ಗುತ್ತಲ:
ಗುತ್ತಲ ಪಟ್ಟಣದಿಂದ ಕುರಗೂಂದ ಮಾರ್ಗವಾಗಿ ಹಾವೇರಿಗೆ ತೆರಳುವ ಸಾರಿಗೆ ಸಂಸ್ಥೆಯ ಬಸ್ಸೊಂದು ಸಮೀಪದ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ರಸ್ತೆ ಪಕ್ಕಕ್ಕೆ ಉರುಳಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.ಘಟನೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ಸಂಭವಿಸಿಲ್ಲಾ.
ಬಸ್ಸು ನಿಧಾನವಾಗಿ ಚಲಿಸುತ್ತಿರುವ ಕಾರಣ ಬಸ್ಸ್ ರಸ್ತೆಯ ಪಕ್ಕಕ್ಕೆ ಉರುಳಿದರು ಬಸ್ಸ್‍ನಲ್ಲಿ ಪ್ರಯಾಣಿಸುತ್ತಿರು ಪ್ರಯಾಣಿಕರಿಗೆ ಯಾವುದೆ ರೀತಿಯ ಗಾಯಗಳು ಕೂಡಾ ಸಂಭವಿಸಿಲ್ಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಹಾಗೂ ಚಾಲಕ ನಿರ್ವಾಹಕರಿಗೂ ಯಾವುದೇ ತೊಂದರೆಯಲ್ಲದೆ ಆರೋಗ್ಯವಾಗಿದ್ದಾರೆ. ಬಸ್ಸ್ ರಸ್ತೆ ಪಕ್ಕೆಕ್ಕೆ ಉರುಳಿರುವುದಕ್ಕೆ ಯಾವುದೆ ಕಾರಣ ತಿಳಿದು ಬಂದಿಲ್ಲಾ. ಈ ಕುರಿತು ಯಾವುದೆ ರೀತಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
