ತಿಪಟೂರು:
ಏಪ್ರಿಲ್ 1 ರಿಂದ ಬಿ.ಎಸ್ 6 ವಾಹನಗಳನ್ನು ಮಾತ್ರ ನೋಂದಣಿ ಮಾಡಬೇಕಾಗಿರುವುದ ರಿಂದ ಬಿಎಸ್ 6 ಮಾದರಿಯಲ್ಲಿ ತಯಾರಾದ ವಾಹನಗಳನ್ನು ಹೊರತುಪಡಿಸಿ ಇತರೆ ಮಾದರಿಯ ವಾಹನವನ್ನು 2020ರ ಮಾರ್ಚ್ 31 ರೊಳಗೆ ನೋಂದಾವಣೆ ಮಾಡಿಸಿಕೊಳ್ಳುವಂತೆ ವಾಹನ ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಸಂಖ್ಯೆ wp.civil no13029/1985 24-10-2018 ನ್ನು ಉಲ್ಲೇಖಿಸಿ ಮಾನ್ಯ ಸಾರಿಗೆ ಆಯುಕ್ತರು ಬೆಂಗಳೂರು ತಮ್ಮ ಪತ್ರ ದಿನಾಂಕ 5-3-2020 ರ ಮೂಲಕ ತಿಳಿಸಿರುವುದನ್ನು ಸಾರ್ವಜನಿಕರಿಗೆ ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಒಂದು ವೇಳೆ ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲು ಅವಕಾಶ ಇರುವುದಿಲ್ಲ ಇದಕ್ಕೆ ವಾಹನ ಖರೀದಿದಾರರು ಮತ್ತು ಮಾರಾಟಗಾರರು ನೇರ ಹೊಣೆಯಾಗಿರುತ್ತಾರೆ ಹಾಗೂ ಬಿಎಸ್ 6 ಹೊರತು ಪಡಿಸಿ ಇತರೆ ಮಾದರಿಯ ಎಲ್ಲ ವರ್ಗದ ವಾಹನಗಳನ್ನು 2020 ಮಾರ್ಚ್ 31 ರೊಳಗೆ ನೋಂದಾಯಿಸಿಕೊಳ್ಳುವಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್ ಹನುಮಂತರಾಯಪ್ಪನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ