ಸಿ.ವಿಜಿಲ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಕಾರ್ಯಗಾರ

ಸಿರುಗುಪ್ಪ:

     ಸಿ-ವಿಜಿಲ್ ಆ್ಯಪ್‍ನ್ನು ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದ್ದು, ಆ್ಯಪ್‍ನ್ನು ಅಳವಡಿಸಿಕೊಳ್ಳುವಾಗ ತಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಹಾಗೂ ನೀಡದೇ ಇರುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದ್ದು, ತಾವು ನೀಡುವ ಮಾಹಿತಿಯ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ಹಾಗೂ ಸಂಬಂಧಿಸಿದವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ತಿಳಿಸಿದರು

     ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಿ.ವಿಜಿಲ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಮತದಾನ ಮಾಡುವುದು ಹೇಗೆ ಕಡ್ಡಾಯವಾಗಿದೆಯೋ, ಅದೇ ರೀತಿ ಮುಕ್ತ ನಿರ್ಭೀತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ನಡೆಯುವಂತೆ ನೋಡಿಕೊಳ್ಳುವುದು ಕೂಡ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ

     ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳು ಮತದಾನ ಮಾಡುವಂತೆ ಮತದಾರರನ್ನು ಓಲೈಸುವುದಕ್ಕಾಗಿ ಮದ್ಯ, ಹಣ ಸೇರಿದಂತೆ ಉಡುಗೋರೆ ರೂಪದಲ್ಲಿ ಸೀರೆ, ವಸ್ತು, ಆಭರಣಗಳನ್ನು ಹಂಚುವುದು ಕಂಡುಬಂದಲ್ಲಿ ನಾಗರೀಕರು ತಮ್ಮ ಮೊಬೈಲ್‍ಗಳಲ್ಲಿ ಸಿ-ವಿಜಿಲ್ ಆ್ಯಪ್‍ನ್ನು ಅಳವಡಿಸಿಕೊಂಡು ದೃಶ್ಯ ಹಾಗೂ ಚಿತ್ರ ರೂಪದಲ್ಲಿ ಧಾಖಲಿಸಿ ದೂರನ್ನು ನೀಡುವ ಸೌಲಭ್ಯವನ್ನು ಕಲ್ಪಿಸಿದೆ

       ತಾವು ನೀಡಿದ ದೂರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ತಲುಪಿ ಅವರು ತಕ್ಷಣ ಸಂಬಂಧಪಟ್ಟ ಪ್ರದೇಶದ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದು, 15ನಿಮಿಷಗಳ ಒಳಗಾಗಿ ಸಂಬಂಧಿಸಿದ ಕೃತ್ಯ ನಡೆಸಿದವರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ತಾ.ಪಂ.ಇ.ಒ. ಶಿವಪ್ಪ ಸುಬೇದಾರ್ ಮಾತನಾಡಿ ತಾಲೂಕಿನಲ್ಲಿ ಬರಗಾಲ ಇರುವುದರಿಂದ ಬಹಳ ಸಂಖ್ಯೆಯಲ್ಲಿ ಗ್ರಾಮಗಳಿಂದ ನಗರಗಳಿಗೆ ಜನರು ವಲಸೆ ಹೋಗಿದ್ದು, ವಲಸೆ ಹೋಗುವುದನ್ನು ತಪ್ಪಿಸಲು ಜಿಲ್ಲಾ ಪಂಚಾಯತ್ ಸಿ.ಇ.ಒ. ರವರ ಮಾರ್ಗದರ್ಶನದಲ್ಲಿ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಕೂಲಿ ಕೆಲಸವನ್ನು ನೀಡುವುದಕ್ಕೆ ಕ್ರಿಯಾಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿ ಕೂಲಿ ಕೆಲಸವನ್ನು ಪಡೆಯಬಹುದಾಗಿದ್ದು, ಮಹಿಳೆಯರಿಗೂ ಪುರಷರ ಸಮಾನವಾಗಿ ಕೂಲಿಯನ್ನು ನೀಡಲಾಗುವುದು ಎಂದು ತಿಳಿಸಿದರು.ತಹಶೀಲ್ದಾರ್ ದಯಾನಂದ್ ಪಾಟೀಲ್ ಮತದಾನದ ಕುರಿತು ಪ್ರಮಾಣ ವಚನವನ್ನು ಭೋದಿಸಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link