ಹಾವೇರಿ :
ಶಹರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಬೂತಮಟ್ಟದ ಅಧ್ಯಕ್ಷ , ಸದಸ್ಯಗಳ , ಮುಖಂಡರುಗಳು ಹಾಗೂ ನಗರ ಸಭೆ ಸದಸ್ಯಗಳ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರ ಸಭೆ ಜರುಗಿತು.ನಗರ ಸಬೆ ಸದಸ್ಯರಾದ ಸಂಜೀವ ಕುಮಾರ ನೀರಲಗಿ ಮಾತನಾಡಿ ಕಾಂಗ್ರೇಸ್ ಅಭ್ಯರ್ಥಿ ಗೆಲುವಿಗೆ ಎಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ , ಮೋದಿ ಸರ್ಕಾರ ವೈಪಲ್ಯಗಳನ್ನು ಹಾಗೂ ಜನ ವಿರೋಧಿ ನೀತಿಯನ್ನು ಜನರಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳಿ , ಮತ್ತು ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ರವರ 5 ವರ್ಷದ ಜನಪ್ರೀಯ ಕಾರ್ಯಕ್ರಮಗಳಾದ ಅನ್ನ ಭಾಗ್ಯ ಕ್ಷೀರ ಭಾಗ್ಯಾ , ಮಾತೃ ಪೂರ್ಣ ಸಾಲ ಮನ್ನಾ , ಇಂದಿರಾ ಕ್ಯಾಂಟಿನ್ , ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಹಾಗೂ ಇಂತಹ ಅನೇಕ ಜನ ಪರ ಕಾರ್ಯಕ್ರಮಗಳನ್ನು ನಮ್ಮ ಹಿಂದಿನ ಕಾಂಗ್ರೇಸ್ ಪಕ್ಷ ಸರ್ಕಾದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸಿ
ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಜಿ ಸಚಿವರಾದ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣನವರ ಹಾವೇರಿ ನಗರಕ್ಕೆ ವಿಷೇಶ ಅನುದಾನದಲ್ಲಿ 50 ಕೋಟಿ ರೂಪಾಯಿ ತಂದಿರುತ್ತಾರೆ ಇಲ್ಲಿವರೆಗೂ ಕಾಮಗಾರಿಗಳು ನಡೆಯುತ್ತಿವೆ. ನಗರಕ್ಕೆ ಈಗಿನ ಶಾಸಕರು ಯಾವುದೇ ಅನುದಾನ ತಂದಿರುವುದಿಲ್ಲಾ ಹಾಗಾಗಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಡಿ,ಆರ್, ಪಾಟೀಲ್ ರ ಗೆಲುವಿಗೆ ನಿಷ್ಠಯಿಂದ ಕಾರ್ಯಕರ್ತರು ದುಡಿಯಬೇಕು ಎಂದು ಕರೆ ನೀಡಿದರು.
ನಗರದ ಕಾಂಗ್ರೇಸ್ ಮುಖಂಡರಾದ ಖಾಜಿ ವಕೀಲರು ಮಾತನಾಡಿ ಮೋದಿಯವರು 5 ವರ್ಷದಲ್ಲಿ ಯಾವುದೇ ದೇಶದ ಅಭಿವೃದ್ದಿ ಕೇಲಸ – ಕಾರ್ಯಗಳು ಮಾಡಿಲ್ಲಾ ದೇಶದ ಜನತೆ ಕಾವಲುಗಾರ ಎಂದು ಹೇಳಿ ಜನರಿಗೆ ಮೊಸ ಮಾಡುತ್ತಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಡಿ,ಆರ್, ಪಾಟೀಲ್ ಅವರನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ದಿಗಾಗಿ ಮತ ನೀಡಿ ಗೆಲ್ಲಿಸಿ ಎಂದು ಮತನಾಡಿದರು.
ಮುಖಂಡರಾದ ಜಗದೇಶ ಬಸೇಗಣ್ಣಿ ಮಾತನಾಡಿ, ಸಾಧನೆಯೇ ಮಾತನಾಡಬೇಕೆ ಹೊರತು , ಮಾತನಾಡುವುದೇ ಸಾಧನೆಯಾಗ ಬಾರದು . ಹಾಗೆ ಮೋದಿಯವರ ಮಾತು ಸಾಧನೆಯಾಯಿತು. ಹಾಗೆ ದೇಶದ ಅಬಿವೃದ್ದಿ ಆಗಿಲ್ಲಾ ಸಿದ್ದರಾಮಯ್ಯ ರವರ ಜನ ಪರ ಕಾರ್ಯಕ್ರಮಗಳನ್ನು ಬೂತ ಮಟ್ಟದ ಕಾರ್ಯಕರ್ತರು ಮನೆ-ಮನೆಗೆ ತಲಪುಬೇಕು ರಾಜ್ಯದ ಸಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲಾ ಎಂದು ನಗರದ ಕಾಂಗ್ರೇಸ್ ಮುಖಂಡರಾದ ಜಗದೇಶ ಬಸೇಗಣ್ಣಿ ಮಾತನಾಡಿದರು.
ಈ ಅವಧಿಯಲ್ಲಿ ನಗರದ ಕಾಂಗ್ರೇಸ್ ಮುಖಂಡರಾದ ಪ್ರಭು ಬಿಷ್ಠನಗೌಡ್ರ ,ಪರಮೇಶಪ್ಪ ಯಣ್ಣಿ , ಅಪ್ಪಾಲಾಲ ಯಾದವಾಡ , ಸುಭಾನಿ ಚೂಡಿಗಾರ , ನಾಸೀರ ಖಾನ್ ಪಠಾಣ , ಪರಮೇಶಪ್ಪ ಶಿವಣ್ಣನವರ , ಶಾಂತಕ್ಕ ಶಿರೂರ , ಮಮತಾ ಜಾಬಿನ್ , ಲಲಿತಕ್ಕಾ ಹುಗ್ಗಿ , ಜಯಶ್ರೀ ಶಿವಪುರ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.