ಚಿತ್ರದುರ್ಗ
ಬರಪೀಡಿತಚಿತ್ರದುರ್ಗಜಿಲ್ಲೆಯಲ್ಲಿಅಂತರ್ಜಲ ಮಟ್ಟ ವೃದ್ಧಿಸಲು ನೆರವಾಗುವ ನಿಟ್ಟಿನಲ್ಲಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಹೆಚ್ಚು ಉದ್ಯೋಗದೊರಕಿಸಲು 2019 ರ ಮಾರ್ಚ್ ಒಳಗಾಗಿ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಸೇರಿ ಜಿಲ್ಲೆಯಲ್ಲಿ 1500 ಚೆಕ್‍ಡ್ಯಾಂ ನಿರ್ಮಾಣ ಪೂರ್ಣಗೊಳ್ಳಬೇಕು ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗಜಿಲ್ಲೆ ಪದೇ ಪದೇ ಬರ ಪರಿಸ್ಥಿತಿಗೆ ತುತ್ತಾಗುತ್ತಿದೆ. ಇಲ್ಲಿಜನರುಆರ್ಥಿಕವಾಗಿ ಹಿಂದುಳಿದಿದ್ದು, ಬಡವರ್ಗ, ಪರಿಶಿಷ್ಟ ವರ್ಗದವರೆ ಹೆಚ್ಚು ಕೂಲಿ ಕೆಲಸವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.ಮುಂದುವರೆದ ರಾಮನಗರ ನಂತರ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು, ಈವರೆಗೆ ಸುಮಾರು 60 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈವರೆಗೆ ಕೇವಲ 25 ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ನೀಡಲಾಗಿದೆ . ಇದನ್ನು 80 ಲಕ್ಷ ಮಾನವ ದಿನಗಳಿಗೆ ಹೆಚ್ಚಿಸಿಕೊಂಡು ಬಡವರು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಾಗಬೇಕೆಂದು ಸೂಚನೆ ನೀಡಿದರು.
ಉದ್ಯೋಗ ಸೃಜಿಸಲಾದ ವಿವರದನ್ವಯ ಹೊಸದುರ್ಗ-2.80 ಲಕ್ಷ ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಕೇವಲ 3.33 ಲಕ್ಷ ಮಾನವ ದಿನಗಳನ್ನು ಸೃಜಿಸಿ ಕಳಪೆ ಸಾಧನೆ ಮಾಡಲಾಗಿದೆ.ಜಿಲ್ಲೆಯ ಸಾಧನೆ ರಾಜ್ಯ ಮಟ್ಟದ ಸರಾಸರಿಗಿಂತ ಕಡಿಮೆ ಇದೆ. ಹೀಗಾದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆ ಸಾಧ್ಯಎಂದು ಸಚಿವರುಅಸಮಾಧಾನ ವ್ಯಕ್ತಪಡಿಸಿದರು.ಪದೇ ಪದೇ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ .ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್‍ಡ್ಯಾಂ ನಿರ್ಮಾಣಕ್ಕೆ ಸಾಕಷ್ಟು ಅವಕಾಶಗಳಿವೆ.
ಈ ವರ್ಷ 381 ಚೆಕ್‍ಡ್ಯಾಂ ನಿರ್ಮಿಸಲುಯೋಜಿಸಲಾಗಿದ್ದು, ಈ ಪೈಕಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕೇವಲ 06, ಹೊಸದುರ್ಗ ತಾಲ್ಲೂಕಿನಲ್ಲಿ ಕೇವಲ 04 ಚೆಕ್‍ಡ್ಯಾಂ ನಿರ್ಮಿಸಲಾಗುತ್ತಿದೆ.ಜಿಲ್ಲೆಯಲ್ಲಿ ಸಾಕಷ್ಟು ಹಳ್ಳ, ಕೊಳ್ಳಗಳಿದ್ದು, ಸಾಕಷ್ಟು ಚೆಕ್‍ಡ್ಯಾಂ ನಿರ್ಮಿಸಲು ಅವಕಾಶವಿದೆ.ಇದಕ್ಕೆ ಸಹಕಾರಿಯಾಗಲು ಸ್ಯಾಟಲೈಟ್ ಮ್ಯಾಪ್‍ಅನ್ನು ಸರ್ಕಾರದಿಂದ ಜಿಲ್ಲೆಗಳಿಗೆ ಒದಗಿಸಲಾಗಿದೆ.ಪ್ರತಿಗ್ರಾಮ ಪಂಚಾಯತ್‍ಗೆ ತಲಾ 10 ಚೆಕ್‍ಡ್ಯಾಂ ಗಳಂತೆ ಜಿಲ್ಲೆಯ 189 ಗ್ರಾಮ ಪಂಚಾಯತ್‍ಗಳಿಗೆ ಕನಿಷ್ಟವೆಂದರೂ 1500 ಚೆಕ್‍ಡ್ಯಾಂ / ಮಲ್ಟಿ ಆರ್ಚ್‍ಚೆಕ್‍ಡ್ಯಾಂ ನಿರ್ಮಿಸಲು 15 ದಿನಗಳ ಒಳಗಾಗಿ ಸ್ಥಳ ಗುರುತಿಸಬೇಕು.ಡಿಸೆಂಬರ್ ಒಳಗಾಗಿ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕು . ಜನವರಿ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭ ಮಾಡಿ, ಮಾರ್ಚ್ ಒಳಗಾಗಿ ಜಿಲ್ಲೆಯಲ್ಲಿ 1500 ಚೆಕ್‍ಡ್ಯಾಂಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲೇಬೇಕು. ಇದರಿಂದ ಜನ ಜಾನುವಾರುಗಳಿಗೆ ನೀರಿನ ತೊಂದರೆ ನೀಗಿ, ಅಂತರ್ಜಲ ಮಟ್ಟ ಸುಧಾರಣೆಗೊಳ್ಳಲಿದೆ . ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ತೋಟಗಾರಿಕೆ , ಕೃಷಿ ಇಲಾಖೆಗಳಿಂದ ಹೆಚ್ಚು, ಹೆಚ್ಚು ಮಾನವ ಸೃಜನೆ ಆಗಬೇಕು ಎಂದು ಸಚಿವ ಕೃಷ್ಣ ಭೈರೇಗೌಡಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಡಿಯುವ ನೀರಿಗೆ 123 ಕೋಟಿ :ಜಿಲ್ಲೆಯಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆಕುಡಿಯುವ ನೀರಿನತೊಂದರೆಉಂಟಾಗದಂತೆ, ಸಮರ್ಪಕ ನೀರು ಪೂರೈಕೆಗಾಗಿಯೋಜನೆ ಕೈಗೊಳ್ಳಲು ಈ ವರ್ಷ 123 ಕೋಟಿರೂ. ಒದಗಿಸಲಾಗಿದೆ.ಜಿಲ್ಲೆಗೆ 2013-14 ರಲ್ಲಿ 48 ಕೋಟಿ, 14-15 ರಲ್ಲಿ 51 ಕೋಟಿ, 15-16 ರಲ್ಲಿ 88 ಕೋಟಿ, 16-17 ರಲ್ಲಿ 104 ಕೋಟಿ, 17-18 ರಲ್ಲಿ 106 ಕೋಟಿರೂ. ಅನುದಾನ ಒದಗಿಸಿದ್ದರೂ, ಈ ವರ್ಷ ಮುಂದುವರೆದ ಕಾಮಗಾರಿಗಳಿಗಾಗಿಯೇ 78 ರೂ.ಅನುದಾನ ನಿಗದಿಪಡಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕ್ರಿಯಾಯೋಜನೆಯಂತೆಕಾಮಗಾರಿ ಕೈಗೊಳ್ಳದೆ, ವಿಳಂಬ ಮಾಡಿ, ಮುಂದುವರಿದ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡುತ್ತಿರುವುದು ಸರಿಯಲ್ಲ.ಡಿಸೆಂಬರ್ ಮೊದಲ ವಾರದ ಒಳಗಾಗಿ ಜಿಲ್ಲೆಯಎಲ್ಲಗ್ರಾಮೀಣಕುಡಿಯುವ ನೀರು ಯೋಜನೆಗಳಿಗೆ ಟೆಂಡರ್‍ಕರೆಯಬೇಕು.ಡಿಸೆಂಬರ್‍ಕೊನೆಯ ವಾರದೊಳಗೆ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ, ಕೂಡಲೆಕಾಮಗಾರಿ ಪ್ರಾರಂಭಿಸಬೇಕು.
2019 ರ ಮಾರ್ಚ್ ತಿಂಗಳ ಒಳಗಾಗಿ ಜಿಲ್ಲೆಯಎಲ್ಲಕುಡಿಯುವ ನೀರುಯೋಜನೆ ಕಾಮಗಾರಿಗಳು ಪೂರ್ಣಗೊಳ್ಳಬೇಕು.ಈ ಯೋಜನೆಗಳಡಿ ಯಾವುದೇ ಮುಂದುವರೆದಕಾಮಗಾರಿಯನ್ನಾಗಿ ಬಾಕಿ ಉಳಿಸುವಂತಿಲ್ಲ.ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಕುರಿತು ನಿಗಾ ವಹಿಸಬೇಕು ಎಂದು ಸಚಿವರುಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮ ಸ್ವಚ್ಛತೆಆಂದೋಲನವಾಗಲಿ :ಯಾವುದೇಗ್ರಾಮ ಪ್ರವೇಶಿಸಿದಾಗ, ಮೊದಲು ಕಾಣಸಿಗುವುದು ರಾಶಿ ರಾಶಿತ್ಯಾಜ್ಯ ಪ್ಲಾಸ್ಟಿಕ್‍ನಿಂದ ತುಂಬಿದತಿಪ್ಪೆ ಗುಂಡಿಗಳು, ಹಾಗೂ ಪ್ಲಾಸ್ಟಿಕ್ ತುಂಬಿಕೊಂಡು ನೀರು ಹರಿಯದೆರಸ್ತೆಗೆತುಂಬಿ ಹರಿಯುವ ಚರಂಡಿಗಳು. ಪರಿಸ್ಥಿತಿ ಹೀಗಿರುವಾಗ ಗ್ರಾಮಗಳು ಆರೋಗ್ಯಯುತವಾಗಿರಲು ಹೇಗೆ ಸಾಧ್ಯ.ರಾಜ್ಯದಲ್ಲಿ ಶೌಚಾಲಯವನ್ನು ನಿರ್ಮಿಸುವ ಕಾರ್ಯವನ್ನು ಆಂದೋಲನ ರೂಪದಲ್ಲಿ ಕೈಗೊಂಡು ಯಶಸ್ಸನ್ನು ಕಂಡಿದ್ದೇವೆ.
ಆದರೂ ಗ್ರಾಮಗಳು ಸ್ವಚ್ಛತೆಯನ್ನುರಾಜ್ಯದಲ್ಲಿ ಈಗಾಗಲೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.ಆದರೂ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಕಪ್‍ಗಳು, ಕವರ್‍ಗಳ ಬಳಕೆ ಹೆಚ್ಚಾಗಿದೆ.ಹೀಗಾಗಿ ಹಳ್ಳಿಗಳ ವಾತಾವರಣ ಕಲುಷಿತಗೊಳ್ಳುತ್ತಿದೆ. ಗ್ರಾಮಗಳಲ್ಲಿ ಸ್ವಚ್ಛತೆಯಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಗಳ ಸಭೆ ನಡೆಸಿ, ಗ್ರಾಮಗಳ ಸ್ವಚ್ಛತೆಯಲ್ಲಿಅವರ ಕರ್ತವ್ಯಗಳ ಕುರಿತುಅರಿವು ಮೂಡಿಸಬೇಕು.ಗ್ರಾಮ ಸ್ವಚ್ಛತೆಗೆಆಂದೋಲನ ರೂಪದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನರಲ್ಲಿಜಾಗೃತಿ ಮೂಡಿಸಬೇಕು.
ಈ ಕಾರ್ಯಕ್ಕೆಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳು, ಸ್ವಯಂ ಸೇವಾ ಸಂಸ್ಥೆಗಳು, ರೋಟರಿ ಕ್ಲಬ್‍ಗಳು, ಮಠಾಧೀಶರುಗಳ ಸಹಕಾರ ಪಡೆಯುವಂತೆ ಸಚಿವರು ಸಲಹೆ ನೀಡಿದರು.ಇದಕ್ಕೆ ದನಿಗೂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್‍ಅವರು, ಜಿ.ಪಂ., ತಾ.ಪಂ. ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು ಕೇವಲ ಕಾಮಗಾರಿಗಳಿಗೆ ಅನುದಾನ ಪಡೆಯುವ ಬಗ್ಗೆ ಅಷ್ಟೇ ಸಭೆಗಳಲ್ಲಿ ಚರ್ಚಿಸುವುದಲ್ಲ, ಗ್ರಾಮಗಳ ಸ್ವಚ್ಛತೆಕೂಡತಮ್ಮಕರ್ತವ್ಯಎಂಬುದನ್ನು ಮನಗಾಣಬೇಕುಎಂದರು.
ಮರಳಿನ ಸಮಸ್ಯೆ ಪರಿಹರಿಸಲುಕ್ರಮ:ಜಿಲ್ಲೆಯಲ್ಲಿ ಸ್ವಚ್ಛ ಭಾರತಅಭಿಯಾನದಡಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗುವತ್ತದಾಪುಗಾಲುಇಡುತ್ತಿದೆ. ಆದರೆ 3.70 ಕೋಟಿರೂ.ಅನುದಾನ ಲಭ್ಯವಿದ್ದರೂ ಶೌಚಾಲಯ ಬಿಲ್ ಪಾವತಿಯಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಸಚಿವರು ಪ್ರಶ್ನಿಸಿದರು. ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವವರಿಗೆ ಮಾತ್ರ ಬಿಲ್ ಪಾವತಿಸಲಾಗುತ್ತಿದೆಎಂದು ಅಧಿಕಾರಿಗಳು ಉತ್ತರಿಸಿದರು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‍ಅವರು ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರು ಮರಳಿನ ಕೊರತೆಎದುರಿಸುತ್ತಿದ್ದಾರೆ.
ಅಮಾಯಕರ ಮೇಲೆ ದೂರುದಾಖಲಾಗುತ್ತಿದೆ.ಹೀಗಾಗಿ ಶೌಚಾಲಯ ನಿರ್ಮಾಣಕ್ಕೆ ಹಿನ್ನಡೆಯಾಗುತ್ತಿದೆಎಂದರು.ಸರ್ಕಾರದಿಂದ ಕೈಗೊಳ್ಳುವ ಕಾಮಗಾರಿಗಳಿಗೆ, ಶೌಚಾಲಯ ಕಾಮಗಾರಿಗಳಿಗೆ ಸ್ಥಳೀಯವಾಗಿ ಮರಳಿನ ತೊಂದರೆಯಾಗದಂತೆ, ಕೂಡಲೆ ಸಮಸ್ಯೆ ಪರಿಹರಿಸಬೇಕುಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಬಿ.ಎನ್. ಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಸದುರ್ಗ ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ವಿಧಾನಪರಿಷತ್ ಸದಸ್ಯಜಯಮ್ಮ ಬಾಲರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿಲ್ಲಾಧಿಕಾರಿಆರ್.ಗಿರೀಶ್, ಜಿ.ಪಂ. ಉಪಾಧ್ಯಕ್ಷೆ ಸುಶೀಲಮ್ಮ, ಜಿ.ಪಂ. ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪಿ.ಎನ್. ರವೀಂದ್ರ ಸೇರಿದಂತೆಜಿಲ್ಲಾ ಪಂಚಾಯತ್ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ