಸ್ತಕದ ದಿಂದ ಆ ಮಟ್ಟಕ್ಕೆ ತಲುಪಿದೆ ಎಂದರು,

         ಡಾ.ಸತೀಶ್ ಹಿರೇಮಠ ಪ್ರಾರ್ಚಾರ್ಯರು ಕೊಟ್ಟರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಇವರು ವಿಶೇಷ ಉಪನ್ಯಾಸ ನೀಡಿ ಪುಸ್ತಕದ ಜ್ಞಾನ ಮತ್ತು ಮಹತ್ವದ ಪಾತ್ರವನ್ನು ತಿಳಿಸಿದರು ಈ ಸಂದರ್ಭದಲ್ಲಿ ಸಿದ್ದರಾಮ ಕಲ್ಮಠ ಜಿಲ್ಲಾದ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್‌ ಮಹಾನಗರ ಪಾಲಿಕೆ ಸದಸ್ಯ ಕೆರಕೊಡಪ್ಪ ಮಾಜಿ ಮೇಯರ್ ನಾಗಮ್ಮ ಹಾಗೂ ದಿನ ನಿತ್ಯವೂ ಓದುಗರು ಮುದ್ದು ಮಕ್ಕಳು ಪುಸ್ತಕ ದಾನ ಮಾಡಿದ ಪುಸ್ತಕ ಪ್ರೇಮಿಗಳು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link