ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರವು ಕಟಿಬದ್ಧ

ಹೊನ್ನಾಳಿ:

     ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರವು ಕಟಿಬದ್ಧವಾಗಿದೆ ಎಂದು ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷೆ ಉಮಾ ರಮೇಶ್ ಹೇಳಿದರು.

      ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಹಯೋಗದಲ್ಲಿ 2018-19ನೇ ಸಾಲಿನ ವಿಶೇಷ ಅಗತ್ಯವುಳ್ಳ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಂಕನ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬ ಪೋಷಕರು ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸರ್ಕಾರವು ಸಹ ವಿಶೇಷ ಅಗತ್ಯವುಳ್ಳ ವಿಕಲಚೇತನರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಂಗವೈಕಲ್ಯ, ಬುದ್ಧಮಾಂದ್ಯ, ದೃಷ್ಟಿಮಾಂಧ್ಯ, ಕಲಿಕಾ ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ. ತಜ್ಞ ವೈದ್ಯರಿಂದ ತಪಾಸಣೆಯನ್ನು ಮಾಡಿಸಲಾಗುತ್ತದೆ.

       ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ದೊಡ್ಡ ದೊಡ್ಡ ನಗರ ಪಟ್ಟಣಗಳಿಗೆ ಕಳುಹಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿ ಅವರನ್ನು ಎಲ್ಲಾ ವಿದ್ಯಾರ್ಥಿಗಳಂತೆ ರೂಪಿಸುವ ಹೋಣೆಯನ್ನು ಪೋಷಕರ ಜವಾಬ್ದಾರಿಯಿದೆ ಎಂದರು.

       ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ ಮಲ್ಲಿಕಾರ್ಜುನ ಮಾತನಾಡಿ, ದೇಶ ಕಟ್ಟವ ಕೆಲಸದಲ್ಲಿ ವಿದ್ಯಾರ್ಥಿಗಳ ಪಾತ್ರವು ದೊಡ್ಡದಾಗಿರುತ್ತದೆ. ಈ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿಯು ಶಿಕ್ಷಕ, ಪೋಷಕ ಹಾಗೂ ಸಮಾಜದ ನಾಯಕರಲ್ಲಿ ಇರುತ್ತದೆ.

       ವಿಕಲಚೇತರನ್ನು ಕಡೆಗಣಿಸಬಾರದು. ಅವರಿಗೂ ಅವಕಾಶಗಳನ್ನು ನೀಡಿದರೆ ಅವರಲ್ಲಿರುವ ಸೂಪ್ತ ಪ್ರತಿಭೆಯು ಹೊರತಂದರೆ ಅಸಾಧ್ಯವಾದದನ್ನು ಸಾಧಿಸಿ ತೋರಿಸಬಲ್ಲರು. ವಿಕಲಚೇತರನ್ನು ನುರಿತ ಮನಾಸಿಕ ತಜ್ಞರಿಂತ ಚಿಕಿತ್ಸೆಯನ್ನು ನೀಡುತ್ತಿರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಇ ರಾಜೀವ್ ಮಾತನಾಡಿ, ಶಿಕ್ಷಣ ಇಲಾಖೆಯ ವತಿಯಿಂದ ಪ್ರತಿವರ್ಷ ವಿಕಲಚೇತನರಿಗೆ ಉಚಿತ ತಪಾಸಣೆ ಶಿಬಿರ ಮತ್ತು ಆ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗುತ್ತದೆ. ಶಿಕ್ಷಕರು ಹಾಗೂ ಸಾರ್ವಜನಿಕರು ಸ್ಥಳೀಯವಾಗಿ ವಿಕಲಚೇತರನ್ನು ಗುರುತಿಸಿ ಅವರನ್ನು ತಾಲ್ಲೂಕು ಹಾಗೂ ಜಿಲ್ಲಾ ಕೆಂದ್ರಗಳಲ್ಲಿ ನಡೆಯುವ ಉಚಿತ ತಪಾಸಣಾ ಶಿಬಿರಗಳಿಗೆ ಕರೆತರಲು ಸಾರ್ವಜನಿಕರಿಗೆ ಕರೆ ನೀಡಿದರು.

       ಹೊನ್ನಾಳಿ ಸೇರಿದಂತೆ ನ್ಯಾಮತಿ ಸವಳಂಗ, ಸಾಸ್ವೆಹಳ್ಳಿ,ಕುಂದೂರು, ಹಿರೇಗೋಣಿಗೇರೆ, ಚಿಲೂರು ಇನ್ನೂ ಹತ್ತಾರು ಗ್ರಾಮಗಳ ನೂರಾರು ವಿಕಲಚೇತರು ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆಯನ್ನು ಪಡೆದರು.
ಸಭೆಯಲ್ಲಿ ಮನೋವೈದ್ಯರಾದ ರಾಮಚಂದ್ರ ರೆಡ್ಡಿ , ವೈದ್ಯ ಹೆಚ್. ನಾಗರಾಜ್, ವೈದ್ಯೆ ಸಾವಿತ್ರಿ, ವೈದ್ಯ ಮಹೇಶ್ವರಪ್ಪ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ನುರಿತ ತಜ್ಞರು ಶಿಬಿರದಲ್ಲಿ ವಿಕಲಚೇತನ ಮಕ್ಕಳನ್ನು ಉಚಿತ ತಪಾಸಣೆಗೊಳಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆತರುವಂತೆ ತಿಳಿಸಿದರು.

       ಶಿಕ್ಷಣ ಇಲಾಖೆಯ ಬಿಆರ್‍ಪಿ ಇಬಾಹಿಂ, ಇಸಿಒ ಎಸ್ ಸಿದ್ದಪ್ಪ, ಬಿಐಆರ್‍ಟಿ ಓಂಕಾರಪ್ಪ, ಸಿಆರ್‍ಪಿ ನಾಗರಾಜ್, ಸಿಆರ್‍ಪಿ ಪರಶುರಾಮ್, ಬಿವಿಎಸ್ ಮುಖ್ಯಶಿಕ್ಷಕ ತಿಮ್ಮೇಶ್ ಆರ್. ಶಿಕ್ಷಕರಾದ ಗಿರೀಶ್ ಎನ್.ಎಂ, ಅಶೋಕ ಹೆಚ್, ಸತೀಶ ಬಂಗೇರ, ಡೊಂಕತ್ತಿ ನಾಗರಾಜ್, ಕೊಟ್ಯಪ್ಪ ಸೇರಿದಂತೆ ಎಲ್ಲಾ ಸಿಆರ್‍ಪಿಗಳು ಶಿಕ್ಷಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap