ಬೆಂಗಳೂರು
ಹಿಂದಿನಿಂದ ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಕೆಂಗೇರಿಯ ಆರ್‍ಎನ್‍ಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿಜಯನಗರದ ಪೂರ್ಣಚಂದ್ರ (16) ಎಂದು ಮೃತಪಟ್ಟ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ.
ಪೂರ್ಣಚಂದ್ರ, ಸ್ನೇಹಿತರ ಜತೆ ಬೆಳಿಗ್ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಾಯುವಿಹಾರಕ್ಕೆ ಹೋಗಿದ್ದನು .ವಾಯುವಿಹಾರ ಮುಗಿಸಿದ ನಂತರ, ಸ್ನೇಹಿತರೆಲ್ಲರೂ ಉಪಹಾರಕ್ಕೆ ಹೊರಟಿದ್ದು, ಎಲ್ಲರೂ ಮಾತನಾಡಿಕೊಂಡು ಬಿಡದಿಗೆ ಹೋಗಿ ತಟ್ಟೆಇಡ್ಲಿ ಸೇವಿಸಿ ಬರಲು ಹೊರಟಿದ್ದಾರೆ. ಅಲ್ಲಿಂದ ಬೆಳಿಗ್ಗೆ 7.30ರ ವೇಳೆ ಅವರವರ ಪ್ರತ್ಯೇಕ ಬೈಕ್‍ಗಳಲ್ಲಿ ಹೊರಟಿದ್ದು, ಪೂರ್ಣಚಂದ್ರ ಕೂಡ ತಮ್ಮ ಬೈಕ್‍ನಲ್ಲಿ ಸ್ನೇಹಿತರನ್ನು ಹಿಂಬಾಲಿಸಿದ್ದಾನೆ.
ಪೂರ್ಣಚಂದ್ರ ಬಿಡದಿ ಕಡೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕೆಂಗೇರಿಯ ಮೈಸೂರು ರಸ್ತೆಯ ನೈಸ್ ರಸ್ತೆ ಬಳಿ ಹಿಂದಿನಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದಿದೆ.ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪೂರ್ಣಚಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
