ಬಿಲ್ಡರ್ಸ್ ಗಳಿಂದ ಬಿಬಿಎಂಪಿಗೆ 99 ಲಕ್ಷ ವಂಚನೆ..!!

ಬೆಂಗಳೂರು

     ನಗರದ ಬಿಲ್ಡರ್ಸ್ ಗಳು ನಕಲಿ ಸ್ವಾಧೀನಪತ್ರ ವಿತರಿಸಿ ಪಾಲಿಕೆಗೆ 99 ಲಕ್ಷ ವಂಚನೆ ಮಾಡಿದ್ದ ಪ್ರಕರಣ ದಾಖಲಿಸಿರುವ ಹಲಸೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

     ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮತ್ತು ಇಬ್ಬರು ಖಾಸಗಿ ಬಿಲ್ಡರ್ಸ್ ಗಳು ಪಾಲಿಕೆಗೆ 99.27 ಲಕ್ಷ ರೂ.ಗಳನ್ನು ವಂಚಿಸಿದ ಪ್ರಕರಣದ ಎಫ್‍ಐಆರ್ ಕೂಡ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ

ಕಲ್ಯಾಣ್ ಬಿಲ್ಡರ್ಸ್ ಮತ್ತು ಡೆವಲಪರ್ಸ್, ಪ್ರೈವೇಟ್ ಲಿಮಿಟೆಡ್ ಮತ್ತು ತಹಸೀನಾ ಎ.ಆರ್.ಎ., ಜಿಪಿಎ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಂಪನಿಗಳು, ತನಿಸಂದ್ರದಲ್ಲಿ 600 ಪ್ಲಾಟ್ ಉಳ್ಳ ಅಪಾರ್‍ಮೆಂಟ್‍ಅನ್ನು ನಿರ್ಮಿಸಿದ್ದರು. ಬಿಲ್ಡರ್ಸ್ ಗಳು ಬಿಬಿಎಂಪಿಯ ಟೌನ್ ಪ್ಲಾನಿಂಗ್ ವಿಭಾಗದಿಂದ ಸ್ವಾಧೀನ ಪತ್ರವನ್ನು ಪಡೆದುಕೊಂಡಿರಲಿಲ್ಲ. ಆದರೆ 160 ಮಂದಿ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಬಿಲ್ಡರ್ಸ್ ಗಳು ಗ್ರಾಹಕರಿಗೆ ವಂಚನೆ ಮಾಡಿದ್ದಾರೆ. ಬಿಬಿಎಂಪಿಗೆ 99.27 ಲಕ್ಷ ಹಣ ಕಟ್ಟಿ ಸ್ವಾಧೀನ ಪತ್ರವನ್ನು ಪಡೆಯಲಾಗಿದೆ ಎಂದು ಬಿಲ್ಡರ್ಸ್ ಗಳು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ಬಿಬಿಎಂಪಿ ಈವರೆಗೂ ಈ ಮೊತ್ತಕ್ಕೆ ಸರಿಸಮಾನಾಗಿ ಡಿಡಿಯನ್ನು ಪಡೆದಿಲ್ಲ.

     ಥಣಿಸಂದ್ರದಲ್ಲಿ ಸರ್ವೆ ನಂ. 202/78 ರಲ್ಲಿ ಕಲ್ಯಾಣ ಬಿಲ್ಡರ್ಸ್ ಅವರು ಬಹುಪಯೋಗಿ ಅಪಾರ್ಟ್‍ಮೆಂಟ್‍ಅನ್ನು ಕಟ್ಟಿದ್ದಾರೆ. ಬಿಬಿಎಂಪಿ ತಹಸೀನಾ ಎ.ಆರ್.ಎ.ಕಲ್ಯಾಣ್ ಬಿಲ್ಡರ್ಸ್ ಹೆಸರಿನಲ್ಲಿ ಸ್ವಾಧೀನ ಪತ್ರ ಪಡೆದಿದ್ದಾರೆ. ಇದೇ ದಾಖಲೆಯನ್ನು ಬೆಸ್ಕಾಂ ಸಂಸ್ಥೆಗೂ ನೀಡಲಾಗಿದೆ. 2018 ಜೂನ್ 5 ರಂದು 99.27 ಲಕ್ಷ ರೂ. ಮೌಲ್ಯದ ಡಿಡಿಯನ್ನು ನೀಡಲಾಗಿದೆ ಎಂದು ಬಿಲ್ಡರ್ಸ್ ಗಳು ಹೇಳಿದ್ದಾರೆ ಎಂದು ಸಾಯಿದತ್ತ ದೂರಿದ್ದಾರೆ.

      ಬಿಬಿಎಂಪಿ ಟೌನ್ ಪ್ಲಾನಿಂಗ್ ಅಧಿಕಾರಿಗಳು ಬಿಲ್ಡರ್ಸ್ಗಳಿಗೆ 99.27 ಲಕ್ಷ ರೂ. ಮೌಲ್ಯದ ನಕಲಿ ಸ್ವಾಧೀನಪತ್ರವನ್ನು ನೀಡಲು ಬಿಲ್ಡರ್ಸ್ಗಳಿಗೆ ಸಹಕರಿಸಿದ್ದಾರೆ. ಹಾಗಾಗಿ ಬಿಲ್ಡರ್ಸ್ಗಳು ಮತ್ತು ಟೌನ್ ಪ್ಲಾನಿಂಗ್ ಅಧಿಕಾರಿಗಳ ವಿರುದ್ಧ ಹಲಸೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link