ನಗರಸಭೆ ಚುನಾವಣೆ: ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದಿಂದ ಬಿಎಸ್ಪಿಗೆ ಅನುಕೂಲ

ಹರಿಹರ:
       ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ  ಪ್ರೊ.ಬಿ.ಕೃಷ್ಣಪ್ಪನವರ ಹೋರಾಟದ ಫಲವಾಗಿ ಬಿಎಸ್ಪಿ ಅಭ್ಯರ್ಥಿಗಳಿಗೆ   ವರದಾನವಾಗಲಿದೆ ಎಂದು ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಹೆಚ್.ಮಲ್ಲೇಶ್ ಹೇಳಿದರು.
   
      ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ  ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹರಿಹರ ದಲಿತ ಹೋರಾಟಗಾರ ಕರ್ನಾಟಕದ ಅಂಬೇಡ್ಕರ್ ಖ್ಯಾತಿ ಪ್ರೊ.ಬಿ.ಕೃಷ್ಣಪ್ಪ ನವರ ಜನ್ಮ ಸ್ಥಳವಾಗಿದ್ದು, ಅವರು ರಾಜ್ಯದಾದ್ಯಂತ ಹೋರಾಟದ ಫಲ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಎಸ್ಪಿ ಅಭ್ಯರ್ಥಿಗಳಿಗೆ ವರದಾನ ವಾಗಲಿದೆ ಎಂದು ಹೇಳಿದರು.
 
        ಈ ಚುನಾವಣೆಯಲ್ಲಿ ನಗರದ 31 ವಾರ್ಡು ಗಳಿಗೆ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಈಗಾಗಲೇ ವಾರ್ಡ್ ನಂಬರ್ 2 ಎ.ಕೆ.ಕಾಲೊನಿಗೆ ಎಸ್.ಕೇಶವ,ವಾರ್ಡ್ ನಂಬರ್ 3 ಆಶ್ರಯ ಕಾಲೊನಿಗೆ ಡಿ.ಹನುಮಂತಪ್ಪ,ವಾರ್ಡ್ ಸಂಖ್ಯೆ 10 ಭಾರತ್ ಮಿಲ್ ಕಾಂಪೌಂಡ್ ಗೆ ಆರ್.ನೀಲಗಿರಿ ಯಪ್ಪ ಹಾಗೂ ವಾರ್ಡ್ 13 ಜೈ ಭೀಮ ನಗರಕ್ಕೆ ಅಭ್ಯರ್ಥಿಯಾಗಿ ಬಸಪ್ಪ ಕುಂಚೂರು ಅವರಿಗೆ ಬಿ. ಫಾರಂ ನೀಡಲು ತೀರ್ಮಾನಿಸಲಾಗಿದೆ.
 
      ಇನ್ನು ನಾಮಪತ್ರ ಸಲ್ಲಿಸಲು ಅವಕಾಶವಿದ್ದು ಕೊನೆಯ ದಿನದ ಒಳಗಾಗಿ ಇನ್ನುಳಿದ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಹುಡುಕುತ್ತಿದ್ದು,ನಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗೆ ಸ್ಪಂದಿಸುವ ಅಭ್ಯರ್ಥಿಗಳು ಸಂಪರ್ಕಿ ಸಬಹುದು ಎಂದು ತಿಳಿಸಿದರು.
 
       ಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಡಿ ಹನುಮಂತಪ್ಪನವರು ರಾಷ್ಟ್ರಕ್ಕೆ ಕೊಡುಗೆ ಯಾಗಿ ಪ್ರೊ.ಬಿ.ಕೆ.ಯವರನ್ನು ನೀಡಿದ ವಾರ್ಡ್ 2 ರಲ್ಲಿ ನಮ್ಮ ಅಭ್ಯರ್ಥಿ ಎಸ್.ಕೇಶವ ಅವರವರು ಗೆಲ್ಲಲಿದ್ದಾರೆ, ಅದರಂತೆ ನಗರದ ಇತರೆ ವಾರ್ಡು  ಗಳಲ್ಲಿನ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಗಳಿಸಲಿದ್ದಾರೆ.
       ನಗರದ ಮಜ್ಜಿಗೆ ಬಡಾವಣೆ,ಜೀಜಾ ಮಾತಾ ಕಾಲೊನಿಯಲ್ಲಿ ರಸ್ತೆಗಳು ಚರಂಡಿಗಳ ಕಾಮಗಾರಿ ಆಗಿಲ್ಲ ಅದರಂತೆ ಆಶ್ರಯ ಕಾಲೊನಿ ಹಾಗೂ ಇತರೆ ವಾರ್ಡುಗಳಲ್ಲಿಯೂ ಸಹ ಕೆಲವು ಕಾಮಗಾರಿಗಳು ಮಾತ್ರ ಆಗಿದ್ದು ಇನ್ನೂ ಬಹಳ ಕಾಮಗಾರಿಗಳು ನಡೆಯಬೇಕಾಗಿದೆ .ಆದ್ದರಿಂದ ನಗರದ ನಿವಾಸಿಗಳ ಹಿತದೃಷ್ಟಿ ಯಿಂದ ಮತ್ತು ಅವರ ಮೂಲಭೂತ ಸೌಕರ್ಯ ಗಳಿಗಾಗಿ ಎಲ್ಲಾ ನಗರವಾಸಿಗಳು ಬಿಎಸ್ಪಿ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲು ವಿನಂತಿಸಿದರು. ಗೋಷ್ಠಿಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ಕೇಶವ,13 ನೇ ವಾರ್ಡಿನ ಅಭ್ಯರ್ಥಿ ಬಸಪ್ಪ ಕುಂಚೂರು,10 ನೇ ವಾರ್ಡಿನ ಅಭ್ಯರ್ಥಿ ಆರ್.ನೀಲಗಿರಿಯಪ್ಪ ಹಾಗೂ ಗುಡದಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link