ಬಳ್ಳಾರಿ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ವಿರೋಧಿ ರಾಜಕಿಯ ಪಕ್ಷಗಳಿಗೆ ಮತ ತಿರಸ್ಕರಿಸಿ, ನೋಟಾಗೆ ಮತ ಚಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಾಬು ಜಗಜೀವನ್ ರಾಮ್ ಯುವಜನ ಜಾಗೃತಿ ವೇದಿಕೆ ರಾಜ್ಯಧ್ಯಕ್ಷ ಶ್ರೀನಿವಾಸ ಕರ್ಚೆಡು ಮಾದಿಗ ಸಮುದಾಯಕ್ಕೆ ಮನವಿ ಮಾಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರಿಂದ ರಾಜ್ಯದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರಿಂದ ಸಮಾಜಕ್ಕೆ ಮೋಸ ಆಗಿದೆ ಅದು ಅಲ್ಲದೆ ಎಲ್ಲಾ ರಾಜಕೀಯ ಪಕ್ಷದಿಂದ ನಮ್ಮ ಸಮಾಜಕ್ಕೆ ದ್ರೊಹವಾಗಿದೆ ಎಂದುಆರೋಪಿಸಿದರು.
ಎಲ್ಲಪಕ್ಷಗಳು ಮಾದಿಗರ ಸಮಯವನ್ನು ಸಂಪೂರ್ಣ ವಾಗಿ ದುರ್ಬಳಕೆ ಮಾಳಿಕೊಳ್ಳುತ್ತಿದೆ. ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಕಳೆದ ಐದು ವರ್ಷಗಳಿಂದ ಬರೀ ಆಶ್ವಾಸನೆ ಮತ್ತು ಭರವಸೆ ನೀಡಿ ಮಾದಿಗ ಸಮುದಾಯ ಕ್ಕೆ ಮೋಸಮಾಡಿದ್ದಾರೆ. ಅಲ್ಲದೆ, ಕಳೆದ 60 ವರ್ಷಗಳಿಂದ ಮಾದಿಗ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ಯಲ್ಲಿ ಮಾದಿಗ ಎರಡು ಪಕ್ಷಕ್ಕೆ ಮತ ತಿರಸ್ಕರಿಸಿ ನೋಟಾಗೆ ಮತ ನೀಡಿ ಆಳುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಳ್ಳಾರಿ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಕಾಂಗ್ಸ್ರೆಸ್ ಪಕ್ಷದಿಂದ ಹತ್ತು ಜನ ಮಂತ್ರಿಗಳು, ಹತ್ತು ಜನ ಸಂಸದರು, 45 ಜನ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಬಿಜೆಪಿಯ ಕೆಲವು ಹಾಲಿ ಮಾಜಿ ಶಾಸಕರು ಸಚಿವರುಹಲವರು ಬಂದಿದ್ದಾರೆ. ಆದರೆ, ಇವರ್ಯಾರು ಸದಾಶಿವ ಆಯೋಗದ ಬಗ್ಗೆ ಮಾತನಾಡಿತ್ತಿಲ್ಲ. ಇವರಿಗೆ ಕೇವಲ ಮಾದಿಗರ ಓಟ್ ಮಾತ್ರ ಬೇಕಾಗಿದೆ. ಮಾದಿಗರ ಬೇಡಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರು. ಆದರೆ, ನ್ಯಾಯಮೂರ್ತಿ ಸದಾಶಿವ ಆಯೋಗದ ಬಗ್ಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರಂಗಸ್ವಾಮಿ ಶಿವಣ್ಣ ಜನಾಂಗದ ಹಿರಿಯ ಮುಖಂಡರು ಮತ್ತಿತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
