ಹಗರಿಬೊಮ್ಮನಹಳ್ಳಿ
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಕಾಣಬೇಕು ಎನ್ನುವ ಕನಸ್ಸನ್ನು ಹೊತ್ತ ಟೀಮ್ಮೋದಿಯವರಿಂದ ಪ್ರಧಾನ ಸೇವಕ ಮೋದಿ ರಥಯಾತ್ರೆ ಪ್ರಚಾರಮಾಡಿಕೊಂಡು ಪಟ್ಟಣಕ್ಕೂ ಆಗಮಿಸಿತು. ಪಟ್ಟಣದ ನೀರಾವರಿ ಇಲಾಖೆಯ ಹತ್ತಿರ ಹಡಗಲಿಯಿಂದ ಆಗಮಿಸಿದ್ದ ರಥವನ್ನು ಇಲ್ಲಿಯ ಟೀಮ್ಮೋದಿ ಸಂಘಟಕರು ಸ್ವಾಗತಿಸಿಕೊಂಡರು.
ಸ್ವಾಗತ ಮಾಡಿಕೊಂಡ ನಂತರ ಸಂಚಾಲಕ, ವಿಶ್ವೇಶ್ವರಗೌಡ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯಲ್ಲಿ ಕೊಟ್ಯಾಂತರ ಜನರಿಗೆ ಉಚಿತ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿ, ಯಾವುದೇ ಸರ್ಕಾರದೆದರು ಕೈಚಾಚಿ ನಿಲ್ಲದಂತೆ ರೈತರನ್ನು ಸ್ವಾವಲಂಭಿಯಾಗಿಸುವ ಪ್ರಯತ್ನಮಾಡಲಾಗಿದೆ.
ಜಗತ್ತಿನನ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಗಗನದೆತ್ತರ ಏರಿದ್ದು, ಪಾಕಿಸ್ತಾನ, ಚೀನಗಳು ದೇಶದ ಯೋಧರಿಂದ ತಂಟೆತಕರಾರು ಮಾಡದೆ ದೂರ ಸರಿದಿದ್ದಾರೆ. ಒಟ್ಟಾರೆ ನರೇಂದ್ರ ಮೋದಿಯವರ ಕಾರ್ಯಗಳು ಶ್ಲಾಘನೀಯವಾಗಿದ್ದು, ಈ ಕೆಲಸಗಳು ಅರ್ಧಕ್ಕೆ ನಿಲ್ಲಬಾರದೆನ್ನುವ ಉದ್ದೇಶದಿಂದ ನರೇದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಗಳನ್ನಾಗಿಸುವ ಮೂಲಕ ಭ್ರಷ್ಟರಿಗೆ ಪಾಠ ಕಲಿಸಬೇಕಿದೆ. ಅದು ಅಮೌಲ್ಯವಾದ ಮತದಾರರಾದ ನಿಮ್ಮ ಕೈಯಲ್ಲಿದೆ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಇನ್ನೊಬ್ಬ ಸಂಚಾಲಕರಾದ ವೈ.ಕೆ.ಸುನೀಲ್ ಮಾತನಾಡಿ, ಕಳೆದ ವರ್ಷ ನಮೋ ಬ್ರಿಗೇಡ್ನ ಮೂಲಕ ಜನರ ನಡುವೆ ಸಾಗುವಾಗ ಮೋದಿಯವರನ್ನು ಪ್ರಧಾನಿ ಮಾಡೋಣವೆಂದು ನಿಮ್ಮೆಲ್ಲರ ಬಳಿ ಕೇಳಿಕೊಂಡಿದ್ದೇವು. ಈ ಬಾರಿ ಅವರ 5ವರ್ಷದ ಸಾಧನೆಯನ್ನು ಶ್ರೀಸಾಮಾನ್ಯರ ಮುಂದೆ ಹಂಚಿಕೊಳ್ಳುವ ಮೂಲಕ ದೇಶದ ಹಿತಕ್ಕಾಗಿ ಮೊತ್ತಮ್ಮೆ ಮೋದಿಯವರನ್ನೇ ಪ್ರಧಾನಿಯಾಗಿಸೋಣವೆಂದು ವಿನಂತಿಸಿಕೊರ್ಳಳುತ್ತಿದ್ದೇವೆ ಎಂದು ಟೀಮ್ಮೋದಿ ಹೇಳಿದರು.
ಅವರು ಮಾತನಾಡಿ, ಕಳೆದ 5ವರ್ಷಗಳಲ್ಲಿ ದೇಶದ 585ಜಿಲ್ಲಿಗಳು ಬಯಲು ಶೌಚದಿಂದ ಮುಕ್ತವಾಗಿವೆ. ಜನಧನ್ ಯೋಜನೆಯಡಿಯಲ್ಲಿ 33ಕೋಟಿ ಜನಕ್ಕೆ ಬ್ಯಾಂಕ್ ಖಾತೆ ದೊರೆತಿದೆ. ಮಧ್ಯವರ್ತಿಯೇ ಇಲ್ಲದೆ, ನೇರವಾಗಿ 6ಲಕ್ಷ ಕೋಟಿಯಷ್ಟು ಹಣವನ್ನು ಜನರಿಗೆ ವರ್ಗಾಯಿಸಲಾಗಿದೆ. ಜನ ಔಷಧಿಯ ಮೂಲಕ ಕಡಿಮೆ ಬೆಲೆಯಲ್ಲಿ ಔಷಧಿ ಸಿಗುವಂತ ವ್ಯವಸ್ಥೆಮಾಡಲಾಗಿದೆ. ಇದನ್ನೆಲ್ಲ ಮನಗಂಡು ದೇಶದ ಭವ್ಯ ಮತದಾರ ಮತ್ತೊಮ್ಮೆ ಮೋದಿಯವರನ್ನು ಬೆಂಬಲಿಸಬೇಕಿದೆ ಎಂದರು
ಈ ರಥವು ನೀರಾವರಿ ಇಲಾಖೆಯಿಂದ ಬಸವೇಶ್ವರ ಬಜಾರದ ಮೂಲಕ ಸಾಗಿ ಪಟ್ಟಣದ ವಿವಿಧ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ, ಪ್ರಧಾನಿ ಮೋದಿಯವರ 5ವರ್ಷದ ಜನಪರ ಯೋಜನೆಗಳ ಸಾಧನೆಯನ್ನು ಎಲ್ಐಡಿ ಮೂಲಕ ಪ್ರಚಾರಮಾಡುತ್ತಾ ಕೂಡ್ಲಿಗಿ ತಾಲೂಕಿನತ್ತ ತೆರಳಿತು.
ಈ ಸಂದರ್ಭದಲ್ಲಿ ಟೀಮ್ಮೋದಿಯ ತಾಲೂಕು ಸಂಘಟಕರಾದ ಸುಭಾಷ್, ಕೆ.ಗಿರಿರಾಜ್, ದೀಪಕ್ ಕಠಾರೆ, ಸೂರಿ, ಡಿ.ಕೆ.ಕೊಟ್ರೇಶ್, ಮಂಜು, ಮಹೇಶ, ವಿನಾಯಕ, ಗುರುಪ್ರಸಾದ್, ಬಾಳಪ್ಪ, ಹರ್ಷ, ಮೂರ್ತಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
