ಬಾಲ ಮುದುರಿಕೊಂಡಿದ್ದ ಬ್ರಹ್ಮಾಂಡ ಗುರೂಜಿ, ಬಾಲ ಬಿಚ್ಚಲು ತುದಿಗಾಲಲ್ಲಿ ನಿಂತಿದ್ದಾರೆ

ಹೊಸದುರ್ಗ :

    ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ಭಾರಿ ಭೂಕಂಪದಿಂದ ನೆಲಸಮವಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರಬಾಬು ಶರ್ಮರವರು ನೀಡಿದ ಪತ್ರಿಕಾ ಹೇಳಿಕೆಗೆ ಇಲ್ಲಿನ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

   ಭವಿಷ್ಯ ಹೇಳುವವರು ಆ ಗಿಳಿಗಿಂತ ಶ್ರೇಷ್ಠರೇನಲ್ಲ. ಬೆಕ್ಕು ಯಾವಾಗ ಬಂದು ತನ್ನನ್ನು ಹಿಡಿದು ತಿನ್ನುತ್ತದೆ ಎಂದು ಗಿಳಿಗೆ ಗೊತ್ತಿಲ್ಲ. ಆದರೆ ಅದಾವ ಮುಖ ಇಟ್ಟುಕೊಂಡು ಈ ಬ್ರಹ್ಮಾಂಡ ಗುರು ಭವಿಷ್ಯ ನುಡಿದರೊ? ಇವರು ಹೇಳುವ ಭವಿಷ್ಯ ಸತ್ಯವಾಗುವುದಾದಲ್ಲಿ ಕಳೆದ ವರ್ಷ, ಅದರ ಹಿಂದಿನ ವರ್ಷ ನೆರೆ ಹಾವಳಿ ವಿಚಾರ ಮೊದಲೇ ಏಕೆ ಹೇಳಲಿಲ್ಲ? ಕೊರೊನಾ ವೈರಸ್ ಬಗ್ಗೆ ಯಾಕೆ ಮೊದಲೇ ಮಾತನಾಡಲಿಲ್ಲ ಎಂದು ಕೆಂಡಾಮಂಡಲವಾಗಿದ್ದಾರೆ.

    ಈಗಂತೂ ಬ್ರಹ್ಮಾಂಡ ಸುಳ್ಳನ್ನು ಸೃಷ್ಠಿ ಮಾಡುವ ಭವಿಷ್ಯಕಾರರ ದೊಡ್ಡ ದಂಡನ್ನೇ ದೃಶ್ಯ ಮಾಧ್ಯಮಗಳು ಬೆಳೆಸಿವೆ. ಅಂಥವರಲ್ಲಿ ಬ್ರಹ್ಮಾಂಡ ಗುರೂಜಿ ಒಬ್ಬರು. ಕೊರೊನಾ ಕಾರಣದಿಂದ ಇಂತಹವರೆಲ್ಲ ಬಾಲ ಮುದುರಿಕೊಂಡು ಮೂಲೆಗುಂಪಾಗಿದ್ದರು. ಲಾಕ್‍ಡೌನ್ ಸಡಿಲಿಸಿದ ನಂತರ ಇಂತಹವರೆಲ್ಲಾ ಮತ್ತೆ ಬಾಲಬಿಚ್ಚಲು ತುದಿಗಾಲಲ್ಲಿ ನಿಂತಿದ್ದಾರೆ. ಜನರು ದಡ್ಡರಾದಾಗ ಇವರು ಬೇಳೆ ಬೇಯಿಸಿ ಕೊಳ್ಳುವರು. ಜನರು ಶಿರವನ್ನು ಹೊನ್ನ ಕಳಸ ಮಾಡಿಕೊಂಡಾಗ ಇವರ ಆಟ ನಡೆಯುವುದಿಲ್ಲ. ಮೌಢ್ಯಗಳ ಪ್ರಸಾರಕರ ಬಗ್ಗೆ ಜನರು ಜಾಗೃತರಾದರೆ ಅವರು ಇಂತಹ ಸುಲಭ ದಂದೆ ಬಿಟ್ಟು ಕಾಯಕ ಶೀಲರಾಗುವರು. ಅಂಥವರನ್ನು ಮೈಬಗ್ಗಿಸಿ ದುಡಿಯುವಂತೆ ಮಾಡುವ ಹೊಣೆಗಾರಿಕೆ ಜನರನ್ನೇ ಅವಲಂಬಿಸಿದೆ ಎಂದರು.

    ಮೌಢ್ಯಗಳ ಪ್ರಸಾರಕರು ಎಲ್ಲ ಕಾಲಕ್ಕೂ ಇರುವಂತಹವರೆ. ಜನರ ಮನೋದೌರ್ಬಲ್ಯಗಳನ್ನು ಗುರುಗಳು, ಬಾಬಾಗಳು, ಶಾಸ್ತ್ರಕಾರರು, ಹೊತ್ತಿಗೆಯವರು, ಪಂಚಾಂಗದವರು, ಹಸ್ತಸಾಮುದ್ರಿಕೆ ಹೇಳುವವರು ಮತ್ತಿತರರು ತುಂಬಾ ಜಾಣತನದಿಂದ ದುರ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾರೆ. ಕಂಪ್ಯೂಟರ್, ವಿಜ್ಞಾನಯುಗದಲ್ಲೂ ನಮ್ಮ ಜನರ ಮೌಢ್ಯಗಳನ್ನು ಕಳೆಯಲು ಸಾಧ್ಯವಾಗದಿರುವುದು ವಿಷಾದನೀಯ. ಶರಣರು ಇಂಥ ಮೌಢ್ಯಗಳ ವಿರುದ್ಧ ಸಮರವನ್ನೇ ಸಾರಿದ್ದರು. ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು ಎನ್ನುವರು ಬಸವಣ್ಣನವರು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap