ಬೆಂಗಳೂರು
ಕನ್ನಡಿಗೆ ತಾಗಿ ಮುಂದೆ ಹೋದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕ್ಯಾಬ್ ಚಾಲಕನೊಬ್ಬ ಸುಮಾರು ಏಳು ಕೀ.ಮೀವರೆಗೂ ಕಾರು ಚಲಾಯಿಸುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಸೋಮವಾರ(ಡಿ.4ರಂದು)ಖಾಸಗಿ ಕಂಪನಿ ಉದ್ಯೋಗಿ ಸಿಂಧು (ಹೆಸರು ಬದಲಿಸಲಾಗಿದೆ) ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಚೇರಿಗೆ ಹೋಗುವಾಗ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಅವರು ಚಲಾಯಿಸುತ್ತಿದ್ದ ಕಾರು ಮತ್ತೊಂದು ಆರೋಪಿಯ ಕ್ಯಾಬ್‍ನ ಮೀರರ್‍ಗೆ ತಾಗಿದೆ.
ಇದರಿಂದ ಆಕ್ರೋಶಗೊಂಡ ಕಾರ್ ಚಾಲಕ ಯುವತಿಗೆ ಮನಬಂದಂತೆ ಬೈದಿದ್ದಾನೆ.ಇಷ್ಟಕ್ಕೆ ಸಮಾಧಾನಗೊಳ್ಳದ ಕ್ಯಾಬ್ ಡ್ರೈವರ್ ಯುವತಿ ಕಾರನ್ನು ಸಿಲ್ಕ್ ಬೋರ್ಡ್ ಮೇಲ್ಸೇತುವೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ.
ಕ್ಯಾಬ್ ಡ್ರೈವರ್ ವರ್ತನೆಯಿಂದ ಭಯಗೊಂಡ ಯುವತಿ ಕಾರಿನಿಂದ ಹೊರಗಿಳಿಯದೆ, ಸಿಗ್ನಲ್ ಬಿಟ್ಟ ನಂತರ ತನ್ನ ಕಾರನ್ನ ಸಿಲ್ಕ್ ಬೊರ್ಡ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ನತ್ತ ಚಲಾಯಿಸಿದ್ದಾರೆ. ಅತಿವೇಗವಾಗಿ ಮೂಲಕ ರಸ್ತೆಯಲ್ಲಿ ಮೂರು ಬಾರಿ ಯುವತಿಯ ಕಾರನ್ನು ಅಡ್ಡಗಟ್ಟಿ ಕ್ಯಾಬ್ ಡ್ರೈವರ್ ವಿಕೃತಿ ಮೆರೆದಿದ್ದಾನೆ.
ವಾಸ್ತವವಾಗಿ ಘಟನೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಯುವತಿಯ ಕಾರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಯುವತಿ ಬೆಂಗಳೂರು ಪೊಲೀಸ್ ಸಿಟಿ ಫೇಸ್ ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








