ರಾಣೇಬೆನ್ನೂರು
ಮನೆಯ ಟೆರಸ್ ಮೇಲೆ ಮಲಗಿದ್ದ ಮಹಿಳೆಯ ತಲೆಗೆ ಕಲ್ಲಿನಿಂದ ಚಚ್ಚಿ ಬರ್ಬರ ಹತ್ಯೆಗೈದ ಘಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಶೇಕವ್ವ ಚಂದ್ರಪ್ಪ ಕೊಂಬಳಿ (35) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರವಾಗಿ ಪತಿ-ಪತ್ನಿಯರ ನಡುವೆ ಆಗಾಗ್ಗೆ ಜಗಳವಾಡುತ್ತಿದ್ದರೆನ್ನಲಾಗಿದೆ. ಈ ವಿಚಾರವಾಗಿ ಪತಿ ಚಂದ್ರಪ್ಪ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು ತಲೆ ಮರೆಯಿಸಿಕೊಂಡ ಚಂದ್ರಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
