ಸದಾಶಿವ ಆಯೋಗದ ವರದಿ ಜಾರಿಗೆ ಬಂಜಾರ ವಿರೋಧ

ಚಳ್ಳಕೆರೆ

ಆಯೋಗದ ವರದಿಯನ್ನು ಜಾರಿಗೆ ತರುವ ಉದ್ದೇಶವನ್ನು ಸರ್ಕಾರ ಕೈಬಿಡಬೇಕು. ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಗೊಳಿಸದಂತೆ ಸರ್ಕಾರ ಜಾಗ್ರತೆ ವಹಿಸಬೇಕು, ಪರಿಶಿಷ್ಟ ಸಮುದಾಯದ ಮೀಸಲಾತಿಯಲ್ಲಿರುವ ಬಂಜಾರ, ಬೋವಿ, ಕೊರಮ, ಕೊರಚ, ಛಲವಾದಿ ಮುಂತಾದ ಸಮುದಾಯಗಳಿಗೆ ಇದರಿಂದ ಅನ್ಯಾಯವಾಗಲಿದ್ದು, ಈ ಬಗ್ಗೆ ಸರ್ಕಾರ ಜಾಗ್ರತೆ ವಹಿಸಬೇಕೆಂದು ಸೇವಾಲಾಲ್ ಬಂಜಾರ ಕ್ಷೇಮಾಭಿವೃದ್ಧಿ ಸಂಘ ಮಾನ್ಯ ಮುಖ್ಯಮಂಯತ್ರಿಗಳಿಗೆ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಸದಾ ಶಿವ ಆಯೋಗದ ವರದಿ ಜಾರಿಯಿಂದ ಶೋಷಣೆಗೆ ಒಳಗಾದ ದಲಿತ ಸಮುದಾಯ ಹೆಚ್ಚು ಪ್ರಯೋಜನವನ್ನು ಪಡೆಯಲಿದೆ. ಆದರೆ, ಉಳಿದ ಸಮುದಾಯಗಳು ಸದಾಶಿವ ಆಯೋಗದ ವರದಿ ಜಾರಿಗೆ ತಂದಲ್ಲಿ ಸಂಕಷ್ಟಕ್ಕೆ ಸಿಲುಕಲಿವೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಸ್ಪಂದಿಸಬೇಕು. ವರದಿ ಜಾರಿ ಮಾಡದಂತೆ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆ ನಡೆಸಿ ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ಧಾರ್ ಎನ್.ರಘುಮೂರ್ತಿ, ಜಿಲ್ಲಾಧಿಕಾರಿಗಳಮೂಲಕ ತಮ್ಮ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವ ಭರವಸೆ ನೀಡಿದರು.
ಕುರುಡಿಹಳ್ಳಿ ಬಾಬಾಜಿ ಸೇವಾಶ್ರಮದ ಶಿವಸಾಧು ಸ್ವಾಮೀಜಿ, ರಾಜಯೋಗ ವಿದ್ಯಾಶ್ರಮದ ಶ್ರೀದೇನಭಗತ್ ಸ್ವಾಮೀಜಿ, ಸಂಘದ ಕಾರ್ಯದರ್ಶಿ ಎಸ್.ಗೋವಿಂದನಾಯ್ಕ, ರಾಜನಾಯ್ಕ, ಗೋಪಾಲನಾಯ್ಕ, ಚಂದ್ರಶೇಖರ್‍ನಾಯ್ಕ, ಅಶೋಕ್, ಶಂಕರ್, ಭದ್ರಿ, ರವಿಕುಮಾರ್, ಹನುಮನಾಯ್ಕ, ಪುರ್ಯನಾಯ್ಕ, ಆನಂದನಾಯ್ಕ, ತೋಳಚೆನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link