ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ..!

ಬೆಂಗಳೂರು

    ಉಪ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿತ್ತು.ಅದರೆ ಧನುರ್​ ಮಾಸ, ಬಳಿಕ ಸಂಕ್ರಾಂತಿ ಹಬ್ಬ ಕಳೆಯಲಿ ಎನ್ನುವ ಮೂಲಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸಂಪುಟ ವಿಸ್ತರಣೆಯನ್ನು ಮುಂದೂಡಿದ್ದರು.
    
    ಪಕ್ಷದ ಹೈಕಮಾಂಡ್ ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮೋದನೆ ಪಡೆಯುತ್ತೇನೆಂದು ಕೊಂಡಿದ್ದ ಮುಖ್ಯಮಂತ್ರಿಗೆ ಬಿಜೆಪಿ ಹೈಕಮಾಂಡ್ ಸಮಾಯಾವಕಾಶ ನೀಡಲಿಲ್ಲ.ಬಳಿಕ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನಕ್ಕಾಗಿ ಸ್ವಿಟ್ಜರ್​ಲೆಂಡ್​ಗೆ ಯಡಿಯೂರಪ್ಪ ತೆರಳಿದರು.ಶುಕ್ರವಾರ ಬಿಎಸ್​ವೈ ರಾಜ್ಯಕ್ಕೆ ವಾಪಸಾಗಿದ್ದಾರಾದರೂ ಸಂಪುಟ ವಿಸ್ತರಣೆಯ ಸುಳಿವು ಸದ್ಯಂತಕ್ಕೂ ಕಾಣುತ್ತಿಲ್ಲ.

   ನಾಳೆ ದೆಹಲಿಗೆ ತೆರಳಿದ ಪಕ್ಷದ ಹೈಕಮಾಂಡ್ ಅನುಮತಿ ಪಡೆದು ಸಂಪುಟ ವಿಸ್ತರಣೆ ಮಾಡುತ್ತೇನೆಂದು ದಾವೂಸ್ ಪ್ರವಾಸ ದಿಂದ ಬೆಂಗಳೂರಿಗೆ ಆಗಮಿಸಿದಾಗ ಹೇಳಿಕೆಯನ್ನು ಮುಖ್ಯಮಂತ್ರಿ ನೀಡಿದ್ದರು.ಆದರೆ ಈಗ ಮೂರು ದಿನಗಳ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಗಾಗಿ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
    
   ಮೈಸೂರಿನ ಸುತ್ತೂರು ಮಠದ ಜಾತ್ರಾಮಹೋತ್ಸವ ಕಾರ್ಯಕ್ರಮ,ಹಾಸನ ಹಾಗೂ ಮಡಿಕೇರಿ ಪ್ರವಾಸ ಕೈಗೊಳ್ಳುವ ಮೂಲಕ ದೆಹಲಿಗೆ ತೆರಳುವ ಕಾರ್ಯಕ್ರಮಗಳನ್ನು ಮುಂದೂಡಿದ್ದು ಸಚಿವ ಸಂಪುಟ ವಿಸ್ತರಣೆಯಾಗುತ್ತದೆಂದು ಕಾತರಗೊಂಡಿದ್ದ ಶಾಸಕರಲ್ಲಿ ಮತ್ತಷ್ಟು ಆತಂಕವನ್ನು ತಂದೊಡ್ಡಿದಾರೆ.

   ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಇಂದು,ನಾಳೆ,ಮುಂದಿನ ವಾರ ಎನ್ನುತ್ತಾ ಮುಂದಕ್ಕೆ ಹೋಗುತ್ತಿದೆ.ಸಂಪುಟ ವಿಸ್ತರಣೆ ಕುರಿತು ಎರಡು ಬಾರಿ ಹೈ ಕಮಾಂಡ್​ ಭೇಟಿಗೆ ಮುಖ್ಯಮಂತ್ರ ಮುಂದಾದರೂ ಫಲಪ್ರದವಾಗಿಲ್ಲ.ಇನ್ನು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಬಂದಾಗಲೂ ಈ ಕುರಿತು ಚರ್ಚೆಗೆ ಅವಕಾಶ ಸಿಗಲಿಲ್ಲ.ಇದಾದ ಬಳಿಕ ದಾವೋಸ್​ ಪ್ರಯಾಣ ಕೈಗೊಂಡಿದ್ದ ಸಿಎಂ ಶುಕ್ರವಾರ ರಾಜಧಾನಿಗೆ ಮರಳಿದ್ದಾರೆ.

   ಇನ್ನು ಸೋಮವಾರ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ದೆಹಲಿ ಭೇಟಿಯೂ ಇದುವರೆಗೂ ಖಚಿತವಾಗಿಲ್ಲ. ದೆಹಲಿಗೆ ಹೋಗದೇ ರಾಜ್ಯದಲ್ಲೇ ಇರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಸಂಪುಟ ಕಾರ್ಯ ಇನ್ನಷ್ಟ ವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
    
  ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಹಾಗು ಸೋತ ಶಾಸಕರು,ಚುನಾವಣೆ ಯಲ್ಲಿ ಸ್ಪರ್ಧಿಸದಿರುವ ಶಾಸಕರಲ್ಲಿ ಭಿನ್ನಾಭಿಪ್ರಾಯ ಕೇಳಿ ಬಂದಿದೆ.ಗೆದ್ದ ಶಾಸಕರು ತಮಗೆ ಸಚಿವ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿದ್ದರೆ,ಚುನಾವಣೆ ಯಲ್ಲಿ ಸೋತ ಶಾಸಕರನ್ನು ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ವಿಳಂಬ ಬೇಡವೆಂದು ಹೇಳಿದ್ದಾರೆ.ಅಲ್ಲದೆ ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎನ್ನುವ ಮೂಲಕ ತಮ್ಮಲ್ಲಿ ಒಗ್ಗಟ್ಟಿಲ್ಲವೆಂಬ ಸಂದೇಶ ರವಾನಿಸಿದ್ದಾರೆ.
    
  ಮತ್ತೊಂದೆಡೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೆ ಇರುವ ಆರ್.ಶಂಕರ್,ಮುನಿರತ್ನಾ,ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನವೇ ಇಲ್ಲ ಸಚಿವ ಸ್ಥಾನ ಹೇಗೆ ನೀಡುತ್ತಾರೆ ಎಂಬ ಗೊಂದಲಕ್ಕೆ ಸಿಲುಕಿದಿದ್ದಾರೆ.ಗೆದ್ದ ಶಾಸಕರು,ಸೋತ ಶಾಸಕರು,ಅನರ್ಹರ ನಡುವೆಯೇ ಈಗ ಭಿನ್ನಾಭಿಪ್ರಾಯ ಕಂಡುಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನಿಗೆ ಮತ್ತಷ್ಟು ಪೀಟಲಾಟ ತಂದಿಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link