ಕಗ್ಗೆರೆ ತಪೋಭೂಮಿಯಲ್ಲಿ ನಡೆಯಲಿದೆ ಚಮತ್ಕಾರ : ಗುರೂಜಿ

0
26

ಕುಣಿಗಲ್

       ಪ್ರತಿಯೊಬ್ಬ ಸಿದ್ದ ಪುರುಷರ ತಪೋಭೂಮಿ ಮಹಾಲಯ ಅಮಾವಾಸ್ಯೆಯ ಸಮಯದಲ್ಲಿ ಅತ್ಯಂತ ಶಕ್ತಿಕೇಂದ್ರವಾಗಿ ಪರಿಣಮಿಸುತ್ತದೆ, ಕಗ್ಗೆರೆ ತಪೋಭೂಮಿಯಲ್ಲಿ 1 1/2 ವರ್ಷದಲ್ಲಿ ಅಂತಹ ಚಮತ್ಕಾರ ನಡೆಯಲಿದೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಅವರು ತಾಲ್ಲೂಕಿನ ತಪೋಕ್ಷೇತ್ರ ಕಗ್ಗೆರೆ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಏರ್ಪಡಿಸಿದ್ದ ಶತರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

      ಸಿದ್ದ ಪುರುಷರಿಗೆ ಮಹಾಲಯ ಅಮಾವಾಸ್ಯೆ ಸಂದರ್ಭ ಪ್ರಸನ್ನವಾದದ್ದು, ರಾಜ್ಯದ ಎಲ್ಲಾ ಸಿದ್ದ ಪುರುಷರಿಗಿಂತ ಎಡೆಯೂರು ಹಾಗ ತಪೋಭೂಮಿ ಕಗ್ಗೆರೆ ಶಕ್ತಿ ಸ್ಥಳವಾಗಿದೆ ಎಂದರು.

     ಮಹಾಲಯ ಮುಗಿದು ಶರನ್ನವರಾತ್ರಿ ಪ್ರಾರಂಭವಾಗುವ ಕಾಲದಲ್ಲಿ ಹಲವಾರು ನೋವು ನಲಿವುಗಳಿಗೆ ಪರಿಹಾರ ಸಿಗಲಿದೆ, ಮುಂದಿನ 1.5 ವರ್ಷದಲ್ಲಿ ತಪೋಕ್ಷೇತ್ರ ಹೆಚ್ಚು ಪ್ರಖ್ಯಾತಿ ಹೊಂದಲಿದೆ, ಇಲ್ಲಿ ಹಲವಾರು ಪವಾಡಗಳು ನಡೆಯಲಿವೆ ಎಂದರು.

       ಎಡೆಯೂರು ಬಾಳೇಹೊನ್ನೂರು ಖಾಸಾ ಶಾಖಾ ಪೀಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗೇಶ್ವರರ ತಪೋಭೂಮಿಯಾದ ಕಗ್ಗೆರೆಯಲ್ಲಿ ದೈವಿಕ ತರಂಗಗಳು ಹೆಚ್ಚಾಗಿವೆ. ಇಲ್ಲಿ ಭಕ್ತಿಯಿಂದ ಪ್ರಾರ್ಥಿಸಿದ ಎಲ್ಲಾ ಇಷ್ಟಾರ್ಥಗಳು ಈಡೇರಲಿವೆ. ಪ್ರತೀ ಅಮಾವಾಸ್ಯೆಯಲ್ಲಿ ಗದ್ದುಗೆ ಮೇಲೆ ನಡೆಯುವ ಮಹಾ ರುದ್ರಾಭಿಷೇಕದ ದರ್ಶನದಿಂದ ಹಾಗೂ ಪೂಜೆಯಲ್ಲಿ ಭಾಗವಹಿಸಿ ನಂತರ ಆ ತೀರ್ಥವನ್ನು ದೇವರ ಮುಂದೆ ಕುಳಿತು ಮೊರೆ ಹಾಕಿಸಿಕೊಳ್ಳುವುದರಿಂದ ಹಲವಾರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ದೂರಾಗಲಿವೆ ಎಂದರು.

      ವಿಶೇಷವಾಗಿ ಅಮಾವಾಸ್ಯೆ ಪ್ರಯುಕ್ತ ಬೆಳಗಿನ ಜಾವ ಗದ್ದುಗೆ ಮೇಲೆ ಮಹಾ ರುದ್ರಾಭಿಷೇಕ ಜಲಾಭಿಷೇಕ , ಕ್ಷೀರಾಭಿಷೇಕ ಸೇರಿದಂತೆ ಹಲವಾರು ಪೂಜೆಗಳು ನಡೆದವು. ದೇವರ ವಿಗ್ರಹವನ್ನು ಹಲವಾರು ಹೂಗಳಿಂದ ಅಲಂಕರಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

     ಪೂಜೆಯಲ್ಲಿ ಭಾಗವಹಿಸಿದ ಭಕ್ತರಿಗೆ ದಾಸೋಹ ಸೇವಾ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅರ್ಚಕರಾದ ಸಿದ್ದಲಿಂಗಸ್ವಾಮಿ ದೇವಾಲಯದ ವ್ಯವಸ್ಥಾಪಕ ಹನುಮಂತ , ಮುಖಂಡರಾದ ಗೌರೀಶಂಕರ್ , ಲೋಕೇಶ್ , ವಕೀಲರಾದ ಅಮೃತೇಶ್ , ಚಂದ್ರಶೇಖರ್ , ಎಡೆಯೂರು ವೀರಶೈವಸಮಾಜದ ಪ್ರಮುಖರಾದ ಮಹೇಶ್ , ಹೇಮತೋಂಟದಾರ್ಯಸ್ವಾಮಿ , ಸಿದ್ದಲಿಂಗಶೆಟ್ಟಿ , ಟೌನ್‍ವೀರಶೈವ ಸಮಾಜದ ಅಧ್ಯಕ್ಷರಾದ ಕಿರಣ್‍ಬಾಬು , ಕಾರ್ಯದರ್ಶಿ ರೇಣುಕಾ ಪ್ರಸಾದ್, ಗಿರಿಧರ್ , ನಿರ್ದೇಶಕ ಲೋಕೇಶ್ ಇದ್ದರು .

 

LEAVE A REPLY

Please enter your comment!
Please enter your name here